Congress guarantee: ಗೃಹಜ್ಯೋತಿಗೆ ನೀರಸ ಪ್ರತಿಕ್ರಿಯೆ; 1 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಸಿಲ್ಲ!

 ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅರ್ಜಿ ಸಲ್ಲಿಕೆ ಆರಂಭವಾಗಿ 20 ದಿನ ಕಳೆದ್ರೂ ಅರ್ಧಕರ್ಧ ಜನರು ಅರ್ಜಿ ಸಲ್ಲಿಸಿಲ್ಲದಿರುವುದು ಸರ್ಕಾರಕ್ಕೆ ಚಿಂತೆಗೀಡುಮಾಡಿದೆ.

Gruhajyoti scheme More than one crore people have not applied yet at bengaluru rav

ಬೆಂಗಳೂರು (ಜು.23) :  ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅರ್ಜಿ ಸಲ್ಲಿಕೆ ಆರಂಭವಾಗಿ 20 ದಿನ ಕಳೆದ್ರೂ ಅರ್ಧಕರ್ಧ ಜನರು ಅರ್ಜಿ ಸಲ್ಲಿಸಿಲ್ಲದಿರುವುದು ಸರ್ಕಾರಕ್ಕೆ ಚಿಂತೆಗೀಡುಮಾಡಿದೆ.

ರಾಜ್ಯದಲ್ಲಿ ಇನ್ನೂ 1 ಕೋಟಿಗೂ ಹೆಚ್ಚು ಜನರು ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸಿಲ್ಲ. ಈ ಹಿನ್ನೆಲೆ ಜನರು ಅರ್ಜಿ ಸಲ್ಲಿಸಲು ಬೆಸ್ಕಾಂ ಅಧಿಕಾರಿಗಳಿಗೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ಜನರು ಅರ್ಜಿ ಸಲ್ಲಿಸುವಂತೆ ಮಾಡಲು ವಿಶೇಷ ಅಭಿಯಾನ ಶುರು ಮಾಡಲು ಮುಂದಾಗಿರುವ ಬೆಸ್ಕಾಂ. ಮನೆಮನೆಗೆ ತೆರಳಿ ಅರ್ಜಿದಾರರಿಂದ ಅರ್ಜಿ ಪಡೆಯಲು ಪ್ಲ್ಯಾನ್ ಮಾಡಿರುವ ಬೆಸ್ಕಾಂ ಅಧಿಕಾರಿಗಳು. 

ಗೃಹಜ್ಯೋತಿ ಯೋಜನೆ: ಒಂದು ಬಲ್ಬ್ ಇರುವ ಮನೆಗಳಿಗೆ 23 ಸಾವಿರ ರೂ. ವಿದ್ಯುತ್ ಬಿಲ್‌

ಯೋಜನೆ ಜಾರಿಯಾದ ಪ್ರಾರಂಭದಲ್ಲಿ  ಪ್ರತಿ ನಿತ್ಯ 6 ಲಕ್ಷದಿಂದ ರಿಂದ 8 ಲಕ್ಷ ಜನ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 1.5 ರಿಂದ 2 ಲಕ್ಷಕ್ಕೆ ಸೀಮಿತವಾಗಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜನರು ನಿರೀಕ್ಷಿತ ಪ್ರಮಾಣದಲ್ಲಿ ನೋಂದಾಯಿಸಿಕೊಂಡಿಲ್ಲ. ಹೀಗಾಗಿ ನೀರಸ ಪ್ರತಿಕ್ರಿಯೆ ಇರುವ ಕಡೆ ಮನೆಮನೆಗೆ ತೆರಳಿ ನೋಂದಣಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಒಟ್ಟು 2.14 ಕೋಟಿ ಬಳಕೆದಾರರ ಪೈಕಿ 1.16 ಕೋಟಿ ಮಂದಿ ನೋಂದಣಿಯಾಗಿದೆ. ಯಾವ ವರ್ಗ & ಪ್ರದೇಶದಲ್ಲಿ ನೋಂದಣಿ ಕಡಿಮೆ ಅಂತ ಪರಿಶೀಲನೆಗೆ ಇಳಿದ ಎಸ್ಕಾಂ, ಪರಿಶೀಲನೆ ಬಳಿಕ ಕಡಿಮೆ ಇರುವಂಥ  ಪ್ರದೇಶದ ಮನೆ ಮನೆಗೆ ತೆರಳಿ ಅರ್ಜಿ ಸಲ್ಲಿಸುವಂತೆ ಮಾಡುವುದು ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಸೇವಾ ಕೇಂದ್ರ ತೆರೆದು, ನೋಂದಣಿ ಪ್ರಕ್ರಿಯೆಗೆ ಸಿದ್ದತೆ ನಡೆಸಲಾಗಿದೆ. ಸರ್ಕಾರದ ನಿರ್ದೇಶನ ಪಡೆದು ಇನ್ನೇನು ಮನೆಗೆ ತೆರಳಿ ನೋಂದಣಿ ಮಾಡಿಸಲು ಪ್ಲಾನ್ ಮಾಡಿರುವ ಅಧಿಕಾರಿಗಳು.

ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಲಿವೆ ಎಸ್ಕಾಂಗಳು

Latest Videos
Follow Us:
Download App:
  • android
  • ios