ಲೋಕಸಭೆ ಚುನಾವಣೆ 2024: ಗೃಹಲಕ್ಷ್ಮಿ ಹಣ ಜಯಪ್ರಕಾಶ್ ಹೆಗಡೆಗೆ ದೇಣಿಗೆ ನೀಡಿದ ಮಹಿಳೆ..!
ಪುಷ್ಪಾವತಿ ಎಂಬ ಮಹಿಳೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಬಂದ 2000 ರೂಪಾಯಿ ಹಣವನ್ನ ಚುನಾವಣಾ ಖರ್ಚಿಗೆ ಬಳಸಿಕೊಳ್ಳಿ ಎಂದು ಹೆಗ್ಡೆಗೆ ದೇಣಿಗೆ ನೀಡಿದ್ದಾರೆ. ಸರ್ಕಾರ ನಮಗೆ ಗ್ಯಾರಂಟಿ ನೀಡಿದೆ. ಗ್ಯಾರಂಟಿಯಿಂದ ಅನುಕೂಲವಾಗಿದೆ. ಈ ಹಣವನ್ನು ನಿಮ್ಮ ಚುನಾವಣಾ ಖರ್ಚಿಗೆ ಬಳಸಿಕೊಂಡು ಗೆಲುವು ಸಾಧಿಸಿ ಇನ್ನಷ್ಟು ಉತ್ತಮ ಕೆಲಸ ಮಾಡಿ ಎಂದು ಹಾರೈಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.10): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ರಾಜ್ಯ ಸರ್ಕಾರ ನೀಡುವ 2000 ಹಣವನ್ನು ಮಹಿಳೆಯೊಬ್ಬರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗಡೆಗೆ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಗೃಹಲಕ್ಮ್ಮಿ ಯೋಜನೆಗಿಂದ ಬಂದ ಹಣವನ್ನು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.
ಪ್ರಚಾರದ ವೇಳೆಯಲ್ಲಿ ಹೆಗ್ಡೆಗೆ ದೇಣಿಗೆ:
ನಗರದ 10ನೇ ವಾರ್ಡಿನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಪುಷ್ಪಾವತಿ ಎಂಬ ಮಹಿಳೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಬಂದ 2000 ರೂಪಾಯಿ ಹಣವನ್ನ ಚುನಾವಣಾ ಖರ್ಚಿಗೆ ಬಳಸಿಕೊಳ್ಳಿ ಎಂದು ಹೆಗ್ಡೆಗೆ ದೇಣಿಗೆ ನೀಡಿದ್ದಾರೆ. ಸರ್ಕಾರ ನಮಗೆ ಗ್ಯಾರಂಟಿ ನೀಡಿದೆ. ಗ್ಯಾರಂಟಿಯಿಂದ ಅನುಕೂಲವಾಗಿದೆ. ಈ ಹಣವನ್ನು ನಿಮ್ಮ ಚುನಾವಣಾ ಖರ್ಚಿಗೆ ಬಳಸಿಕೊಂಡು ಗೆಲುವು ಸಾಧಿಸಿ ಇನ್ನಷ್ಟು ಉತ್ತಮ ಕೆಲಸ ಮಾಡಿ ಎಂದು ಹಾರೈಸಿದ್ದಾರೆ. ಚಿಕ್ಕಮಗಲಕೂರು ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಸೇರಿದಂತೆ ಇತರ ಮುಖಂಡರೊಂದಿಗೆ ಜಯಪ್ರಕಾಶ್ ಪ್ರಕಾಶ್ ಹೆಗ್ಡೆ ಅವರು ಚುನಾವಣಾ ಪ್ರಚಾರ ನಡೆಸುವ ವೇಳೆ ಮಹಿಳೆ ದೇಣಿಗೆ ನೀಡಿದ್ದಾರೆ.
LOK SABHA ELECTION 2024: ಕೇಂದ್ರ ಸರ್ಕಾರದ 2 ಕೋಟಿ ಉದ್ಯೋಗ ಎಲ್ಲಿದೆ?: ಜಯಪ್ರಕಾಶ್ ಹೆಗ್ಡೆ
ಬಿಜೆಪಿ ಅಭ್ಯರ್ಥಿ ಕೋಟಾಗೆ ದೇಣಿಗೆ:
ಕಳೆದ 8-10 ದಿನಗಳ ಹಿಂದೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪ್ರಚಾರದ ವೇಳೆ ನಗರದ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ವ್ಯಾಪಾರಸ್ಥನೋರ್ವ ಕೋಟ ಶ್ರೀನಿವಾಸ ಪೂಜಾರಿಗೆ ತಾಂಬೂಲದೊಂದಿಗೆ 25000 ಹಣವನ್ನ ದೇಣಿಗೆಯನ್ನಾಗಿ ನೀಡಿ ಗೆಲುವು ಸಾಧಿಸುವಂತೆ ಹಾರೈಸಿದ್ದರು. ನಗರದ ಮಹಿಳೆಯೊಬ್ಬರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.