ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ನೆನಪಿಸುವ ಹಂಪಿ ಉತ್ಸವ ಫೆಬ್ರವರಿ 28 ರಿಂದ ಆರಂಭವಾಗಲಿದೆ. ಸಿದ್ದರಾಮಯ್ಯನವರು ಉತ್ಸವವನ್ನು ಉದ್ಘಾಟಿಸಲಿದ್ದು, ಅದ್ದೂರಿ ವೇದಿಕೆ ಸಿದ್ಧಗೊಂಡಿದೆ.

ವರದಿ : ನರಸಿಂಹ ಮೂರ್ತಿ, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯನಗರ (ಫೆ.26): ರಸ್ತೆಯ ಬೀದಿಗಳಲ್ಲಿ ಮುತ್ತು ರತ್ನಗಳನ್ನು ಅಳೆದು ತೂಗಿ ಮಾರಾಟ ಮಾಡುತ್ತಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿಗ ಗತಕಾಲದ ವೈಭವವನ್ನು ನೆನಪು ಮಾಡುವ ನಿಟ್ಟಿನಲ್ಲಿ ಹಂಪಿ ಉತ್ಸವವನ್ನು ಅಚರಣೆ ಮಾಡಲಾಗುತ್ತಿದೆ. ಫೆಬ್ರವರಿ 28 ಮಾರ್ಚ್ 1 ಮತ್ತು 2ರಂದು ಮೂರು ದಿನಗಳ ಕಾಕ ನಡೆಯಲಿರೋ ಹಂಪಿ ಉತ್ಸವದ ಅಂತಿಮ ಸಿದ್ದತೆಗಳು ಪೂರ್ಣಗೊಂಡಿವೆ. 

ಗಾಯಿತ್ರಿ ಪೀಠದ ಮುಂದೆ ನಿರ್ಮಿಸಲಾಗಿರುವ ಪ್ರಧಾನ ವೇದಿಕೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುವಂತಿದೆ. ವಿಜಯ ವಿಠ್ಠಲ ಮಂದಿರ, ಕಲ್ಲಿನ ತೇರು ಮಹಾನವಮಿ ದಿಬ್ಬ, ಕಡಲೇ ಕಾಳು ಗಣಪ ಸೇರಿದಂತೆ ಹಂಪಿ ಪ್ರಮುಖ ಸ್ಮಾರಕಗಳ ಸಮ್ಮಿಶ್ರಣದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಈ ಬಾರಿಯ ಪ್ರಧಾನ ವೇದಿಕೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಮುತ್ಸದ್ದಿ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರ ಹೆಸರು ಇಡಲಾಗಿದೆ.

ಹಂಪಿ‌ ಉತ್ಸವದ ಇತಿಹಾಸದಲ್ಲಿ ಅತಿದೊಡ್ಡ ವೇದಿಕೆ: ವಿಶ್ವದ ಅತಿದೊಡ್ಡ ಬಯಲು ವಸ್ತು ಸಂಗ್ರಹಾಲಯ ಎಂದು ಕರೆಯಲ್ಪಡುವ ಹಂಪಿಯ ಪ್ರಮುಖ ಸ್ಮಾರಕಗಳ ಚಿತ್ರಣವನ್ನು ಒಂದು ವೇದಿಕೆಯಲ್ಲಿ ನೋಡುಗರು ಕಣ್ತುಂಬಿಕೊಳ್ಳವಂತೆ ನಿರ್ಮಾಣ ಮಾಡಲಾಗಿದೆ. 120*80 ಅಡಿ ವಿಸ್ತೀರ್ಣದಲ್ಲಿ ವೇದಿಕೆ ನಿರ್ಮಿಸಲಾದ ವೇದಿಕೆ ಮಧ್ಯ ಭಾಗದಲ್ಲಿ ಹಜಾರಾಮ ವಿಜಯ ವಿಠ್ಠಲ ದೇವಸ್ಥಾನ, ಅದರ ಮೇಲೆ ವಿಶ್ವವಿಖ್ಯಾತ ಕಮಲ ಮಹಲ್ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದರ ಒಳಗಡೆ ಸಪ್ತ ಸ್ವರ ಕಂಬಗಳು, ಹಂಪಿಯ ವಿಶಿಷ್ಟ ರಚನೆ ಎನಿಸಿರುವ ಕದುರೆ ಸಿಂಹಾಕೃತಿಗಳು ನಿರ್ಮಿಸಲಾಗಿದೆ.

ಇದನ್ನೂ ಓದಿ: ಗದಗ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

ಹಂಪಿ ಉತ್ಸವ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮನ: ಪ್ರಧಾನ ವೇದಿಕೆಯಲ್ಲಿ ಫೆಬ್ರುವರಿ 28 ಶುಕ್ರವಾರ ಸಂಜೆ 6 ಗಂಟೆಗೆ ನಾಡದೊರೆ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಮಾರ್ಚ್1 ಮತ್ತು 2 ರಂದು ನಡೆಯುವ ಹಂಪಿ ಉತ್ಸವದಲ್ಲಿ ನಾಡಿನ ಹೆಸರಾಂತ ಚಲನಚಿತ್ರ ನಟ ನಟಿಯರಾದ ಉಪೇಂದ್ರ, ರಮೇಶ್ ಅರವಿಂದ್, ದಿಗಂತ, ಐಂದ್ರಿತಾ ರೈ, ಅನುಶ್ರೀ, ಸೇರಿದಂತೆ ಹತ್ತು ಹಲವು ನಾಯಕರು ನಿರ್ದೇಶಕರು ಭಾಗವಹಿಸಲಿದ್ದಾರೆ. ಜೊತೆಗೆ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರು ರಸಮಂಜರಿ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವೇದಿಕೆ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಸುಮಾರು 70 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಹಂಪಿ ಉತ್ಸವದಲ್ಲಿ ಅರು ವೇದಿಕೆ ನಿರ್ಮಾಣ: ಹಂಪಿ ಉತ್ಸವದಲ್ಲಿ ಧ್ವನಿ ಬೆಳಕು ವೇದಿಕೆ ಸೇರಿ ಒಟ್ಟು ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಜಯನಗರ ಜಿಲ್ಲೆಯ ಉಸ್ತುವಾರಿ ಸವಿವ ವಸತಿ, ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಶಾಸಕ ಹೆಚ್.ಆರ್.ಗವಿಯಪ್ಪ, ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ್ದು ಈ ಬಾರಿಯ ಉತ್ಸವ ಜನೋತ್ಸವ ಅಗಲಿದೆ ಎಂದು ತಿಳಿಸಿದ್ದಾರೆ.