ಎಫ್‌ಡಿಎ, ಎಸ್‌ಡಿಎ ನೇಮಕಾತಿ ಅಕ್ರಮದ ತನಿಖೆಗೆ ಸರ್ಕಾರ ಮೀನಾಮೇಷ..!

ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಹಲವು ದಿನಗಳೇ ಕಳೆದರೂ ಸರ್ಕಾರ ಎಫ್‌ಡಿಎ, ಎಸ್‌ಡಿಎ ನೇಮಕದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ಮುಂದಾಗಿಲ್ಲ.

Government Not Investigate FDA, SDA Recruitment Scams in Karnataka grg

ಆನಂದ್‌ ಎಂ. ಸೌದಿ

ಯಾದಗಿರಿ(ನ.18): ಎಫ್‌ಡಿಎ (ಪ್ರಥಮ ದರ್ಜೆ ಸಹಾಯಕ), ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ), ಜೆಇ (ಕಿರಿಯ ಅಭಿಯಂತರ) ಹಾಗೂ ಪೇದೆ ಹುದ್ದೆಗಳ ನೇಮಕಾತಿ ವೇಳೆಯೂ ಅಕ್ರಮಗಳು ನಡೆದಿವೆ ಎಂದು ಪಿಎಸ್‌ಐ ಹಗರಣದ ಕುರಿತು ತನಿಖೆ ನಡೆಸಿದ್ದ ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದರೂ ತನಿಖೆಗೆ ಮೀನಾಮೇಷ ಎಣಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದ್ದ 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ನಡೆದು, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಹಗರಣದ ತನಿಖೆ ನಡೆಸಿದ್ದ ಸಿಐಡಿ, ಪಿಎಸ್‌ಐ ಹುದ್ದೆಗಳ ನೇಮಕಾತಿ ಮಾತ್ರವಲ್ಲ ಎಫ್‌ಡಿಎ, ಎಸ್‌ಡಿಎ, ಜೆಇ ಹಾಗೂ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ ವೇಳೆಯೂ ಅಕ್ರಮಗಳು ನಡೆದಿವೆ ಎಂಬ ಅಂಶವನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಈ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳನ್ನೂ ಸಲ್ಲಿಸಿದೆ. ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಹಲವು ದಿನಗಳೇ ಕಳೆದರೂ ಸರ್ಕಾರ ಎಫ್‌ಡಿಎ, ಎಸ್‌ಡಿಎ ನೇಮಕದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ಮುಂದಾಗಿಲ್ಲ.

PSI Recruitment Scam: ಎಡಿಜಿಪಿ ಅಮೃತ್‌ ಪಾಲ್‌ ಸಿಐಡಿ ವಶಕ್ಕೆ

ಪಿಎಸ್‌ಐ ಅಕ್ರಮ ಬಯಲಿಗೆ ಬಂದ ಬೆನ್ನಲ್ಲೇ, ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಭಾರಿ ಅಕ್ರಮದ ಆರೋಪ ಕೇಳಿ ಬಂದಿತ್ತು. ಆದರೆ, ಆಗ ಸೂಕ್ತ ಸಾಕ್ಷ್ಯಾಧಾರಗಳಿರದ ಕಾರಣ ಇಂತಹ ಆರೋಪಗಳನ್ನು ಸರ್ಕಾರ ತಳ್ಳಿ ಹಾಕಿತ್ತು. ಇದೀಗ ಸಿಐಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ ಅಂಶಗಳನ್ನೇ ಆಧರಿಸಿ ತನಿಖೆಗೆ ಆದೇಶಿಸಿದರೆ ಪಿಎಸ್‌ಐ ನೇಮಕ ಅಕ್ರಮಕ್ಕಿಂತಲೂ ಬಹುದೊಡ್ಡ ಅಕ್ರಮ ಬಯಲಾಗಲಿದೆ ಎನ್ನಲಾಗುತ್ತಿದೆ.

