Asianet Suvarna News Asianet Suvarna News

ತೆರಿಗೆ ಹೆಚ್ಚಳವಾದಲ್ಲಿ ಮಧ್ಯಮ ವರ್ಗಕ್ಕಿಂತ, ದೊಡ್ಡವರಿಂದಲೇ ತೆರಿಗೆ ವಸೂಲಿ ಕಷ್ಟ; ಮಾಜಿ ಸಿಎಂ ಬೊಮ್ಮಾಯಿ

ತೆರಿಗೆ ಕಾನೂನುಗಳು ಸರಳವಾದಷ್ಟು ಸಾಮಾನ್ಯರಿಗೆ ಅನುಕೂಲವಾಗಲಿದ್ದು, ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೆ, ದೇಶ ಅಭಿವೃದ್ಧಿ ಆಗುತ್ತಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Government is collecting more taxes it is sign of development said former CM Basavaraj Bommai sat
Author
First Published Aug 5, 2023, 3:10 PM IST

ಬೆಂಗಳೂರು (ಆ.05): ತೆರಿಗೆ ಕಾನೂನುಗಳು ಸರಳವಾದಷ್ಟು ಸಾಮಾನ್ಯರಿಗೆ ಅನುಕೂಲವಾಗಲಿದ್ದು, ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೆ, ದೇಶ ಅಭಿವೃದ್ಧಿ ಆಗುತ್ತಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ತೆರಿಗೆ ಸಲಹೆಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆರ್ಥಿಕ ಬೆಳವಣಿಗೆ ಹೊಂದಲ ಬಯಸುತ್ತಾನೆ. ನಾನು ಹಣಕಾಸು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ನಾನು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮನಸು ಮಾಡಿದರೆ ಯಾವುದು ಕಷ್ಟವಲ್ಲ ಎಂದು ಯೋಚಿಸಿ ಕಾರ್ಯ ಪ್ರವೃತ್ತನಾದೆ. ಮೂರು ತಿಂಗಳಲ್ಲಿ ಶೇ.70 ರಷ್ಟು ಆದಾಯ ಹೆಚ್ಚಳ ಮಾಡಿದೆ. ರಾಜ್ಯದ ಆದಾಯ ಹೆಚ್ಚಿಸಿ ಎರಡು ವರ್ಷದ ಅವಧಿಯಲ್ಲಿ ಸರಪ್ಲಸ್ ಬಜೆಟ್ ಮಂಡನೆ ಮಾಡಿದೆ. ಈಗಿನ ಸರ್ಕಾರ ಉಚಿತ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದು, ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಎಂದು ಹೇಳಿದರು.

ಕುಮಾರಸ್ವಾಮಿ ಹೊಸ ಬಾಂಬ್‌: 15 ಪರ್ಸೆಂಟ್‌ ಕಮೀಷನ್‌ ಆಧಾರದಲ್ಲಿ ಬಿಬಿಎಂಪಿ 710 ಕೋಟಿ ರೂ. ಹಣ ಬಿಡುಗಡೆ

ಆರಂಭದಲ್ಲಿ ವಿರೋಧಿಸಿದ್ದ ಜಿಎಸ್‌ಟಿ ಈಗ ಎಲ್ಲರಿಗೂ ಒಪ್ಪಿತ: ರಾಜ್ಯದ ಆರ್ಥಿಕತೆ ಹೆಚ್ಚಿಸಲು ಸಹಕಾರ ನೀಡಿದ  ತೆರಿಗೆದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.‌ ಆರ್ಥಿಕತೆ ಬೆಳವಣಿಗೆಯಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದೆ. ಅಂತಿಮವಾಗಿ ದೇಶದ ಅಭಿವೃದ್ಧಿ ಆಗಬೇಕು. ಅದರಲ್ಲಿ ತೆರಿಗೆದಾರರ ಪಾತ್ರ ಮುಖ್ಯವಾಗಿದೆ‌. ಆರ್ಥಿಕತೆ ಯಾವುದೇ ಒತ್ತಡವಿಲ್ಲದೇ ಬೆಳೆಯುವಂತಾಗಬೇಕು. ಆದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರ  5 ಟ್ರಿಲಿಯನ್ ಡಾಲರ್ ಗುರಿ ಮುಟ್ಟುವ‌ ಕನಸು  ಸಾಧ್ಯವಾಗಲಿದೆ. ಆರಂಭದ ದಿನಗಳಲ್ಲಿ ಬಹುತೇಕರು ಜಿಎಸ್ ಟಿ ಯನ್ನು ವಿರೋಧಿಸಿದ್ದರು. ಆದರೆ, ಈಗ ಎಲ್ಲರು ಒಪ್ಪಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ‌ ಎಂದು ತಿಳಿಸಿದರು.

