ನಗರಪಾಲಿಕೆಯ 36ನೆ ವಾರ್ಡಿನ ಉಪ ಚುನಾವಣೆಯು ಸೆ.3ರಂದು ನಡೆಯಲಿದೆ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಕಲ ಸಿದ್ಧತೆ ವಾರ್ಡು ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ

ಮೈಸೂರು (ಸೆ.01): ನಗರಪಾಲಿಕೆಯ 36ನೆ ವಾರ್ಡಿನ ಉಪ ಚುನಾವಣೆಯು ಸೆ.3ರಂದು ನಡೆಯಲಿದೆ. ಅಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾರ್ಡು ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಸೆ.6 ರಂದು ಬೆಳಗ್ಗೆ 8ಕ್ಕೆ ಮಹರಾಜ ಸಂಸ್ಕೃತ ಪಾಠಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು 11 ಮತಗಟ್ಟೆಗಳಿರುತ್ತವೆ. 10,656 ಮಂದಿ ಮತದಾರರಿದ್ದು ಈ ಪೈಕಿ 5628 ಪುರುಷರು, 5385 ಮಹಿಳೆಯರು ಹಾಗೂ 3 ಮಂದಿ ಇತರರು. 

ಮೊಟ್ಟ ಮೊದಲ ಬಾರಿಗೆ ಕಮಲಕ್ಕೊಲಿದ ಮೈಸೂರು ಮೇಯರ್ ಪಟ್ಟ : BJP ತಂತ್ರಗಾರಿಕೆಗೆ ಸಕ್ಸಸ್

ಸೆ.1 ರಂದು ಬೆಳಗ್ಗೆ 7ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ನಂತರ ಪ್ರಚಾರಕ್ಕೆ ಬಂದಿರುವವರು ವಾರ್ಡು ಮತದಾರರು ಫೇಸ್ ಮಾಸ್ಕ್ ಧರಿಸಿರಬೇಕು. ಮತಗಟ್ಟೆಯಲ್ಲಿ ಅಂತರ ಕಾಪಾಡಬೇಕು. ಸೋಂಕಿತರಯ ಸಂಜೆ 5 ರಿಂದ 6ರ ನಡವೆ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದ್ದಾರೆ.