Asianet Suvarna News Asianet Suvarna News

ಕುಣಿಗಲ್ ಜನತೆಯ ಋಣ ತೀರಿಸಿದ್ದೇನೆ: ಡಿ.ಕೆ.ಶಿವಕುಮಾರ್‌

ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಸರ್ಕಾರದ ವತಿಯಿಂದ ಏರ್ಪಡಿಸಿದ್ದ ಹಲವು ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದರು. 

I have paid the debt of Kunigal peoples Says DCM DK Shivakumar gvd
Author
First Published Mar 2, 2024, 9:01 PM IST

ಕುಣಿಗಲ್ (ಮಾ.02): ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಸರ್ಕಾರದ ವತಿಯಿಂದ ಏರ್ಪಡಿಸಿದ್ದ ಹಲವು ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು. ಕಳೆದ ಬಾರಿ ಚುನಾವಣೆಯಲ್ಲಿ ಸಂಸದ ಡಿ.ಕೆ. ಸುರೇಶ್ ಶಾಸಕ ಡಾ. ರಂಗನಾಥ್ ಅವರಿಗೆ ಅತಿ ಹೆಚ್ಚು ಬಹುಮತದಿಂದ ಮತ ಹಾಕಿದ್ದೀರಿ, ನೀವು ಕೊಟ್ಟ ಶಕ್ತಿ ಹಿನ್ನೆಲೆಯಲ್ಲಿ ಕಾವೇರಿ ನೀರನ್ನು ಹರಿಸುವ ಕೆಲಸ ಮಾಡಿದ್ದು ವೈ.ಕೆ. ರಾಮಯ್ಯ ಹಾಗೂ ಹುಚ್ಚಮಾಸ್ತಿ ಗೌಡ ನಂತರ ಇದು ಉತ್ತಮ ಸಾಕ್ಷಿ ಗುಡ್ಡೆಯ ಸಾಧನೆ ಆಗಿದೆ ಎಂದರು.

ಮಾಧುಸ್ವಾಮಿ, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರಿಗೆ ಈ ಮೂಲಕ ಹೇಳುವುದಾದರೆ ಅಂದು ನಾನು ಮಂಜೂರು ಮಾಡಿಸಿದ್ದ ಈ ಪೈಪ್ ಲೈನ್ ಯೋಜನೆಯನ್ನು ಬದಲಾಯಿಸಿದ್ದು ಏತಕ್ಕೆ? ನಾವು ಆ ಕೆಲಸವನ್ನು ಮತ್ತೊಮ್ಮೆ ಮಾಡಿ ಮುಗಿಸಿದ್ದೇವೆ, ನನ್ನ ನಂಬಿದ ಜನರ ಋಣ ತೀರಿಸಿದ್ದೇನೆ. 986 ಕೋಟಿ ರು.ಗಳು ಮಂಜೂರಿ ಮಾಡಿದ್ದೆ, ಇದರ ಕೀರ್ತಿ ಡಾ. ರಂಗನಾಥ್ ಹಾಗೂ ಸಂಸದ ಡಿ.ಕೆ. ಸುರೇಶ್‌ಗೆ ಸಲ್ಲುತ್ತದೆ ಎಂದರು. ಸಮಾಜದ ಋಣವನ್ನ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಹಾಗೂ ಡಾ. ರಂಗನಾಥ್ ತೀರಿಸಿದ್ದಾರೆ. ಸದಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತೇವೆ, 

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕುರಿತ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ: ಪರಮೇಶ್ವರ್‌

ಕೇಂದ್ರ ಸರ್ಕಾರ ಜನಧನ್ ಖಾತೆಯನ್ನು ತೆರೆದಿದ್ದು ಇದುವರೆಗೂ ಕೂಡ ಆ ಖಾತೆಗೆ 15 ಲಕ್ಷ ಬರಲಿಲ್ಲ. ಆದರೆ ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಉಚಿತ ವಿದ್ಯುತ್, ಉಚಿತ ಸಾರಿಗೆ ಸೇರಿದಂತೆ ಹಲವಾರು ಯೋಜನೆಗಳನ್ನ ನಾವು ನೀಡಿ ಯಶಸ್ವಿ ಆಗಿದ್ದೇವೆ ಎಂದರು. ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಕೈ ಸಾಧನೆಗಳಿಂದ ಎರಡು ಪಕ್ಷಗಳು ತಲ್ಲಣ ಆಗಿವೆ. ಈ ಬಾರಿಯೂ ಕೂಡ ಕಾಂಗ್ರೆಸ್ ಸಂಸದರು ಗೆಲುವು ಖಚಿತ. ಜನರು ನಮ್ಮನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಈ ಬಾರಿ ಡಿ.ಕೆ. ಸುರೇಶ್ ಅವರಿಗೆ ನೀವು ಆಶೀರ್ವಾದ ಮಾಡಬೇಕು ಎಂದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಕುಣಿಗಲ್ ತಾಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತಿವೆ. ಯುವಕರಾದ ಶಾಸಕ ಡಾ. ರಂಗನಾಥ್ ಅವರ ಉತ್ಸಾಹ ಮತ್ತು ಜವಾಬ್ದಾರಿಯ ಕಾರ್ಯನಿರ್ವಣೆಯಿಂದ ಇಷ್ಟೊಂದು ಅನುದಾನ ಈ ತಾಲೂಕಿಗೆ ಬರಲು ಸಾಧ್ಯವಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಪರವಾಗಿ ಆಡಳಿತ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಎಲ್ಲಾ ಯೋಜನೆಗಳನ್ನು ಮತ್ತು ಭರವಸೆಗಳನ್ನು ಉಳಿಸಿಕೊಂಡಿದ್ದೇವೆ. ಅದರಂತೆ ಮುಂದಿನ ದಿನಗಳಲ್ಲೂ ಕೂಡ ಉತ್ತಮ ಕಾರ್ಯವನ್ನು ನಿರ್ವಹಿಸಲಿದ್ದೇವೆ. 

