ಬೆಂಗಳೂರು (ಏ.03):  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಆರೋಗ್ಯ ಸ್ಥಿರವಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮಣಿಪಾಲ ಆಸ್ಪತ್ರೆಯ ಆರೋಗ್ಯ ಬುಲೆಟಿನ್‌ ಮಾಹಿತಿ ನೀಡಿದೆ.

ಮಾರ್ಚ್ 31ರಂದು ದೇವೇಗೌಡ ಮತ್ತವರ ಪತ್ನಿ ಚೆನ್ನಮ್ಮ ಅವರಿಗೆ ಕೋವಿಡ್‌ ಸೋಂಕಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಿದಾಗ ದೇವೇಗೌಡರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ ಚೆನ್ನಮ್ಮ ಅವರಲ್ಲಿ ಸೋಂಕಿರುವುದು ಧೃಢಪಟ್ಟಿತ್ತು. ಆದರೆ ಎದೆಯ ಸಮಸ್ಯೆ ಮತ್ತು ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯಲು ದೇವೇಗೌಡ ಆಸ್ಪತ್ರೆಗೆ ದಾಖಲಾಗಿದ್ದರು.

ದೇವೇಗೌಡರಿಗೆ ಕೋವಿಡ್‌ ನೆಗೆಟಿವ್‌ : ಎದೆಯಲ್ಲಿ ಸಮಸ್ಯೆ ..

ಗುರುವಾರ ದೇವೇಗೌಡರಲ್ಲಿ ತುಸು ಉಸಿರಾಟದ ಸಮಸ್ಯೆ ಕಂಡುಬಂದಿದ್ದು, ಉಳಿದಂತೆ ಆರೋಗ್ಯ ಸ್ಥಿರವಾಗಿತ್ತು. ಶುಕ್ರವಾರದ ಮಾಹಿತಿಯಂತೆ ಅವರು ಲವಲವಿಕೆಯಿಂದ ಇದ್ದು, ಆರೋಗ್ಯ ಸ್ಥಿರವಾಗಿದೆ. ಜ್ವರವೂ ಇಲ್ಲ. ಆರೋಗ್ಯ ಸ್ಥಿತಿಗತಿಯನ್ನು ಪರಿಶೀಲಿಸಿ ಅವರನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಮಣಿಪಾಲ ಆಸ್ಪತ್ರೆ ತಿಳಿಸಿದೆ.