Asianet Suvarna News Asianet Suvarna News

2023ರಲ್ಲಿ ಸರ್ಕಾರಿ ನೌಕರರಿಗೆ ಸಿಗಲಿವೆ 19 ಸರ್ಕಾರಿ ರಜೆ ದಿನ..!

2023ನೇ ಸಾಲಿನ 19 ಸಾರ್ವತ್ರಿಕ ರಜೆ ಹಾಗೂ 17 ಪರಿಮಿತ ರಜೆಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ 

Government Employees Will Get 19 Holidays in 2023 grg
Author
First Published Nov 22, 2022, 11:46 AM IST

ಬೆಂಗಳೂರು(ನ.22):  ರಾಜ್ಯ ಸರ್ಕಾರ 2023ನೇ ಸಾಲಿನ 19 ಸಾರ್ವತ್ರಿಕ ರಜೆ ಹಾಗೂ 17 ಪರಿಮಿತ ರಜೆಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. 2023ನೇ ವರ್ಷದ ಜ.26 ರಂದು ಗಣರಾಜ್ಯೋತ್ಸವ, ಫೆ.18-ಮಹಾ ಶಿವರಾತ್ರಿ, ಮಾ.22-ಯುಗಾದಿ ಹಬ್ಬ, ಏ.3-ಮಹಾವೀರ ಜಯಂತಿ, ಏ.4- ಗುಡ್‌ ಫ್ರೈಡೇ, ಏ.7- ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ, ಮೇ 1- ಕಾರ್ಮಿಕ ದಿನಾಚರಣೆ, ಜೂ.29-ಬಕ್ರೀದ್‌, ಜು.29-ಮೊಹರಂ ಕಡೇ ದಿನ, ಆ.15-ಸ್ವಾತಂತ್ರ್ಯ ದಿನಾಚರಣೆ, ಸೆ.18- ವರಸಿದ್ಧಿ ವಿನಾಯಕ ವೃತ, ಸೆ.28- ಈದ್‌ ಮಿಲಾದ್‌, ಅ.2- ಗಾಂಧಿ ಜಯಂತಿ, ಅ.23-ಮಹಾನವಮಿ ಆಯುಧಪೂಜೆ, ಅ.24-ವಿಜಯದಶಮಿ, ನ.1-ಕನ್ನಡ ರಾಜ್ಯೋತ್ಸವ, ನ. 14-ಬಲಿಪಾಡ್ಯಮಿ, ದೀಪಾವಳಿ, ನ.30-ಕನಕದಾಸ ಜಯಂತಿ ಹಾಗೂ ಡಿ. 25 ರಂದು ಕ್ರಿಸ್‌ಮಸ್‌ ದಿನಗಳಂದು ಸಾರ್ವತ್ರಿಕ ರಜೆ ಇರಲಿದೆ.

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜ.15), ಬಸವ ಜಯಂತಿ (ಏ.23), ನರಕ ಚತುರ್ದಶಿ (ನ.12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ (ಅ.14), ನಾಲ್ಕನೇ ಶನಿವಾರದಂದು ಬರುವ ರಂಜಾನ್‌ (ಏ.22), ಅ.28 ರಂದು ಬರುವ ವಾಲ್ಮೀಕಿ ಜಯಂತಿ ರಜೆಗಳನ್ನು ಪಟ್ಟಿಯಲ್ಲಿ ನಮೂದಿಸಿಲ್ಲ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸುತ್ತಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಚುನಾವಣೆ ಹಿನ್ನೆಲೆ ಸಾರ್ವತ್ರಿಕ ರಜೆ ಘೋಷಣೆ

ಪರಿಮಿತ ರಜೆಗಳ ಪಟ್ಟಿ:

ಸರ್ಕಾರಿ ನೌಕರರಿಗೆ ಜ.30 ರಂದು ಮಧ್ವನವಮಿ, ಮಾ.7- ಷಬ್‌-ಎ-ಬರಾತ್‌, ಮಾ.8- ಹೋಳಿ ಹಬ್ಬ, ಮಾ.30-ಶ್ರೀರಾಮನವಮಿ, ಏ.18-ಷಬ್‌-ಎ-ಖದರ್‌, ಏ.21- ಜಮತ್‌-ಉಲ್‌ ವಿದಾ, ಏ.25-ಶಂಕರಾಚಾರ್ಯ, ರಾಮಾನುಜಾಚಾರ್ಯ ಜಯಂತಿ, ಮೇ 5-ಬುದ್ಧ ಪೂರ್ಣಿಮಾ, ಆ.25- ಶ್ರೀ ವರಮಹಾಲಕ್ಷ್ಮೇ ವ್ರತ, ಆ. 29-ಋುಗ್‌ ಉಪಕರ್ಮ, ತಿರು ಓಣಂ, ಆ.30-ಯಜುರ್‌ ಉಪಕರ್ಮ, ಆ.31-ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ಸೆ.6- ಶ್ರೀ ಕೃಷ್ಣ ಜನ್ಮಾಷ್ಟಮಿ, ಸೆ.8-ಕನ್ಯಾ ಮರಿಯಮ್ಮ ಜಯಂತಿ, ಅ.18- ತುಲಾ ಸಂಕ್ರಮಣ, ನ.27-ಗುರು ನಾನಕ್‌ ಜಯಂತಿ ಹಾಗೂ ನ.28 ರಂದು ಹುತ್ತರಿ ಹಬ್ಬ ಸೇರಿ 17 ಪರಿಮಿತ ರಜೆಗಳು ಇರಲಿವೆ.

ಸೆ.3ರಂದು ಕೈಲ್‌ ಮುಹೂರ್ತ, ಅ.18 ರಂದು ತುಲಾ ಸಂಕ್ರಮಣ, ನ.28 ರಂದು ಹುತ್ತರಿ ಹಬ್ಬ ಆಚರಿಸಲು ಕೊಡಗು ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳ ಜತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿನಗಳಿಗೆ ಮೀರದಂತೆ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
 

Follow Us:
Download App:
  • android
  • ios