ಅಂತಹ ಉತ್ತಮ ಸಾಧನೆ ಮಾಡುತ್ತಿರುವ ಡಿ.ಕೆ. ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್‌ ಕೇವಲ ಕುಣಿಗಲ್ ಮಾತ್ರ ನಿಮ್ಮದಲ್ಲ ತುಮಕೂರು ಜಿಲ್ಲೆ ನಿಮ್ಮದು ಎಂದರು. ಕಾರ್ಯಕ್ರಮಕ್ಕೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವಾರು ಸ್ವಸಹಾಯ ಸಂಘ ಮತ್ತು ಶ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಶಕ್ತಿ ಯೋಜನೆ, ಯುವನಿಧಿ, ಗೃಹಲಕ್ಷ್ಮಿ, ಬಸವ ಅಂಬೇಡ್ಕರ್‌ ನಿಗಮದ ಫಲಾನುಭವಿಗಳು ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ರೇಷ್ಮೆ ಸೇರಿದಂತೆ ಹಲವಾರು ಇಲಾಖೆಯ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್ ಈ ದೇಶದ ಅಭಿವೃದ್ಧಿಗಾಗಿ ಸದಾ ನಾನು ಚಿಂತಿಸುತ್ತೇನೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಕುಡಿಯುವ ನೀರು ಮನೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಸ್ಪಂದಿಸುವುದರ ಜೊತೆಗೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ನಾನು ಉತ್ತೇಜನ ನೀಡಿದ್ದೇನೆ. ನನ್ನ ಅಭಿವೃದ್ಧಿಯನ್ನು ಸಹಿಸದ ಹಲವಾರು ವಿರೋಧ ಪಕ್ಷದವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ ಕೇಂದ್ರ ಸರ್ಕಾರ ಕರ್ನಾಟಕ್ಕೆ ಅನ್ಯಾಯ ಮಾಡಿದ್ದೆ ಅದನ್ನು ಪ್ರಶ್ನಿಸಿದರೆ ನನಗೆ ಹಲವಾರು ವಿರೋಧದ ಮಾತುಗಳನ್ನ ವ್ಯಕ್ತಪಡಿಸುತ್ತಾರೆ. ಎಷ್ಟೇ ಸಮಸ್ಯೆ ಬಂದರೂ ಕೂಡ ನಾನು ಎದೆಗುಂದುವುದಿಲ್ಲ. ಮುಂದಿನ ಅಭಿವೃದ್ಧಿ ಕಾಮಗಾರಿಗಳನ್ನು ಮಾಡೇ ತೀರುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ಹಠದಿಂದ ಜಾತಿ ಜನಗಣತಿ ವರದಿ ಸ್ವೀಕಾರ: ಶಾಸಕ ಆರಗ ಜ್ಞಾನೇಂದ್ರ ಆರೋಪ

ಕುಣಿಗಲ್ ಶಾಸಕ ಡಾ. ರಂಗನಾಥ್ ಮಾತನಾಡಿ, ಕುಣಿಗಲ್ ಜನತೆಯ ನಂಬಿಕೆಗಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಶಕ್ತಿ ನೀಡುತ್ತಿರುವ ಸಂಸದ ಡಿ.ಕೆ. ಸುರೇಶ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಕುಣಿಗಲ್‌ಅನ್ನು ಅಭಿವೃದ್ಧಿ ಮಾಡುವ ಕನಸು ಕಂಡಿದ್ದೇನೆ ಅದಕ್ಕಾಗಿ ಎಲ್ಲರ ಆಶೀರ್ವಾದ ಸದಾ ನನಗೆ ಬೇಕಿದೆ ಎಂದರು, ಈ ಸಂದರ್ಭದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಪೌರಾಡಳಿತ ಸಚಿವ ರಹೀಂ ಖಾನ್, ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಇದ್ದರು.

Follow Us:
Download App:
  • android
  • ios