Asianet Suvarna News Asianet Suvarna News

ಬೆಳೆ ವಿಮೆಗೆ ಕರ್ನಾಟಕದಲ್ಲಿ ರೈತರಿಂದ ಉತ್ತಮ ಸ್ಪಂದನೆ..!

36 ವಿಧದ ಆಹಾರ, ಎಣ್ಣೆಕಾಳು, ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಕೃಷಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು ಎಣ್ಣೆ ಕಾಳು ಬೆಳೆಗಳಿಗೆ ಶೇ.2 ರಷ್ಟು ಮತ್ತು ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಶೇ.5 ರಷ್ಟು ಪ್ರೀಮಿಯಂ ಅನ್ನು ರೈತರು ಪಾವತಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಇನ್ನುಳಿದ ಪ್ರೀಮಿಯಂ ಮೊತ್ತ ಪಾವತಿಸಲಿವೆ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬೆಳೆ ಮತ್ತು ಜಿಲ್ಲಾವಾರು ಅಂತಿಮ ದಿನಾಂಕವನ್ನು ಪಡೆಯಬಹುದು. 

good response from farmers in karnataka to crop insurance grg
Author
First Published Jul 10, 2024, 12:56 PM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಜು.10): ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ರೈತರನ್ನು ಆರ್ಥಿಕವಾಗಿ ಕೈಹಿಡಿಯುವ ಬೆಳೆ ವಿಮೆ ಯೋಜನೆಗೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದ್ದು ಪ್ರಸಕ್ತ ಮುಂಗಾರು ಹಂಗಾಮಿನಲ್ಲೂ ಅನ್ನದಾತರು ಬೆಳೆ ವಿಮೆಯತ್ತ ಮುಖ ಮಾಡಿದ್ದಾರೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಜೂ.9 ರವರೆಗೂ 5,87,641 ರೈತರು 12,29,741 ಹೆಕ್ಟೇರ್‌ಗೆ ವಿಮೆ ಮಾಡಿಸಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 2 ಲಕ್ಷ ರೈತರು ಮಾತ್ರ ವಿಮೆ ಮಾಡಿಸಿದ್ದರು. ಬರಗಾಲ, ಭಾರೀ ಮಳೆಯ ಆತಂಕದಿಂದಾಗಿ ಬೆಳೆ ವಿಮೆ ಮಾಡಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿರುವುದು ಕಂಡುಬಂದಿದೆ.

ಫಸಲ್ ಭಿಮಾ ಯೋಜನೆಯಡಿ ರೈತರ ಬೆಳೆ ವಿಮೆಗೆ ನೋಂದಣಿ ಆರಂಭ

2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 19.14 ಲಕ್ಷ ರೈತರು 15.09 ಲಕ್ಷ ಹೆಕ್ಟೇರ್‌ಗೆ ವಿಮೆ ಮಾಡಿಸಿದ್ದರು ಬರಗಾಲದಿಂದಾಗಿ ಇದರಲ್ಲಿ 15.41 ಲಕ್ಷ ರೈತರಿಗೆ 1791.02 ちなさん D ಪಾವತಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ವಿಮೆ ಮಾಡಿಸಲು ರೈತರು ಮುಂದಾಗಿದ್ದಾರೆ.

ತುಮಕೂರಿನಲ್ಲಿ 77,069 ರೈತರಿಂದ ವಿಮೆ: 

ಬೆಳೆ ವಿಮೆ ಮಾಡಿಸಲು 4 ಹಂತದಲ್ಲಿ ಜಿಲ್ಲೆ ದಿನಾಂಕವನ್ನು ಕೃಷಿ ಇಲಾಖೆ ಈಗಾಗಲೇ ಪ್ರಕಟಿಸಿದೆ. ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಯ ಕೆಲ ಬೆಳೆಗಳಿಗೆ ಮಾತ್ರ ವಿಮೆ ಮಾಡಿಸಲು ಅಂತಿಮ ದಿನ ಜು.! ಆಗಿತ್ತು. ಈ ಜಿಲ್ಲೆಗಳಲ್ಲದೇ ಇನ್ನುಳಿದ ಜಿಲ್ಲೆಗಳು ಸೇರಿದಂತೆ ಹಲವು ಬೆಳೆಗಳಿಗೆ ಜು.15, 31 ಹಾಗೂ ಆ.18 ಕೊನೆಯ ದಿನವಾಗಿದೆ. ಜು.9 ರವರೆಗಿನ ದಾಖಲೆಗಳ ಪ್ರಕಾರ ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ, 77,069 ರೈತರು 1,07,402 ಹೆಕ್ಟೇರ್‌ಗೆ ವಿಮೆ ಮಾಡಿಸಿದ್ದಾರೆ.

ಕಳೆದ ವರ್ಷದ ಬರಕ್ಕೆ ₹1791 ಕೋಟಿ ಬೆಳೆ ವಿಮೆ ಪರಿಹಾರ: ಸಚಿವ ಚಲುವರಾಯಸ್ವಾಮಿ

ಹಾವೇರಿಯಲ್ಲಿ 67,487 ರೈತರು 1,19,647 ಹೆಕ್ಟೇ‌ರ್ ಬೆಳೆಗೆ ವಿಮೆ ಮಾಡಿಸಿದ್ದಾರೆ. ಕಲಬುರಗಿಯಲ್ಲಿ 60,596 ರೈತರು (1,83,562 ಹೆಕ್ಟೇರ್), ಚಿತ್ರದುರ್ಗದಲ್ಲಿ 46,589 ರೈತರು(1,23,816 ಹೆಕ್ಟೇರ್) ಬೆಳೆ ವಿಮೆಗೆ ಮುಂದಾಗಿದ್ದಾರೆ. ಆದರೆ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಚಿಕ್ಕಮಗಳೂರು, ಬಳ್ಳಾರಿ, ಕೋಲಾರ, ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ಇಲ್ಲಿಯವರೆಗೂ ಕಂಡುಬಂದಿಲ್ಲ.

ಜಿಲ್ಲೆ, ಬೆಳೆಗೆ ಅನುಗುಣವಾಗಿ ಅಂತಿಮ ದಿನ: 

36 ವಿಧದ ಆಹಾರ, ಎಣ್ಣೆಕಾಳು, ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಕೃಷಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು ಎಣ್ಣೆ ಕಾಳು ಬೆಳೆಗಳಿಗೆ ಶೇ.2 ರಷ್ಟು ಮತ್ತು ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಶೇ.5 ರಷ್ಟು ಪ್ರೀಮಿಯಂ ಅನ್ನು ರೈತರು ಪಾವತಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಇನ್ನುಳಿದ ಪ್ರೀಮಿಯಂ ಮೊತ್ತ ಪಾವತಿಸಲಿವೆ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬೆಳೆ ಮತ್ತು ಜಿಲ್ಲಾವಾರು ಅಂತಿಮ ದಿನಾಂಕವನ್ನು ಪಡೆಯಬಹುದು. 

Latest Videos
Follow Us:
Download App:
  • android
  • ios