Asianet Suvarna News Asianet Suvarna News

ಎರಡ್ಮೂರು ತಿಂಗಳಿಂದ ಹಣ ಬಂದಿಲ್ಲ; ಆತಂಕದಲ್ಲಿ ರಾಜ್ಯದ ಗೃಹಲಕ್ಷ್ಮೀಯರು!

ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ರು. ಆದರೆ ಲೋಕಸಭಾ ಚುನಾವಣೆ ಮುಗಿದ ಬಳಿಕ ಕಳೆದ ಎರಡು ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣ ಮನೆ ಯಜಮಾನ್ತಿಗೆ ತಲುಪಿಲ್ಲ 

JDS leader suresh babu racts about congress gruhalakshmi schme rav
Author
First Published Jul 23, 2024, 1:34 PM IST | Last Updated Jul 23, 2024, 2:07 PM IST

ಬೆಂಗಳೂರು (ಜು.23): ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನ ಐದು ವರ್ಷ ಕೊಡ್ತಿವಿ ಅಂತಾ ಘೋಷಣೆ ಮಾಡಿದ್ರು. ರಾಜ್ಯದ ಪ್ರತಿ ಯಾಜಮಾನಿಗೆ 2000 ಸಾವಿರ ರೂ. ಕೊಡ್ತೇವೆ, ಯಾವ ಕಾರಣಕ್ಕೂ ನಿಲ್ಲಿಸೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು. ಆದರೆ ಕಳೆದೆರಡು ಮೂರು ತಿಂಗಳಿಂದ ಮಹಿಳೆಯರಿಗೆ ಹಣ ಬರುತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದರು.

ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ರು. ಚುನಾವಣೆ ಪೂರ್ವ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳಿಂದಲೇ ಸರ್ಕಾರ ಅಧಿಕಾರಕ್ಕೆ ಬರುವಂತಾಯ್ತು, ಮುಂದೆ ಲೋಕಸಭಾ ಚುನಾವಣೆ ಇದ್ದಿದ್ದರಿಂದ ಸ್ಥಗಿತಗೊಂಡಿರಲಿಲ್ಲ. ಒಂದೇ ಬಾರಿ ಎರಡು ಕಂತುಗಳಲ್ಲಿ ಹಾಕಿ ರಾಜ್ಯದ ಮಹಿಳೆಯರನ್ನ ಮೆಚ್ಚಿಸುವ ಕೆಲಸ ಮಾಡಿದ್ರು.

 

ಸಿಎಂ ಸಿದ್ದರಾಮಯ್ಯರ ಒಂದು ಕೂದಲೂ ಕಿತ್ಕೊಳ್ಳೋಕಾಗೊಲ್ಲ; ಕೇಂದ್ರದ ನಾಯಕರಿಗೆ ಪ್ರದೀಪ್ ಈಶ್ವರ್ ಸವಾಲು!

ಆದರೆ ಯಾವಾಗ ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತೋ ಅಂದಿನಿಂದ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಲೋಕಸಭೆ ಚುನಾವಣೆ ಆದ್ಮೇಲೆ ಆ ವಿಶ್ವಾಸ ನಮ್ಮ ಗೃಹಿಣಿಯರಿಗೆ ಬರ್ತಾಇಲ್ಲ.  ಚುನಾವಣೆ ಆದ ಒಂದು ತಿಂಗಳಾದ ಮೇಲೆ ಮನೆ ಯಜಮಾನಿಗೆ ಎರಡು ಸಾವಿರ ಬರಬೇಕಿತ್ತು ಆದ್ರೆ ಇನ್ನೂವರೆಗೆ ಬಂದಿಲ್ಲ.ಆದರಿಂದ ಎಲ್ಲ ಮಹಿಳೆಯರು ಆತಂಕದಲ್ಲಿದ್ದಾರೆ. ಚುನಾವಣೆಗೋಸ್ಕರ ಇಂತಹ ಯೋಜನೆ ಜಾರಿಗೆ ತಂದ್ರ ಎಂಬ ಭಾವನೆ ಗೃಹಿಣಿಯಲ್ಲಿ ಮನೆ ಮಾಡಿದೆ. ಇದರ ಬಗ್ಗೆ ಸದನದಲ್ಲಿಯೂ ಚರ್ಚೆ ಮಾಡ್ತಿವಿ ಎಂದರು. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.ಸದನದಲ್ಲಿಯು ಈ ಬಗ್ಗೆ ಚರ್ಚೆ ಮಾಡ್ತಿವಿ

Latest Videos
Follow Us:
Download App:
  • android
  • ios