ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಜುಲೈ ತಿಂಗಳ ಉಚಿತ ವಿದ್ಯುತ್ ಯೋಜನೆ ಪಡೆಯಲು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ. ನೀವು ಇಂದು ಅಂದರೆ ಜುಲೈ 27ರಂದು ಅರ್ಜಿ ಸಲ್ಲಿಸಿದ್ದೀರಿ ಎಂದಾದರೆ ನಿಮಗೆ ಆಗಸ್ಟ್ ತಿಂಗಳಲ್ಲಿ ಬಿಲ್ ಬರೋದಿಲ್ಲ.

- ಸ್ವಸ್ತಿಕ್ ಕನ್ಯಾಡಿ

ಬೆಂಗಳೂರು (ಜು.27) :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಜುಲೈ ತಿಂಗಳ ಉಚಿತ ವಿದ್ಯುತ್ ಯೋಜನೆ ಪಡೆಯಲು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ. ನೀವು ಇಂದು ಅಂದರೆ ಜುಲೈ 27ರಂದು ಅರ್ಜಿ ಸಲ್ಲಿಸಿದ್ದೀರಿ ಎಂದಾದರೆ ನಿಮಗೆ ಆಗಸ್ಟ್ ತಿಂಗಳಲ್ಲಿ ಬಿಲ್ ಬರೋದಿಲ್ಲ.

ಜುಲೈ 27ರ ನಂತರ ಅರ್ಜಿ ಸಲ್ಲಿಸಿದರೆ ಗೃಹಜ್ಯೋತಿ ಯೋಜನೆ(Gruhajyoti scheme)ಯ ಪ್ರಯೋಜನ ಸಿಗೋಲ್ವಾ?

ಒಂದು ವೇಳೆ ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಗೃಹಜ್ಯೋತಿ ಯೋಜನೆಗೆ ಅರ್ಹರಾಗೋದಿಲ್ವಾ? ಖಂಡಿತಾ ಇಲ್ಲ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಜುಲೈ ತಿಂಗಳಲ್ಲಿ ಉಚಿತವಾಗಿ ವಿದ್ಯುತ್ ಪಡೆಯಲು ಅರ್ಹರಾಗುವುದಿಲ್ಲವಷ್ಟೆ. ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್ ತಿಂಗಳ ಯೋಜನೆಗೆ ಅರ್ಹರಾಗುತ್ತಾರೆ. ಹಾಗೂ ಎಂದಿನಂತೆ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.

Congress guarantee: ಗೃಹಜ್ಯೋತಿಗೆ ನೀರಸ ಪ್ರತಿಕ್ರಿಯೆ; 1 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಸಿಲ್ಲ!

ಈಗಾಗಲೇ ಒಂದು ಕೋಟಿಗೂ ಅಧಿಕ ಜನ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಬಾಕಿ ಉಳಿದಿದ್ದು ಅರ್ಜಿ ಸಲ್ಲಿಸದ ಅನೇಕರನ್ನು ಅರ್ಜಿ ಸಲ್ಲಿಸುವಂತೆ ಇಂಧನ ಇಲಾಖೆ ಮನವಿ ಮಾಡಿದೆ. ಈ ಹಿನ್ನಲೆಯಲ್ಲಿ ಆಗಸ್ಟ್ ತಿಂಗಳಿನಿಂದ 2ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸುವ ಮೂಲಕ ಅರಿವು ಮೂಡಿಸಲು ಮುಂದಾಗಿದೆ.

ಈಗಾಗಲೇ ಅನೇಕರಿಗೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದ್ದು ಅಂತಹ ಅರ್ಜಿಗಳನ್ನು ಮಾನ್ಯವೆಂದು ಪರಿಗಣಿಸಿ ಯೋಜನೆಯ ಪ್ರಯೋಜನವನ್ನು ಒದಗಿಸಲು ಇಲಾಖೆ ಮುಂದಾಗಿದೆ. 

ಆಗಸ್ಟ್ ತಿಂಗಳ ಉಚಿತ ಬಿಲ್ ಪ್ರಯೋಜನ ಪಡೆಯಲು https://sevasindhugs.karnataka.gov.in ಲಿಂಕ್ ಬಳಸಿ‌ ನೋಂದಾಯಿಸಲು ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿಯನ್ನು ಅಥವಾ 24×7 ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡುವಂತೆ ತಿಳಿಸಲಾಗಿದೆ.

ಗೃಹಜ್ಯೋತಿ ಯೋಜನೆ: ಒಂದು ಬಲ್ಬ್ ಇರುವ ಮನೆಗಳಿಗೆ 23 ಸಾವಿರ ರೂ. ವಿದ್ಯುತ್ ಬಿಲ್‌