ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಲಿವೆ ಎಸ್ಕಾಂಗಳು

ಗೃಹಜ್ಯೋತಿ ಯೋಜನೆಗೆ  ಅರ್ಜಿ ಸಲ್ಲಿಸುವವರಿಗೆ ಸಂತಸದ ಸುದ್ದಿ ಇದೆ. ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಿಸಿಕೊಳ್ಳಲಾಗುತ್ತದೆ.

Karnataka Gruha Jyothi Scheme Registration at home gow

ಬೆಂಗಳೂರು (ಜು.12): ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ  ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. ರಾಜ್ಯದ ವಿದ್ಯುತ್ ಗ್ರಾಹಕರು ಸೇವಾ ಕೇಂದ್ರಗಳಲ್ಲಿ ಮೊಬೈಲ್ ಮೂಲಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದಾರೆ.  ಈವರೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೋಟಿ ದಾಟಿದೆ. ಇದೀಗ ಗೃಹಜ್ಯೋತಿ ಯೋಜನೆಗೆ  ಅರ್ಜಿ ಸಲ್ಲಿಸುವವರಿಗೆ ಸಂತಸದ ಸುದ್ದಿ ಇದೆ. ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಿಸಿಕೊಳ್ಳಲಾಗುತ್ತಿದೆ.  ಇನ್ಮುಂದೆ ಗ್ರಾಹಕರು ಇದ್ದಲ್ಲಿಗೆ ವಿದ್ಯುತ್ ಸರಬರಾಜು ಕಂಪನಿ  ಅಂದರೆ ಎಸ್ಕಾಂಗಳು ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಿಕೊಳ್ಳಲಿವೆ.

7ನೇ ಬಾರಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ, ಪ್ರತಿ ಬಾರಿ ಜಾಮೀನು ಕೊಡಿಸಿ ಮತ್ತೆ

ಈ ನಿಟ್ಟಿನಲ್ಲಿ ಯಾರು ಚಿಂತಿಸಬೇಕಾಗಿಲ್ಲ.  ಗ್ರಾಹಕರಿದ್ದಲ್ಲಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳುವ ಕಾರಣ ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಅಲೆದಾಡುವುದು ತಪ್ಪಲಿದೆ. ಇನ್ನೂ ಗೃಹಜ್ಯೋತಿ ನೋಂದಣಿ ಪ್ರಾರಂಭಗೊಂಡು  ಒಂದು ತಿಂಗಳು ಆಗುತ್ತಾ ಬರುತ್ತಿದ್ದು  ನಿತ್ಯ 6 ರಿಂದ 8 ಲಕ್ಷ ಜನರು ಉಚಿತ ವಿದ್ಯುತ್ ಯೋಜನೆಗೆ  ಅರ್ಜಿ ಸಲ್ಲಿಸುತ್ತಿದ್ದಾರೆ. ಆದ್ರೆ ಗ್ರಾಮೀಣ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ನೀರಸ ಪ್ರತಿಕ್ರಿಯೆ ಇರುವ ಕಡೆಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳು ತೆರಳಿ ನೋಂದಣಿ ಮಾಡಲು ಚಿಂತಿಸಿವೆ.  ಅಗತ್ಯ ಬಿದ್ದರೇ ಮನೆಗೆ ಭೇಟಿ ನೀಡಿ ಬೇಗ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಿವೆ.

ರಾಜ್ಯದಲ್ಲಿ ಮಳೆ ಕೊರತೆ: ಮೋಡ ಬಿತ್ತನೆಗೆ ಸರ್ಕಾರದಿಂದ ಅನುಮತಿ

ಈ ಬಗ್ಗೆ ಮಾಹಿತಿ ನೀಡಿರುವ ಬೆಸ್ಕಾಂ ಹಣಕಾಸು ವಿಭಾಗದ ನಿರ್ದೇಶಕ ಜೆ.ದರ್ಶನ್ ಅವರು, ಅಗತ್ಯ ಬಿದ್ದರೇ ಗ್ರಾಹಕರಿದ್ದಲ್ಲಿಯೇ ನಮ್ಮ ಮೀಟರ್ ರೀಡರ್ ಗಳು ಅಥವಾ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನೆಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮ ಒಬ್ಬ ಮೀಟರ್ ರೀಡರ್ ಒಂದು ದಿನಕ್ಕೆ 250 ಮನೆಗಳ ರೀಡಿಂಗ್ ಮಾಡುತ್ತಾರೆ. ಹತ್ತು ದಿನಗಳಲ್ಲಿ ಒಬ್ಬ ಸಿಬ್ಬಂದಿ 2500 ಮನೆಗಳನ್ನು ಸಂಪರ್ಕಿಸುತ್ತಾರೆ. ಅಗತ್ಯ ನೋಡಿಕೊಂಡು ಮನೆ ಮನೆಗೆ ತೆರಳಿ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ವರದಿ: ರವಿಚಂದ್ರ ಚೌಡಕೇರ

Latest Videos
Follow Us:
Download App:
  • android
  • ios