Asianet Suvarna News Asianet Suvarna News

ಇನ್ನೂ ಕೆಲವೇ ದಿನಗಳಲ್ಲಿ ಗೃಹಜ್ಯೋತಿ ನೋಂದಣಿ ಫುಲ್ ಕಂಪ್ಲೀಟ್…?

ಈ ವಾರ ಕೊನೆಯ ವೇಳೆಗೆ ಒಂದು ಕೋಟಿ ದಾಟುವ ಸಾಧ್ಯತೆ ಇದೆ. ನೋಂದಣಿಗೆ ಇಂಧನ ಇಲಾಖೆ ಯಾವುದೇ ಗಡವು ನೀಡಿಲ್ಲ. ವಾರದ  ಕೊನೆಯ ವೇಳೆಗೆ ಅರ್ಜಿದಾರರ ಸಂಖ್ಯೆ ಒಂದು ಕೋಟಿ ದಾಟಲಿದೆ. 

Gruha Jyothi Registration will be Complete in Few More days in Karnataka grg
Author
First Published Jun 29, 2023, 9:30 AM IST

ಬೆಂಗಳೂರು(ಜೂ.29):  ಗೃಹಜ್ಯೋತಿ ನೋಂದಣಿಗೆ ರಾಜ್ಯದಲ್ಲಿ ಈಗಾಗಲೇ 77,20,207 ಗ್ರಾಹಕರಿಂದ ನೋಂದಣಿ ಸಲ್ಲಿಕೆಯಾಗಿದೆ. 12.14 ಲಕ್ಷ ಪಲಾನುಭವಿಗಳ ಪೈಕಿ ಈಗಾಗಲೇ 77 ಲಕ್ಷಕ್ಕೂ ಹೆಚ್ಚು ಜನರಿಂದ ನೋಂದಣಿಯಾಗಿದೆ.  ಈ ವಾರ ಕೊನೆಯ ವೇಳೆಗೆ ಒಂದು ಕೋಟಿ ದಾಟುವ ಸಾಧ್ಯತೆ ಇದೆ. ಕಾಂಗ್ರೆಸ್‌ ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಜ್ಯೋತಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಗೃಹಜ್ಯೋತಿ ಯೋಜನೆಗೆ ಇಂದು ‘ಹೆಚ್ಚಿನ  ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಗೃಹಜ್ಯೋತಿ ಯೋಜನೆ ಮೊದಲ ದಿನ ಒಟ್ಟು 96,305 ಸಾವಿರ ಜನರಿಂದ ಅರ್ಜಿ ಸಲ್ಲಿಯಾಗಿದೆ. ಸೋಮವಾರ 3,34,845, ಮಂಗಳವಾರ 4,647,225, ಬುಧವಾರ 5,63,653, ಗುರುವಾರ .8.91,820, ಶುಕ್ರವಾರ 10,93,606, ಶನಿವಾರ 12,74,212, ಭಾನುವಾರ ಒಟ್ಟು 6,49,610, ಸೋಮವಾರ 10,18,070, ಮಂಗಳವಾರ  ಒಟ್ಟು 8,18,741, ಲಕ್ಷ, ನಿನ್ನೆ ಬುಧವಾರ 5,15,120 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 

ಗೃಹ ಜ್ಯೋತಿಗೆ 20 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸಲ್ಲಿಕೆ: ನಿನ್ನೆ ಒಂದೇ ದಿನ 5 ಲಕ್ಷಕ್ಕೂ ನೋಂದಣಿ

ಯಾವ ಯಾವ ಎಸ್ಕಾಂಗಳಲ್ಲಿ ಎಷ್ಟು ಲಕ್ಷ ಗ್ರಾಹಕರು ಅರ್ಜಿ ಸಲ್ಲಿಕೆ ಅನ್ನೋದನ್ನ ನೋಡೋದಾದ್ರೆ 

ಬೆಸ್ಕಾಂ ಒಟ್ಟು 39,92,335 
ಚೆಸ್ಕಾಂ ಒಟ್ಟು 15,33,461
ಮೆಸ್ಕಾಂ ಒಟ್ಟು 11,88,364 
ಹೆಸ್ಕಾಂ ಒಟ್ಟು 20,96,14
ಜೆಸ್ಕಾಂ ಒಟ್ಟು 11,38,72
ಹೆಸ್ಕಾಂ  ಒಟ್ಟು 4,6,501

ಜೂನ್ 18 ರಿಂದ ಇಲ್ಲಿಯವರೆಗೆ ಒಟ್ಟು  77,20,207 ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಇಂದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಯಾಗುವ ಸಾಧ್ಯತೆ ಇದೆ. ಹೊಸ ಲಿಂಕ್ ಕೊಟ್ಟಿದಾಗಿಂದ ರಾಕೆಟ್ ವೇಗದಲ್ಲಿ ಸರ್ವರ್ ಕೆಲಸ ಮಾಡುತ್ತಿದೆ. 

ಗೃಹಜ್ಯೋತಿ ವ್ಯಾಪ್ತಿಗೆ ರಾಜ್ಯದಲ್ಲಿ ಒಟ್ಟು 2 ಕೋಟಿ 14 ಲಕ್ಷ ಜನರು ಗೃಹಜ್ಯೋತಿ ಫಲಾನುಭವಿಗಳಾಗಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 89 ಲಕ್ಷ ಜನರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.  ಈ ವಾರ ಕೊನೆಯ ವೇಳೆಗೆ ಒಂದು ಕೋಟಿ ದಾಟುವ ಸಾಧ್ಯತೆ ಇದೆ. ನೋಂದಣಿಗೆ ಇಂಧನ ಇಲಾಖೆ ಯಾವುದೇ ಗಡವು ನೀಡಿಲ್ಲ. ವಾರದ  ಕೊನೆಯ ವೇಳೆಗೆ ಅರ್ಜಿದಾರರ ಸಂಖ್ಯೆ ಒಂದು ಕೋಟಿ ದಾಟಲಿದೆ. 

Latest Videos
Follow Us:
Download App:
  • android
  • ios