ಹಲವು ಫಲಾನುಭವಿಗಳಿಗೆ ಈ ತಿಂಗಳ ಆರಂಭದಲ್ಲಿ 2 ಸಾವಿರ ರು. ಪಾವತಿಯಾಗಿತ್ತು. ಏ.24 ರಂದು ಪುನಃ 2 ಸಾವಿರ ರು. ವರ್ಗಾವಣೆ ಆಗಿದ್ದರಿಂದ '10 ದಿವಸ ಮೊದಲೇ ಮೇ ತಿಂಗಳ ಹಣ ಪಾವತಿಯಾಗಿದೆ. ಚುನಾವಣೆಯಲ್ಲಿ ಮಹಿಳೆಯರ ಮತ ಪಡೆಯಲು ಹೀಗೆ ಮಾಡಲಾಗಿದೆ' ಎಂಬ ಸಂದೇಶಗಳು ಹರಿದಾಡಿದ್ದವು. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಬೆಂಗಳೂರು(ಏ.25): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು 'ಸೆಳೆಯಲು' ಗೃಹ ಲಕ್ಷ್ಮಿ ಯೋಜನೆಯ ಮೇ ತಿಂಗಳ 2 ಸಾವಿರ ರು. ಮುಂಗಡವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ನಿರಾಕರಿಸಿದ್ದು, ಮಾರ್ಚ್ ತಿಂಗಳ ಬಾಕಿಯನ್ನು ಪಾವತಿಸಲಾಗಿದೆ ಎಂದು ಸ್ಪಷ್ಟಪಡಿಸಿವೆ. 

ಲೋಕಸಭೆ ಚುನಾವಣೆ 2024: ಗೃಹಲಕ್ಷ್ಮಿ ಹಣ ಜಯಪ್ರಕಾಶ್ ಹೆಗಡೆಗೆ ದೇಣಿಗೆ ನೀಡಿದ ಮಹಿಳೆ..!

ಹಲವು ಫಲಾನುಭವಿಗಳಿಗೆ ಈ ತಿಂಗಳ ಆರಂಭದಲ್ಲಿ 2 ಸಾವಿರ ರು. ಪಾವತಿಯಾಗಿತ್ತು. ಏ.24 ರಂದು ಪುನಃ 2 ಸಾವಿರ ರು. ವರ್ಗಾವಣೆ ಆಗಿದ್ದರಿಂದ '10 ದಿವಸ ಮೊದಲೇ ಮೇ ತಿಂಗಳ ಹಣ ಪಾವತಿಯಾಗಿದೆ. ಚುನಾವಣೆಯಲ್ಲಿ ಮಹಿಳೆಯರ ಮತ ಪಡೆಯಲು ಹೀಗೆ ಮಾಡಲಾಗಿದೆ' ಎಂಬ ಸಂದೇಶಗಳು ಹರಿದಾಡಿದ್ದವು. ಆದರೆ ಇಲಾಖೆಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.