ನದಿ ಪಾತ್ರಗಳಲ್ಲಿರುವ ಜನರ ರಕ್ಷಣೆಗೆ ಸರ್ಕಾರ ಕ್ರಮವಹಿಸಲಿ: ಸಚಿವ ಕೃಷ್ಣ ಬೈರೇಗೌಡ

ತಾಲೂಕಿನ 8 ನದಿಪಾತ್ರಗಳ ಗ್ರಾಮಗಳು ಮಳೆ ಬಂದರೆ ಜಲಾವೃತವಾಗುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಜೆಟ್ ಹಂತದಲ್ಲೆ ಅನುದಾನ ಮೀಸಲಿಡುವ ಕುರಿತು ಗಂಬೀರ ಚಿಂತನೆ ನಡೆಸಲಾಗುವುದು. ಈಗಾಗಲೇ ಈ ಕುರಿತು ಸರ್ವೇ ಕಾರ್ಯ ಮಾಡಿಸಲಾಗಿದ್ದು 150 ಕೋಟಿ ಅನುದಾನ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Govt should take action to protect people living in river basins Says Minister Krishna Byre Gowda gvd

ಕೊಳ್ಳೇಗಾಲ (ಮಾ.02): ತಾಲೂಕಿನ 8 ನದಿಪಾತ್ರಗಳ ಗ್ರಾಮಗಳು ಮಳೆ ಬಂದರೆ ಜಲಾವೃತವಾಗುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಜೆಟ್ ಹಂತದಲ್ಲೆ ಅನುದಾನ ಮೀಸಲಿಡುವ ಕುರಿತು ಗಂಬೀರ ಚಿಂತನೆ ನಡೆಸಲಾಗುವುದು. ಈಗಾಗಲೇ ಈ ಕುರಿತು ಸರ್ವೇ ಕಾರ್ಯ ಮಾಡಿಸಲಾಗಿದ್ದು 150 ಕೋಟಿ ಅನುದಾನ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನ ಸೌಧದಲ್ಲಿ ಶಾಸಕ ಕೃಷ್ಣಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡಿ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ನದಿ ಪಾತ್ರಗಳಲ್ಲಿರುವ 8 ಗ್ರಾಮಗಳು ಮಳೆ ಬಂದರೆ ಜಲಾವೃತಗೊಂಡು ಅಲ್ಲಿನ ವಾಸಿಗಳು ಪಡುವ ಬವಣೆ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ನದಿಗೆ ತಡೆಗೋಡೆ (ರಕ್ಷಣಾ ಬೇಲಿ) ಹಾಕುವ ಈ ಯೋಜನೆಗೆ 150 ಕೋಟಿ ಅಗತ್ಯವಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಕ್ಕೂ ಬಂದಿದ್ದು ಅನುದಾನ ಲಭ್ಯತೆ ಆಧಾರದಡಿ ಕ್ರಮಕೈಗೊಳ್ಳಲಾಗುವುದು. ಈ ಬಜೆಟ್ ಅನುದಾನದಲ್ಲೆ ಕಾಮಗಾರಿಗೆ ಅನುದಾನ ಮೀಸಲಿಡಲಾಗುವುದು. ಎಂಬ ಭರವಸೆ ನೀಡಿದರು.

ಕುಣಿಗಲ್ ಜನತೆಯ ಋಣ ತೀರಿಸಿದ್ದೇನೆ: ಡಿ.ಕೆ.ಶಿವಕುಮಾರ್‌

ಸದನದ ಗಮನ ಸೆಳೆದ ಕೃಷ್ಣಮೂರ್ತಿ: ಸವಿವರವಾಗಿ ನದಿ ಪಾತ್ರದ 8 ಗ್ರಾಮಗಳಲ್ಲಿ ಮಳೆ ಬಂದರೆ ಅಲ್ಲಿನ ಜನ, ಜಾನುವಾರು ಪಡುವ ಭವಣೆಗಳನ್ನು ಎಳೆ ಎಳೆಯಾಗಿ ವಿವರಿಸಿದ ಕ್ಷೇತ್ರದ ಶಾಸಕರು ಅಲ್ಲಿನ ಗ್ರಾಮಸ್ಥರು ಮತ್ತು ಜಾನುವಾರುಗಳ ರಕ್ಷಣೆಗಾಗಿ ರಕ್ಷಣಾ ಗೋಡೆ ಅತ್ಯಗತ್ಯವಿದೆ. ಈ ಬಾರಿ ಮಳೆ ಬಂದು ಅವಘಡ ಸಂಭವಿಸುವ ಮುನ್ನ ಸರ್ಕಾರ ಕ್ರಮವಹಿಸಬೇಕು ಎಂದು ಸದನದ ಗಮನ ಸೆಳೆದರಲ್ಲದೆ ಈ ವರ್ಷದ ಬಜೆಟ್ ನಲ್ಲಿಯೇ ಈ ಕಾಮಗಾರಿಯನ್ನು ಸೇರಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.

1000 ಗ್ರಾಮ ಲೆಕ್ಕಿಗರ ನೇಮಕಕ್ಕೆ ಶೀಘ್ರ ಅಧಿಸೂಚನೆ: ಕಂದಾಯ ಇಲಾಖೆಯ ಕೆಲಸಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಂಬಂಧ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ. ಬಿಜೆಪಿ ಸದಸ್ಯ ಕಿರಣ್‌ ಕುಮಾರ್‌ ಕೊಡ್ಗಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇತರೆ ಇಲಾಖೆಗಳಿಗೆ ಹೋಲಿಸಿದರೆ ಕಂದಾಯ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಸ್ಯೆಗಳನ್ನು ಹೊತ್ತು ತರುತ್ತಾರೆ. ಹೀಗಾಗಿ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.

ಸಿಎಂ ಸಿದ್ದರಾಮಯ್ಯ ಹಠದಿಂದ ಜಾತಿ ಜನಗಣತಿ ವರದಿ ಸ್ವೀಕಾರ: ಶಾಸಕ ಆರಗ ಜ್ಞಾನೇಂದ್ರ ಆರೋಪ

ಈ ನಡುವೆ, ಕಂದಾಯ ಇಲಾಖೆಯ ವಿವಿಧ ಹಂತದ ನೌಕರರು ಬೇರೆಡೆ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಕೆಲಸವಾಗುವುದು ವಿಳಂಬವಾಗುತ್ತಿದೆ. ಹೀಗಾಗಿ ಹೊಸದಾಗಿ ನಿಯೋಜನೆ ಮಾಡುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಿಯೋಜನೆಗೆ ಅವಕಾಶ ನೀಡಿಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios