ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ
ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆ ಚಾಲನೆ ನೀಡಿದ ನಂತರ ಮೂವರು ಮಹಿಳೆಯರಿಗೆ 2000 ರೂ. ಆರ್ಥಿನ ನೆರವು ಮಂಜೂರಾತಿ ಪ್ರಮಾಣಪತ್ರ ನೀಡಲಾಯಿತು.
ಬೆಂಗಳೂರು (ಜು.19): ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳಲ್ಲಿ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ 4ನೇ ಗ್ಯಾರಂಟಿಯಾಗಿ ಬುಧವಾರ "ಗೃಹಲಕ್ಷ್ಮಿ" (ಮನೆ ಯಜಮಾನಿಗೆ ಮಾಸಿಕ 2000 ರೂ. ಆರ್ಥಿಕ ನೆರವು) ಯೋಜನೆಗೆ ಅರ್ಜಿ ಸಲ್ಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಿದರು. ಇನ್ನು ಅಧಿಕೃತ ಚಾಲನೆ ಬೆನ್ನಲ್ಲೇ ಸುಮಾ, ಆನಂದಿ, ಸತ್ಯಾ ಎನ್ನುವ ಮಹಿಳೆಯರು ವೇದಿಕೆ ಮೇಲೆಯೇ 2000 ಸಾವಿರ ರೂ. ಪಡೆಯಲು ಮಂಜೂರಾತಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಈ ಮೂವರು ರಾಜ್ಯದ ಮೊದಲ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಆಗಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ 'ಗೃಹಲಕ್ಷ್ಮಿ ಯೋಜನೆ' ನೋಂದಣಿ ಪ್ರಕ್ರಿಯೆ ಚಾಲನೆ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆ ಲಾಂಛನ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನಂತರ, ಆನ್‌ಲೈನ್ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರ್ಜಿ ಸಲ್ಲಿಕೆಗೆ ರಿಪೋಟ್ ಕ್ಲಿಕ್ ಮೂಲಕ ಚಾಲನೆ ನೀಡಲಾಯಿತು. ಇನ್ನು ಅರ್ಜಿ ಸಲ್ಲಿಕೆ ಪೋರ್ಟಲ್‌ಗೆ ಚಾಲನೆ ಬೆನ್ನಲ್ಲೇ ಮೂವರು ಮಹಿಳೆಯರ ಮಾಹಿತಿಯನ್ನು ಪಡೆದುಕೊಂಡಿದ್ದ ಅಧಿಕಾರಿಗಳು ಸ್ಥಳದಲ್ಲಿಯೇ ಅವರ ಅರ್ಜಿಯನ್ನು ಹಾಕಿದ್ದಾರೆ. ನಂತರ, ಸಿಎಂ ಸಿದ್ದರಾಮಯ್ಯ ಹಾಗೂ ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಆನಂದಿ ಲಿಂಗಯ್ಯ, ಸುಮಾ ಪ್ರಭಾಕರ್, ಸತ್ಯಾ ಎಂಬ ಮೂವರು ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?
ಇನ್ನು ವೇದಿಕೆಯಲ್ಲಿ ಮಾತನಾಡಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ರಾಜ್ಯದ ಮಹಿಳೆಯರಿಗೆ ವಾರ್ಷಿಕ 24 ಸಾವಿರ ನೇರವಾಗಿ ಹಾಕುತ್ತೇವೆ. ಇದು ವಿಶ್ವದಲ್ಲೇ ಅಪರೂಪದ ಕಾರ್ಯಕ್ರಮ. ಒಬ್ಬ ಮಹಿಳೆ ಬೆಳಗ್ಗೆಯಿಂದ ಹೂ ಕಟ್ಟಿದರೂ 100 ಲಾಭ ಗಳಿಸೋಕೆ ಸಾಧ್ಯವಿಲ್ಲ. ತಿಂಗಳಿಗೆ 2000 ಕೂಡುವ ಜಾವಾವ್ದಾರಿ ನನಗೆ ವಹಿಸಿದ ಸಿಎಂ, ಡಿಸಿಎಂ ಗೆ ಧನ್ಯವಾದಗಳು. ಈ 2 ಸಾವಿರ ಗ್ಯಾಸ್, ಹಾಲು ಕೊಳ್ಳಲು, ಮಕ್ಕಳ ವಿಧ್ಯಾಭ್ಯಾಸಕ್ಕಾದರೂ ಬಳಸ್ತಾರೆ. ಹೆಣ್ಣು ಮಕ್ಕಳಿಗೆ 2000 ಕೊಡೋದ್ರಿಂದ ಅದರ ಪುಣ್ಯ ನಮ್ಮ ಸರ್ಕಾರಕ್ಕೆ ಬರಲಿದೆ. ನಾಳೆಯಿಂದಲೇ ನೋಂದಣಿ ಶುರುವಾಗಲಿದೆ. ಯಾವಾಗ, ಎಲ್ಲಿ ನೋಂದಣಿ ಮಾಡ್ತೀವಿ ಅಂತ ನಿಮಗೆ ಮೆಸೇಜ್ ಬರತ್ತದೆ. ಈ ಕಾರ್ಯಕ್ರಮಗಳನ್ನ ಜಾರಿಗೊಳಿಸಲು ಪಿಡಿಓ, ಇಓ, ತಹಶಿಲ್ದಾರ್ ಹೀಗೆ ಎಲ್ಲಾ ವರ್ಗದ ಅಧಿಕಾರಿಗಳು ಶ್ರಮಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 1.28 ಕುಟುಂಬಕ್ಕೆ ಇದರ ಲಾಭ ಆಗತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳೂ ಹಲವು ಸಂದರ್ಭಗಳಲ್ಲಿ ಅವಕಾಶ ವಂಚಿತರಾಗ್ತಾರೆ. ಹೆಣ್ಣು ಮಕ್ಕಳು ಪುರುಷರ ಸಮಾನವಾಗಿ ಬೆಳೆಯಬೇಕು. ಒಂದು ದೇಶ, ರಾಜ್ಯ ಮುಂದುವರೆಯಲು ಮಹಿಳೆಯರ ಸಬಲೀಕರಣ ಆಗಬೇಕು. ಬಿಜೆಪಿಯವರು ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕೊಡೋ ಯೋಚನೆ ಯಾವತ್ತೂ ಮಾಡಿಲ್ಲ. ಅಥವಾ ಮಹಿಳೆಯರಿಗೆ ಮೀಸಲಾತಿ ಕೊಡಿ ಅಂತ ಬಿಜೆಪಿ ಯಾವತ್ತೂ ಹೋರಾಟ ಮಾಡಿಲ್ಲ. ಇವತ್ತು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸಿಕ್ಕಿದ್ರೆ, ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಗೆ 10 ನಕಲಿ ಆ್ಯಪ್‌ಗಳ ಹಾವಳಿ: ಡೌನ್ಲೋಡ್ ಮಾಡಿದ್ರೆ ಹಣ ಖೋತಾ
ಇನ್ನು ಬಿಜೆಪಿಯವರು ಬರೀ ಭಾಷಣ ಹೊಡೀತಾರೆ. ಸಂಸತ್ ನಲ್ಲೂ ಮಹಿಳೆಯರಿಗೆ ಶೇ.50 ಮೀಸಲಾತಿ ಬರಬೇಕು. ಕೇಂದ್ರದಲ್ಲಿ ಬಿಜೆಪಿಯವರು ಇದ್ದಾರಲ್ಲ ಮೀಸಲಾತಿ ಕೊಡಲಿ. ಇದಕ್ಕೆ ನಾವೂ ಪ್ರತಿಶತ ಸಹಕಾರ ಕೊಡುತ್ತೇವೆ. ಆದರೆ, ಬಿಜೆಪಿಯವರಿಗೆ ಮೀಸಲಾತಿ ಕೊಡೋ ಇಚ್ಛಾಶಕ್ತಿ ಇಲ್ಲ. ಯಾಕಂದರೆ ಅವರಿಗೆ ಸಾಮಾಜಿಕ ಸಮಾನತೆ ಬೇಕಾಗಿಲ್ಲ. ಆದರೆ, ನಾವು ಇಡೀ ದೇಶವೇ ಹೆಮ್ಮೆ ಪಡುವಂಥ ಯೋಜನೆ ಜಾರಿಗೆ ತಂದಿದ್ದೇವೆ. ನಾವು 2 ಸಾವಿರ ಕೊಡೋದು ಗ್ಯಾರಂಟಿ ಎಂದು ಹೇಳಿದ್ದು, ಅದನ್ನು ಈಡೇರಿಸಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ವೇಳೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಸಾಮಾಜಿಕವಾಗಿ ತುಳಿತಕ್ಕೊಳಗಾದ ಜನರಿಗೆ ಅವಕಾಶಗಳು ಸಿಗಬೇಕು. ಈ ದೇಶದಲ್ಲಿ ಮಹಿಳೆಯರು ಕೂಡ ಹಿಂದುಳಿದವರೇ. ಅದಕ್ಕೋಸ್ಕರವೇ ಅಸಮಾಧಾನ ನಿರ್ಮಾಣ ಆಗಿದೆ. ನೂರಾರು ವರ್ಷಗಳ ಕಾಲ ಮಹಿಳೆಯರು ವಂಚಿತರಾಗಿದ್ದಾರೆ. ಯಾವಾಗ ಸಮಾಜದಲ್ಲಿ ಆರ್ಥಿಕ, ಸಮಾಜಿಕ ಚಲನೆ ಇರುವುದಿಲ್ಲವೋ ಆಗ ವಂಚಿತರಾಗ್ತಾರೆ. ಹೀಗಾಗಿ, ಅವರಿಗೆ ಸವಲತ್ತುಗಳನ್ನು ಕೊಡುತ್ತಿದ್ದೇವೆ ಎಂದು ಹೇಳಿದರು.