Asianet Suvarna News Asianet Suvarna News

ಜೂನ್‌ನ 'ಗೃಹಲಕ್ಷ್ಮೀ' ಹಣ ವರ್ಗ ಶುರು: 2-3 ದಿನದಲ್ಲಿ ಖಾತೆಗೆ ಜಮೆ

ಮೊದಲ ಹಂತದಲ್ಲಿ 533 ಕೋಟಿ ರು. ಪಾವತಿಗೆ ಸೋಮವಾರ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರದೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಪಾವತಿಯಾಗಲಿದೆ. ಇನ್ನುಳಿದ ಫಲಾನುಭವಿಗಳಿಗೆ ಆ.10ರೊಳಗೆ ಜೂನ್ ತಿಂಗಳ ಹಣ ನೇರವಾಗಿ ಖಾತೆಗೆ ಸಂದಾಯವಾಗಲಿದೆ. 
 
Gruha Lakshmi scheme money will be deposit soon grg
Author
First Published Aug 6, 2024, 5:30 AM IST | Last Updated Aug 6, 2024, 5:30 AM IST

ಬೆಂಗಳೂರು(ಆ.06):  ಗೃಹಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು, ಎರಡೂರು ದಿನದಲ್ಲಿ ಮೊದಲ ಹಂತದಲ್ಲಿ 26.65 ಲಕ್ಷ ಫಲಾನುಭವಿಗಳಿಗೆ ತಲಾ 2 ಸಾವಿರ ರು. ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ. 

ಮೊದಲ ಹಂತದಲ್ಲಿ 533 ಕೋಟಿ ರು. ಪಾವತಿಗೆ ಸೋಮವಾರ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರದೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಪಾವತಿಯಾಗಲಿದೆ. ಇನ್ನುಳಿದ ಫಲಾನುಭವಿಗಳಿಗೆ ಆ.10ರೊಳಗೆ ಜೂನ್ ತಿಂಗಳ ಹಣ ನೇರವಾಗಿ ಖಾತೆಗೆ ಸಂದಾಯವಾಗಲಿದೆ. 

ಎರಡ್ಮೂರು ತಿಂಗಳಿಂದ ಹಣ ಬಂದಿಲ್ಲ; ಆತಂಕದಲ್ಲಿ ರಾಜ್ಯದ ಗೃಹಲಕ್ಷ್ಮೀಯರು!

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಒಮ್ಮೆಗೇ ಪಾವತಿ ಮಾಡಲಾಗಿತ್ತು. ಇದೀಗ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿಗೆ ಬಾಕಿ ಉಳಿದಿದ್ದು, ವಾರಾಂತ್ಯದೊಳಗೆ ಜೂನ್ ತಿಂಗಳ ಹಣ ಪಾವತಿಯಾಗಲಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios