ಲೈಂಗಿಕ ದೌರ್ಜನ್ಯ ಪ್ರಕರಣ: ಎಸ್‌ಐಟಿ ವಿಚಾರಣೆಗೆ ಪ್ರಜ್ವಲ್ ರೇವಣ್ಣ ಅಸಹಕಾರ
ನನ್ನ ವಿರುದ್ಧ ರಾಜಕೀಯ ಪಿತೂರಿಯಿಂದ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾಲ್ಕು ವರ್ಷಗಳ ಬಳಿಕ ಅತ್ಯಾಚಾರ ದೂರು ಕೊಡಲು ಹಿಂದಿರುವ ಕಾರಣ ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಪ್ರಜ್ವಲ್ ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಬೆಂಗಳೂರು(ಜೂ.02): ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಬಂಧಿತ ರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರವರು ವಿಶೇಷ ತನಿಖಾ ದಳ (ಎಸ್‌ಐಟಿ)ದ ವಿಚಾರಣೆಗೆ ಅಸಹಕಾರ ತೋರಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ಬಂಧನದಲ್ಲಿಟ್ಟು ಪ್ರಜ್ವಲ್ ಅವರನ್ನು ಎಸ್‌ಐಟಿ ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ಆದರೆ ತಮ್ಮ ಮೇಲಿನ ಅತ್ಯಾಚಾರ ಆರೋಪಗಳನ್ನು ಅವರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ನನ್ನ ವಿರುದ್ಧ ರಾಜಕೀಯ ಪಿತೂರಿಯಿಂದ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾಲ್ಕು ವರ್ಷಗಳ ಬಳಿಕ ಅತ್ಯಾಚಾರ ದೂರು ಕೊಡಲು ಹಿಂದಿರುವ ಕಾರಣ ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಪ್ರಜ್ವಲ್ ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಸೋಲು, ಕಾಪ್ಸ್ ಸಮೀಕ್ಷೆ
ನಮ್ಮ ಮನೆಯಲ್ಲಿ ಹಲವು ಮಂದಿ ಕೆಲಸ ಮಾಡುತ್ತಿದ್ದರು. ನನಗೆ ಆ ಕೆಲಸಗಾರರ ಬಗ್ಗೆ ಮಾಹಿತಿ ಗೊತ್ತಿಲ್ಲ. ತಿರುಚಿದ ವಿಡಿಯೋಗಳನ್ನು ಹರಿ ಬಿಟ್ಟು ತೇಜೋವಧೆ ಮಾಡಿದ್ದಾರೆ. ಈ ವಿಡಿಯೋಗಳ ಹಿಂದಿರುವ ಕಾರ್ತಿಕ್ ಸೇರಿ ಇತರರನ್ನು ಬಂಧಿಸಿ ವಿಚಾರಿಸಿದರೆ ಸತ್ಯ ಗೊತ್ತಾಲಿದೆ ಎಂದಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್‌ರನ್ನು 6 ದಿನಗಳು ವಿಚಾರಣೆ ಸಲು ವಾಗಿ ಎಸ್‌ಐಟಿ ವಶಕ್ಕೆ ಪಡೆದಿದ್ದು, ಮೊದಲ ದಿನದ ವಿಚಾರಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅವರು ಸಹಕರಿಸಿಲ್ಲ ಎಂದು ತಿಳಿದುಬಂದಿದೆ. ಎರಡು ದಿನಗಳ ವಿಚಾರಣೆ ಬಳಿಕ ಅವರನ್ನು ಘಟನಾ ಸ್ಥಳಗಳ ಮಹಜರ್‌ಸಲುವಾಗಿ ಹಾಸನಕ್ಕೆ ಕರೆದೊಯ್ಯುಲು ಅಧಿಕಾರಿಗಳು ಮುಂದಾಗಿದ್ದಾರೆ.
ಮೊಬೈಲ್ ಕಳುವಾಗಿದೆ: ಪ್ರಜ್ವಲ್
ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾದ ಪ್ರಜ್ವಲ್ ಮೊಬೈಲ್ ಪತ್ತೆ ಎಸ್‌ಐಟಿಗೆ ಸವಾಲಾಗಿದೆ. ಈ ಮೊಬೈಲ್ ಕುರಿತು ಪ್ರಶ್ನೆಗೆ ಅವರು ಸರಿಯಾದ ಉತ್ತರ ನೀಡದೆ ಜಾರಿಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ನನ್ನ ಬಳಿ ಇದ್ದ ಮೊಬೈಲ್ ಶೈಲ್ ಅನ್ನು ಏರ್‌ಪೋರ್ಟ್‌ನಲ್ಲೇ ಅಧಿಕಾರಿ ಗಳಿಗೆ ಕೊಟ್ಟಿದ್ದೇನೆ. ಆ ಮೊಬೈಲ್ ಹೊರತುಪಡಿಸಿದರೆ ನನ್ನ ಬಳಿ ಯಾವುದೇ ಮೊಬೈಲ್ ಇಲ್ಲ ಎಂದು ಪ್ರಜ್ವಲ್ ಹೇಳಿರುವುದಾಗಿ ತಿಳಿದು ಬಂದಿದೆ.
ಇನ್ನು ವರ್ಷದ ಹಿಂದೆಯೇ ನನ್ನ ಮೊಬೈಲ್‌ವೊಂದು ಕಳವಾದ ಬಗ್ಗೆ ಹಾಸನ ಪೊಲೀಸರಿಗೆ ನನ್ನ ಆಪ್ತ ಸಹಾಯಕ ದೂರು ಕೊಟ್ಟಿದ್ದರು. ನನ್ನ ಮೊಬೈಲ್‌ಗಳಿಗೆ ಬರುವ ಕರೆಗಳನ್ನು ಬಹುತೇಕ ಆಪ್ತ ಸಹಾಯಕ ನಿರ್ವಹಿಸುತ್ತಿ ದ್ದಾರೆ. ಹೀಗಾಗಿ ನನಗೆ ಮೊಬೈಲ್‌ಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿರುವುದಾಗಿ ಗೊತ್ತಾಗಿದೆ.
ಆದರೆ ನ್ಯಾಯಾಲಯದಲ್ಲಿ ಪ್ರಜ್ವಲ್‌ರವರ ಮೊಬೈಲ್‌ಗೆ ಫೇಸ್ ಲಾಕ್ ವ್ಯವಸ್ಥೆ ಇದ್ದು, ಅದು ಪ್ರಜ್ವಲ್ ಹಾಗೂ ಅವರ ಸ್ನೇಹಿತ ಮನು ಫೇಸ್‌ನಿಂದ ಮಾತ್ರ ಅನ್ ಲಾಕ್ ಆಗುತ್ತದೆ ಎಂದು ಎಸ್‌ಪಿಪಿ ಹೇಳಿದ್ದರು. ಹೀಗಾಗಿ ಮೊಬೈಲ್ ಪತ್ತೆಗೆ ಎಸ್‌ಐಟಿ ಹುಡುಕಾಟ ಮುಂದುವರೆಸಿದೆ ಎನ್ನಲಾಗಿದೆ.