ಕರ್ಮಕಾಂಡ ಬಯಲಾಗಿಸಿದ ಚಾರ್ಜ್‌ಶೀಟ್‌:

ಪಿಎಸ್‌ಐ ಅಕ್ರಮದ ಆರೋಪಿಗಳ ವಿಚಾರಣೆ ವೇಳೆ ಕೆಲವರು ಕೆಪಿಎಸ್ಸಿ ಪರೀಕ್ಷೆಗಳಲ್ಲೂ ಅಕ್ರಮ ನಡೆದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಹಿಂದಿನ (ಎಫ್‌ಡಿಎ/ಎಸ್‌ಡಿಎ) ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದಂತೆ ಇಲ್ಲಿಯೂ (ಪಿಎಸ್‌ಐ ಪರೀಕ್ಷೆ) ಎಲ್ಲಾ ಸರಣಿಗಳ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೆ, ಪರೀಕ್ಷೆ ಬರೆಯುವ ವೇಳೆ ಬ್ಲೂಟೂತ್‌ ಬಳಕೆ ಮತ್ತಿತರ ಅಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅ.31ರಂದು ಕಲಬುರಗಿಯಲ್ಲಿ ಸಿಐಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಅಲ್ಲದೆ, ಚಾರ್ಜ್‌ಶೀಟ್‌ ಸಲ್ಲಿಕೆ ನಂತರವೂ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಹೀಗಾಗಿ, ಈಗಾಗಲೇ ಒಂದಿಷ್ಟು ಮಾಹಿತಿಗಳನ್ನು ಕಲೆ ಹಾಕಿರುವ ಸಿಐಡಿ ತಂಡ, ಮುಂಬರುವ ದಿನಗಳಲ್ಲಿ ಎಫ್‌ಡಿಎ/ಎಸ್‌ಡಿಎ ಅಕ್ರಮದ ಬಣ್ಣವನ್ನೂ ಬಯಲಾಗಿಸಿದರೆ ಅಚ್ಚರಿಯಿಲ್ಲ.

ಎಫ್‌ಡಿಎ/ಎಸ್‌ಡಿಎ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ಗುಮಾನಿಗಳ ಬಗ್ಗೆ ಜುಲೈ 11ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು.

PSI Recruitment Scam: 20 ಲಕ್ಷ ಪಡೆದು ಉತ್ತರ ಹೇಳಿದ್ದವ ಸೆರೆ

ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಎಫ್‌ಡಿಎ/ಎಸ್‌ಡಿಎ ಅಕ್ರಮದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದು, ಕರ್ನಾಟಕ ಲೋಕಸೇವಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿ, ಪ್ರತಿಭಾವಂತರಿಗೆ ನ್ಯಾಯ ಒದಗಿಸಬೇಕು ಅಂತ ನೊಂದ ಅಭ್ಯರ್ಥಿಗಳ ಹೋರಾಟದ ಸಂಘಟನೆಯ ಮುಖಂಡ ರವಿಶಂಕರ್‌ ಮಾಲೀಪಾಟೀಲ್‌ ತಿಳಿಸಿದ್ದಾರೆ.  

ಟಾಪ್‌- ತನಿಖೆ ಏಕಿಲ್ಲ?

ತನಿಖೆಯಾದರೆ ಎಸ್‌ಐ ಅಕ್ರಮಕ್ಕಿಂತ ದೊಡ್ಡ ಸ್ಕಾ್ಯಂ ಬೆಳಕಿಗೆ?
- 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ
- ಎಫ್‌ಡಿಎ, ಎಸ್‌ಡಿಎ, ಜೆಇ, ಪೇದೆ ಹುದ್ದೆಗಳಲ್ಲೂ ಅಕ್ರಮ ಆಗಿರುವುದು ಪತ್ತೆ
- ಇದನ್ನೇ ಕೋರ್ಚ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ಸಿಐಡಿ
- ಇದಾಗಿ ಹಲವು ದಿನಗಳು ಕಳೆದಿದ್ದರೂ ಅಕ್ರಮದ ಬಗ್ಗೆ ತನಿಖೆಯೇ ಇಲ್ಲ

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಎಫ್‌ಡಿಎ/ಎಸ್‌ಡಿಎ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ಶಂಕೆ ಬಗ್ಗೆ ಜುಲೈ 11ರಂದೇ ‘ಕನ್ನಡಪ್ರಭ’ ವರದಿ ಮಾಡಿತ್ತು.
 

Latest Videos
Follow Us:
Download App:
  • android
  • ios