ದೊಡ್ಡವರಿಂದ ತೆರಿಗೆ ವಸೂಲಿ ಕಷ್ಟ: ಒಂದು ದೇಶದ ಜಿಡಿಪಿಯನ್ನು ಅಳೆಯುವುದು ಹೇಗೆ ಎನ್ನುವುದು ಪ್ರಶ್ನೆ, ಆರ್ಥಿಕ ತಜ್ಞರು ಜಿಡಿಪಿಯನ್ನು ಕ್ಲಿಷ್ಟಮಯಗೊಳಿಸುತ್ತಾರೆ‌. ಕೆಲವರಿಗೆ ಕಾನೂನಿನ ಅರಿವಿಲ್ಲದೆ ತೆರಿಗೆ ಕಟ್ಟದೇ ಉಳಿಯುತ್ತಾರೆ.‌ ಕೆಲವರಿಗೆ ಕಾನೂನಿನ ಮಾಹಿತಿ ಇದ್ದರೂ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸಣ್ಣವರು ಹೆಚ್ಚು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾರೆ. ಅವರಿಗೆ 1,000 ರೂಪಾಯಿ ಹೆಚ್ಚಿಗೆ ತೆರಿಗೆ ಕಟ್ಟಿ ಎಂದರೆ ಕಟ್ಟುತ್ತಾರೆ. ಆದರೆ, ದೊಡ್ಡವರಿಗೆ ಒಂದು ಕೋಟಿ ರೂ.‌ ತೆರಿಗೆ ಹೆಚ್ಚಳವಾದರೆ ಅವರಿಂದ ತೆರಿಗೆ ಸಂಗ್ರಹ ಮಾಡುವುದಕ್ಕೆ ಚಾಲೆಂಜ್ ಎದುರಾಗುತ್ತದೆ ಎಂದು ಹೇಳಿದರು. 

ತೆರಿಗೆ ಕಾನೂನುಗಳು ಸರಳ ಆಗಿರಬೇಕು: ತೆರಿಗೆ ಕಾನೂನುಗಳು ಸರಳವಾಗಬೇಕು. ದೇಶದ ಆರ್ಥಿಕತೆಯನ್ನು ತೆರಿಗೆ ಸಂಗ್ರಹದ ಮೂಲಕ ಅಳೆಯಲಾಗುವುದು. ತೆರಿಗೆ ಸಂಗ್ರಹ ಹೆಚ್ಚಾದರೆ ದೇಶ ಅಭಿವೃದ್ಧಿ ಯಾಗುತ್ತಿದೆ ಎಂದು ಅರ್ಥ. ಆಡಳಿತ ನಡೆಸುವವರು ಕಾನೂನು ಜಾರಿ ಮಾಡುತ್ತೇವೆ. ಅದನ್ನು ಅರ್ಥ ಮಾಡಿಕೊಂಡು, ಜಾರಿಗೆ ತರುವ ಕೆಲಸವನ್ನು ತೆರಿಗೆ ಸಲಹೆಗಾರರು ಮಾಡುತ್ತಿದ್ದು, ತೆರಿಗೆ ಸಲಹೆಗಾರರು ಸರ್ಕಾರದ ಭಾಗವಾಗಿದ್ದು, ವ್ಯಾಪಾರಿ ಸಮುದಾಯದ ಭಾಗವಾಗಿಯೂ ಕೆಲಸ ಮಾಡುತ್ತಿದ್ದು, ದ್ವಿಪಾತ್ರ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು. 

ಈ ಜನ್ಮದಲ್ಲಿ ಕುಮಾರಸ್ವಾಮಿ, ಬೊಮ್ಮಾಯಿ ಇಬ್ಬರೇ ಸತ್ಯ ಹರಿಶ್ಚಂದ್ರರು: ವಿಶ್ವನಾಥ್ ವ್ಯಂಗ್ಯ

ವ್ಯಾಪಾರ ಮತ್ತು ತತ್ವಜ್ಞಾನದಲ್ಲಿ ಲಾಭ ನಷ್ಟದ ಲೆಕ್ಕ ತದ್ವಿರುದ್ದವಾಗಿದ್ದು, ವ್ಯಾಪಾರದಲ್ಲಿ ಪಾಪ ಪುಣ್ಯ, ತತ್ವಜ್ಞಾನದಲ್ಲಿ ಲಾಭನಷ್ಟದ ಲೆಕ್ಕ ಹಾಕಬೇಕು. ಸಾಮಾನ್ಯ ಜನರು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿದರೆ, ಆ ಹಣವನ್ನು ರಸ್ತೆ ಟಾರ್ ಹಾಕುವವರು ಟಾರ್ ಹಾಕದೇ ಇದ್ದರೆ ಅಭಿವೃದ್ಧಿ ಹೇಗೆ ಅಭಿವೃದ್ಧಿಯಾಗುತ್ತದೆ. ಕೆಳ ಹಂತದಿಂದಲೆ ಮಾನವ ಸಂಪನ್ಮೂಲ ಅಭಿವೃದ್ದಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios