ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ಬಿಲ್‌ ನೀಡುವ ಪ್ರಕ್ರಿಯೆಗೆ ಆ.1ರಂದು ತಾಂತ್ರಿಕವಾಗಿ ಚಾಲನೆ ದೊರೆಯಲಿದ್ದು, ಜುಲೈ ತಿಂಗಳಲ್ಲಿ ನಿಗದಿತ ವಿದ್ಯುತ್‌ ಬಳಕೆ ಮಾಡಿದ ಗೃಹ ಬಳಕೆ ಗ್ರಾಹಕರಿಗೆ ಮಂಗಳವಾರದಿಂದ ಶೂನ್ಯ ಬಿಲ್‌ ವಿತರಣೆ ಶುರುವಾಗಲಿದೆ.

ಬೆಂಗಳೂರು (ಆ.1) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ಬಿಲ್‌ ನೀಡುವ ಪ್ರಕ್ರಿಯೆಗೆ ಆ.1ರಂದು ತಾಂತ್ರಿಕವಾಗಿ ಚಾಲನೆ ದೊರೆಯಲಿದ್ದು, ಜುಲೈ ತಿಂಗಳಲ್ಲಿ ನಿಗದಿತ ವಿದ್ಯುತ್‌ ಬಳಕೆ ಮಾಡಿದ ಗೃಹ ಬಳಕೆ ಗ್ರಾಹಕರಿಗೆ ಮಂಗಳವಾರದಿಂದ ಶೂನ್ಯ ಬಿಲ್‌ ವಿತರಣೆ ಶುರುವಾಗಲಿದೆ.

ಈ ಬಗ್ಗೆ ಮಂಗಳವಾರ ಬೆಳಗ್ಗೆ ಇಂಧನ ಸಚಿವ ಕೆ.ಜೆ.ಜಾಜ್‌ರ್‍ ಸುದ್ದಿಗೋಷ್ಠಿ ನಡೆಸಲಿದ್ದು, ಈ ವೇಳೆ ಗೃಹ ಜ್ಯೋತಿ ಯೋಜನೆ ಅಧಿಕೃತ ಚಾಲನಾ ಸಮಾರಂಭ ಯಾವಾಗ ಹಮ್ಮಿಕೊಳ್ಳಲಾಗುತ್ತದೆ ಹಾಗೂ ಅದರ ರೂಪರೇಷೆಗಳೇನು ಎಂಬ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

ಜು.1ರಿಂದ ಬಳಕೆಯಾಗಿರುವ ಗೃಹ ಬಳಕೆ ವಿದ್ಯುತ್‌ಗೆ ಗ್ರಾಹಕರು ಕಳೆದ 1 ವರ್ಷದ ಸರಾಸರಿ ವಿದ್ಯುತ್‌ ಬಳಕೆ ಆಧರಿಸಿ ಅದಕ್ಕಿಂತ ಶೇ.10ರಷ್ಟುಹೆಚ್ಚಿನ ವಿದ್ಯುತ್‌ ಉಚಿತವಾಗಿ ಪಡೆಯಬಹುದು. ಜು.27ರ ಒಳಗಾಗಿ ನೋಂದಣಿ ಮಾಡಿಕೊಂಡಿರುವವರಿಗೆ ಜುಲೈ ಬಳಕೆಯ ವಿದ್ಯುತ್‌ನ ಶೂನ್ಯ ಬಿಲ್‌ ವಿತರಣೆ ಆ.1ರಿಂದ ಶುರುವಾಗಲಿದೆ. ಗರಿಷ್ಠ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ

1.42 ಕೋಟಿ ಮಂದಿ ನೋಂದಣಿ:

ಯೋಜನೆಯಡಿ 2.18 ಕೋಟಿ ಮಂದಿ ನೋಂದಣಿಯಾಗುವ ನಿರೀಕ್ಷೆಯನ್ನು ಇಂಧನ ಇಲಾಖೆ ಹೊಂದಿತ್ತು. ಈವರೆಗೆ ಕೇವಲ 1.42 ಕೋಟಿ ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಜು.27ರ ಬಳಿಕ ನೋಂದಣಿ ಮಾಡಿರುವವರಿಗೆ ಆಗಸ್ಟ್‌ ಬಳಕೆಯ ವಿದ್ಯುತ್‌ಗೆ ಸೆಪ್ಟೆಂಬರ್‌ನಿಂದ ಬರುವ ಬಿಲ್‌ ಉಚಿತವಾಗಲಿದೆ. ಆದರೆ, ಜು.27ರ ಒಳಗಾಗಿ ನೋಂದಣಿ ಮಾಡಿಕೊಂಡಿರುವ ಹಲವರಿಗೆ ಇನ್ನೂ ಅರ್ಜಿ ಅಂಗೀಕೃತಗೊಂಡಿರುವ ಬಗ್ಗೆ ಮಾಹಿತಿ ಬರುತ್ತಿಲ್ಲ. ಅರ್ಜಿ ಪ್ರಕ್ರಿಯೆಯಲ್ಲಿದೆ ಎಂದೇ ಬರುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.

ಶೂನ್ಯ ಬಿಲ್‌ನ ಮಾದರಿ ಬಗ್ಗೆ ಕುತೂಹಲ

ಗೃಹ ಜ್ಯೋತಿ ಶೂನ್ಯ ಬಿಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಕೆ.ಜೆ.ಜಾಜ್‌ರ್‍ ಫೋಟೋ ಹಾಗೂ ಗೃಹಜ್ಯೋತಿ ಲೋಗೋ ಇರಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಜಾಜ್‌ರ್‍ ಮಾಹಿತಿ ನೀಡುವ ಸಾಧ್ಯತೆಯಿದೆ.

ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಲಿವೆ ಎಸ್ಕಾಂಗಳು

ಅರ್ಜಿ ಸ್ಥಿತಿಗತಿ ಪರಿಶೀಲಿಸಿ

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು hಠಿಠಿps://sಛಿvasಜ್ಞಿdh್ಠ.ka್ಟ್ಞaಠಿaka.ಜಟv.ಜ್ಞಿ ಟ್ರ್ಯಾಕ್‌ ಸ್ಟೇಟಸ್‌ ಎಂಬ ಆಯ್ಕೆ ಕ್ಲಿಕ್ಕಿಸಿ.