Asianet Suvarna News Asianet Suvarna News

ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದ ಒಳ ಹರಿವು: ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ!

ಶನಿವಾರ ಬೆಳಿಗ್ಗೆ 65,000 ಕ್ಯುಸೆಕ್ ಇದ್ದ ಹೊರಹರಿವು ಮಧ್ಯಾಹ್ನ‌ 1.30 ರ ಸುಮಾರು 1 ಲಕ್ಷ ಕ್ಯುಸೆಕ್ ಗೇರಿಸಲಾಯಿತು. ತಡರಾತ್ರಿ 1.25 ಲಕ್ಷ ಕ್ಯೂಸೆಕ್‌ಗೆ ಹೊರ ಹರಿವು ಹೆಚ್ಚಿಸಲಾಗಿದೆ. ಸಧ್ಯ 1.25 ಲಕ್ಷ ಕ್ಯೂಸೆಕ್ ಹೊರ ಹರಿವನ್ನ ಕಾಯ್ದುಕೊಳ್ಳಲಾಗಿದೆ.

Huge inflow of allamatti dam Flood threat in Yadgir district gvd
Author
First Published Jul 21, 2024, 9:45 AM IST | Last Updated Jul 22, 2024, 10:47 AM IST

- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜು.21): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭಾರಿ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನಿರೀಕ್ಷೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಆಲಮಟ್ಟಿ ಜಲಾಶಯದಿಂದ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಜಲಾನಯದ ಎಲ್ಲಾ 26 ಗೇಟ್ ಗಳನ್ನು ತೆರೆದು, ವಿದ್ಯುತ್ ಘಟಕ ಸೇರಿ ಒಂದು ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ಡ್ಯಾಂನಿಂದ 1.25 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ..!
ನಿನ್ನೆ ಶನಿವಾರ ಬೆಳಿಗ್ಗೆ 65,000 ಕ್ಯುಸೆಕ್ ಇದ್ದ ಹೊರಹರಿವು ಮಧ್ಯಾಹ್ನ‌ 1.30 ರ ಸುಮಾರು 1 ಲಕ್ಷ ಕ್ಯುಸೆಕ್ ಗೇರಿಸಲಾಯಿತು. ತಡರಾತ್ರಿ 1.25 ಲಕ್ಷ ಕ್ಯೂಸೆಕ್‌ಗೆ ಹೊರ ಹರಿವು ಹೆಚ್ಚಿಸಲಾಗಿದೆ. ಸಧ್ಯ 1.25 ಲಕ್ಷ ಕ್ಯೂಸೆಕ್ ಹೊರ ಹರಿವನ್ನ ಕಾಯ್ದುಕೊಳ್ಳಲಾಗಿದೆ.

ಮೋದಿ, ನಿರ್ಮಲಾ ರಾಜೀನಾಮೆ ಕೊಟ್ರೆ ಸಿಎಂ ರಾಜೀನಾಮೆ ಕೊಡ್ತಾರೆ: ಸಚಿವ ಆರ್‌.ಬಿ.ತಿಮ್ಮಾಪೂರ

26 ಗೇಟ್‌ಗಳು ಓಪನ್, ವಿದ್ಯುತ್ ಉತ್ಪಾದನೆ ಆರಂಭ.!
ಆಲಮಟ್ಟಿ ಆಣೆಕಟ್ಟಿನ 26 ಗೇಟ್‌ಗಳನ್ನ ಓಪನ್ ಮಾಡಲಾಗಿದೆ. ಈ ಗೇಟ್ ಗಳ ಮೂಲಕ 85,000 ಕ್ಯುಸೆಕ್ ಹಾಗೂ ವಿದ್ಯುತ್ ಘಟಕದ ಮೂಲಕ 40,000 ಕ್ಯುಸೆಕ್ ಸೇರಿ ಒಂದು ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಸಧ್ಯ ವಿದ್ಯುತ್ ಉತ್ಪಾದನೆಯು ಉತ್ತಮ ರೀತಿಯಲ್ಲಿ ಸಾಗಿದೆ.

ಮೂರು ದಿನಗಳ ಕಾಲ ಒಳ ಹರಿವು ಹೆಚ್ಚಳ ಸಾಧ್ಯತೆ..!
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ  ಮುಂದಿನ ಎರಡು ಮೂರು ದಿನ ಒಂದು ಲಕ್ಷ ಕ್ಯುಸೆಕ್ ಗೂ ಅಧಿಕ ನೀರು ಹರಿದು ಬರುವ ಸಾಧ್ಯತೆಯಿದ್ದು, ಮುಂಜಾಗ್ರತೆಯ ಕ್ರಮವಾಗಿ ನಿನ್ನೆ ರಾತ್ರಿಯಿಂದಲೇ ಹೊರಹರಿವನ್ನು ಹೆಚ್ಚಿಸಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

261 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ..!
ಎಲ್ಲಾ ಗೇಟ್ ಗಳನ್ನು ಈ ವರ್ಷದಲ್ಲಿ ಇದೇ ಮೊದಲ ಬಾರಿ ತೆರೆಯಲಾಗಿದೆ‌. ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 40,000 ಕ್ಯುಸೆಕ್ ನೀರು ಹರಿಸುತ್ತಿದ್ದು, ಇದರಿಂದ ಎಲ್ಲಾ ಆರೂ ಘಟಕಗಳ ಮೂಲಕ 261 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಅಧಿಕಾರಿ ಚಂದ್ರಶೇಖರ ದೊರೆ ತಿಳಿಸಿದ್ದಾರೆ.

ಸುಮ್ಮನೆ ಪ್ರತಿಪಕ್ಷಗಳನ್ನು ಬೆದರಿಸಬೇಡಿ, ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ: ವಿಜಯೇಂದ್ರ

ಜಿಲ್ಲೆಯಲ್ಲಿ ನೆರೆಯ ಆತಂಕ ಇಲ್ಲ.!
519.6 ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ನಿನ್ನೆ ಸಂಜೆ 6 ಕ್ಕೆ  518 ಮೀ ವರೆಗೆ ನೀರು ಸಂಗ್ರಹವಿದ್ದು, ಸಧ್ಯ 1 ಲಕ್ಷ ಕ್ಯುಸೆಕ್ ಒಳಹರಿವು ಇದೆ. ಜಲಾಶಯದಲ್ಲಿ 97.7 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಒಳಹರಿವು ಹೆಚ್ಚಾದರೆ ಮುಂಜಾಗ್ರತೆಯ ಕ್ರಮವಾಗಿ ಹೊರಹರಿವನ್ನು ಹೆಚ್ಚಿಸಬಹುದು ಎನ್ನಲಾಗಿದೆ. ಸಧ್ಯಕ್ಕೆ ನೆರೆಯ ಆತಂಕ ಈ ಭಾಗದಲ್ಲಿಲ್ಲ.

Latest Videos
Follow Us:
Download App:
  • android
  • ios