Asianet Suvarna News Asianet Suvarna News

ಈ ಜನ್ಮದಲ್ಲಿ ಕುಮಾರಸ್ವಾಮಿ, ಬೊಮ್ಮಾಯಿ ಇಬ್ಬರೇ ಸತ್ಯ ಹರಿಶ್ಚಂದ್ರರು: ವಿಶ್ವನಾಥ್ ವ್ಯಂಗ್ಯ

ಸತ್ಯಹರಿಶ್ಚಂದ್ರ ಸತ್ತ ಮೇಲೆ ಈ ಜನ್ಮದಲ್ಲಿ ಇಬ್ಬರೇ ಸತ್ಯಹರಿಶ್ಚಂದ್ರರು ಇರೋದು. ಒಬ್ಬರು ಎಚ್.ಡಿ. ಕುಮಾರಸ್ವಾಮಿ, ಇನ್ನೊಬ್ಬರು ಬಸವರಾಜ ಬೊಮ್ಮಾಯಿ ಆಗಿದ್ದಾರೆ.

Present day Kumaraswamy and Bommai Like Satya Harishchandra criticize Vishwanath sat
Author
First Published Aug 5, 2023, 12:58 PM IST | Last Updated Aug 5, 2023, 12:58 PM IST

ಮೈಸೂರು (ಆ.05): ಸತ್ಯಹರಿಶ್ಚಂದ್ರ ಸತ್ತ ಮೇಲೆ ಈ ಜನ್ಮದಲ್ಲಿ ಇಬ್ಬರೇ ಸತ್ಯಹರಿಶ್ಚಂದ್ರರು ಇರೋದು. ಒಬ್ಬರು ಎಚ್.ಡಿ. ಕುಮಾರಸ್ವಾಮಿ, ಇನ್ನೊಬ್ಬರು ಬಸವರಾಜ ಬೊಮ್ಮಾಯಿ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಇನ್ನೊಬ್ಬರು ಬಸವರಾಜ ಬೊಮ್ಮಾಯಿ ಅವರು ಈ ಜನ್ಮದಲ್ಲಿ ಸತ್ಯ ಹರಿಶ್ಚಂದ್ರರು ಆಗಿದ್ದಾರೆ. ಆಗ ಮಾಡಿದ ಅದ್ವಾನಗಳನ್ನು ಜನ ಈಗಲೂ ಅನುಭವಿಸುತ್ತುದ್ದಾರೆ. ಕುಮಾರಸ್ವಾಮಿ ಅವರೇ ಆ ಪೆನ್ ಡ್ರೈವ್ ಏನಾಯ್ತು? ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ. ಏನೇನೋ ಆರೋಪ ಮಾಡುತ್ತೀರಿ? ಆದರೆ, ಯಾವುದನ್ನು ಸಾಬೀತು ಮಾಡಿದ್ದೀರಿ? ನೀವು ಮುಖ್ಯಮಂತ್ರಿ ಆಗಿದ್ದವರು.  ಮಾತಿನಿಂದ ನಿಮ್ಮ ಘನತೆ ಕಡಿಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು, ತಾಯಿ ಕಳಸೇಶ್ವರೀ ಆಶೀರ್ವದಿಸು!

ಕುಮಾರಸ್ವಾಮಿ ಸಿಎಂ ಸ್ಥಾನ ಸಿಗದೇ ಹತಾಶರಾಗಿದ್ದಾರೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುವುದಲ್ಲ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಗೆ ಹೊಟ್ಟೆ ಉರಿ ತಡೆದುಕೊಳ್ಳಲು ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರ ಬರುತ್ತೆ, ನಾನೇ ಸಿಎಂ ಆಗ್ತೀನಿ ಅಂತಾ ಕನಸು ಕಾಣ್ತಿದ್ರು. ಕಿಂಗ್ ಮೇಕರ್ ಆಗ್ತೀನಿ, ಸಿಎಂ ಆಗ್ತೀನಿ ಅಂದ್ಕೊಂಡಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ದಲಿತರಿಗೆ ಸಚಿವ ಸ್ಥಾನ ಕೊಡದವರು ಈಗ ಅವರ ಬಗ್ಗೆ ಮಾತಾನಾಡುತ್ತಾರೆ:  ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ- ಟಿಎಸ್‌ಪಿ ಹಣ ಬಳಕೆ ಮಾಡಿದ ಕುರಿತು ವಿಧಾನ ಪರಿಷತ್‌ ಸದಸ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ಅಗತ್ಯ ಇರುವ ಕಡೆಗೆ ಅನುದಾನ ಬಳಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಇದೆ. ಅದನ್ನೇ ಬಿಜೆಪಿ, ಜೆಡಿಎಸ್‌‌ನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಏನು ಮಾಡಿದ್ದರು.? ನಾನೂ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದೆನು. ಸಮ್ಮಿಶ್ರ ಸರ್ಕಾರದಲ್ಲಿ 12 ಸಚಿವ ಸ್ಥಾನ ಸಿಕ್ಕಿತ್ತು. ಇದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು. ಬಂಡೆಪ್ಪ ಕಾಶಂಪೂರ್ ಒಬ್ಬ ಕುರುಬ, ಇನ್ನಿಬ್ಬರು ಲಿಂಗಾಯತರು. ಎರಡು ಸಚಿವ ಸ್ಥಾನ ಖಾಲಿಯೇ ಇತ್ತು. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ದಲಿತರು ಹಾಗೂ ಮುಸ್ಲಿಮರಿಗೆ ಕೊಡಿ ಅಂತ ಕೇಳಿದ್ದೆನು. ಖಾಲಿ ಬಿಟ್ಟರೆ ಹೊರತು ದಲಿತರಿಗೆ ಸಚಿವ ಸ್ಥಾನ ಸಿಗಲಿಲ್ಲ. ಅಂಥವರು ಈಗ ದಲಿತರ ಉದ್ಧಾರದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

News Hour: ಯುರೋಪ್‌ ಟೂರ್‌ನಿಂದ ಸರ್ಕಾರಕ್ಕೆ 'ಕಮೀಷನ್‌ ಬಾಂಬ್‌' ಗಿಫ್ಟ್‌ ತಂದ ಎಚ್‌ಡಿಕೆ!

ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು: ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯ ವಿಚಾರವಾಗಿ ಮಾತನಾಡಿದ ವಿಶ್ವನಾಥ್‌, ನೊಂದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಈ ಹೋರಾಟ ಶ್ರೀ ವೀರೇಂದ್ರ ಹೆಗ್ಗಡೆ ವಿರುದ್ಧ ಅಲ್ಲ‌ ಎಂದರು. ಮತ್ತೊಂದೆಡೆ ಇದೇ ವಿಚಾರದ ಬಗ್ಗೆ ಮಾತನಾಡಿದ ಸಚಿವ ಕೆ. ವೆಂಕಟೇಶ್‌ ಅವರು, ಆ ಮೃತ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ನೊಂದ ಕುಟುಂಬಕ್ಕೆ ಪರಿಹಾರ ಸಿಗೆಬೇಕು. ಇದಕ್ಕಾಗಿ ಸರ್ಕಾರ ಕ್ರಮವಹಿಸಲಿದೆ ಎಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

Latest Videos
Follow Us:
Download App:
  • android
  • ios