ಮಂತ್ರಾಲಯಕ್ಕೆ ಹೋಗುವೆ, ರಾಯರ ಆಶೀರ್ವಾದ ಪಡೆಯುತ್ತೇನೆ: ಸಿದ್ದರಾಮಯ್ಯ

ಮಂತ್ರಾಲಯ ಶ್ರೀ ನನ್ನ ಬಗ್ಗೆ ಒಳ್ಳೆಯ ಮಾತನಾಡಿ ಆಶೀರ್ವದಿಸಿದ್ದಾರೆ. ನಾನು ಮಂತ್ರಾಲಯ ಶ್ರೀಗಳಿಗೆ ಚಿರಋಣಿಯಾಗಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Going to Mantralaya seek guru raghavendra swamy blessings says cm siddaramaiah gvd

ಬೆಂಗಳೂರು (ಜು.20): ಇದುವರೆಗೂ ನಾನು ಮಂತ್ರಾಲಯಕ್ಕೆ ಹೋಗಿಲ್ಲ. ಮಂತ್ರಾಲಯ ಶ್ರೀ ಆಹ್ವಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಂತ್ರಾಲಯಕ್ಕೆ ತೆರಳಿ ರಾಯರ ಆಶೀರ್ವಾದ ಪಡೆಯುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂತ್ರಾಲಯ ಶ್ರೀ ನನ್ನ ಬಗ್ಗೆ ಒಳ್ಳೆಯ ಮಾತನಾಡಿ ಆಶೀರ್ವದಿಸಿದ್ದಾರೆ. ನಾನು ಮಂತ್ರಾಲಯ ಶ್ರೀಗಳಿಗೆ ಚಿರಋಣಿಯಾಗಿರುವೆ ಎಂದರು.

ಭೋವಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ: ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ ವಡ್ಡರ ಅಭಿವೃದ್ಧಿ ನಿಗಮವಾಗಿ ಹೆಸರು ಬದಲಾಯಿಸಿ ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಚಿತ್ರದುರ್ಗ ಭೋವಿ ಗುರುಪೀಠದಲ್ಲಿ ಶನಿವಾರ ಆಯೋಜಿಸಿದ್ದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ದೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದ ಒಳ ಹರಿವು: ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ!

ಕಾನೂನು ರೀತಿ ಸಾಧ್ಯವಿರುವ ಎಲ್ಲವನ್ನೂ ಮಾಡಿಕೊಡುತ್ತೇನೆ. ಸಾಮಾಜಿಕವಾಗಿ ಹಾಗೂ ಕಾನೂನು ರೀತಿ ಹಿಂದೇಟು ಹಾಕುವುದಿಲ್ಲ. ನನ್ನ ಹೆಸರು ಸಿದ್ದರಾಮ, ಮನೆ ದೇವರು ಸಿದ್ದರಾಮ, ಭೋವಿ ಗುರುಪೀಠದ ಶ್ರೀಗಳ ಹೆಸರು ಇಮ್ಮಡಿ ಸಿದ್ದರಾಮೇಶ್ವರ. ಭೋವಿ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ನಿಗಮ ಮಾಡಿಕೊಟ್ಟಿದೆ ಎಂದರು.

ಭೋವಿ ಸಮಾಜದಲ್ಲಿ ಬಹಳಷ್ಟು ಜನ ಅವಿದ್ಯಾವಂತರಿದ್ದಾರೆ. ಕಸುಬಿನಿಂದ ವಿದ್ಯಾವಂತರಾಗಲು ಸಾಧ್ಯವಾಗಿಲ್ಲ. ದಲಿತ, ಹಿಂದುಳಿದ ವರ್ಗಕ್ಕೆ ಸೇರಿದ ಅನೇಕ ಜನರು ವಿದ್ಯಾವಂತರಾಗಲು ಸಾಧ್ಯವಾಗಿಲ್ಲ. ಶಿಕ್ಷಣ ಮಾತ್ರ ಶೋಷಿತ ಸಮುದಾಯಗಳಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿ ತುಂಬ ಬಲ್ಲದು. ಇಂದು ಎಲ್ಲರಿಗೂ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಇಷ್ಟಾದರೂ ಸ್ವಾತಂತ್ರ್ಯ ಬಂದು 77 ವರ್ಷಗಳಲ್ಲಿ ಇನ್ನೂ ಕೂಡಾ ಶೇ.75ರಷ್ಟು ಅಷ್ಟೇ ಅಕ್ಷರಸ್ಥರಾಗಲು ಸಾಧ್ಯವಾಗಿದೆ. ಉಳಿದ 25% ಜನ ಅವಿದ್ಯಾವಂತರಾಗಿದ್ದಾರೆ ಎಂದರು.

ಮೋದಿ, ನಿರ್ಮಲಾ ರಾಜೀನಾಮೆ ಕೊಟ್ರೆ ಸಿಎಂ ರಾಜೀನಾಮೆ ಕೊಡ್ತಾರೆ: ಸಚಿವ ಆರ್‌.ಬಿ.ತಿಮ್ಮಾಪೂರ

ಭೋವಿ ಸಮಾಜ ಪರಿಶಿಷ್ಟರಲ್ಲಿ ಬರಲಿದ್ದು 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶೋಷಿತರಲ್ಲಿ ಸಾಮಾಜಿಕ, ಆರ್ಥಿಕ ಶಕ್ತಿ ತುಂಬಲು ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿಗೆ ತಂದೆವು. ಈ ವರ್ಷ ಈ ಕಾಯ್ದೆಯಡಿ 39,121 ಕೋಟಿ ಯಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲು ಇಟ್ಟಿದ್ದೇವೆ. ರಾಜ್ಯದ ಅಭಿವೃದ್ಧಿಗೆ 1,60,000 ಸಾವಿರ ಕೋಟಿ ಖರ್ಚು ಮಾಡಿದರೆ, ಪರಿಶಿಷ್ಟ ಜಾತಿ ವರ್ಗದವರಿಗೆ 24.1% ಮೀಸಲಿಡಬೇಕು ಎಂದರು.

Latest Videos
Follow Us:
Download App:
  • android
  • ios