ಗೋರೂಚ ಸೇರಿದಂತೆ ಮೂವರಿಗೆ ನಾಡೋಜ ಗೌರವ

* ಹಂಪಿಯ ಕನ್ನಡ ವಿವಿಯಿಂದ ನೀಡುವ ನಾಡೋಜ ಗೌರವ..

* ಕನ್ನಡ ನೆಲದಲ್ಲಿ ನಡೆಯಲಿದೆ ನುಡಿಹಬ್ಬದ ಸಂಭ್ರಮ

* ಭಾಷ್ಯಂ ಸ್ವಾಮಿ ಹಾಗೂ ಪ್ರೊ. ಟಿವಿ ವೆಂಕಟಾಚಲ ಶಾಸ್ತ್ರೀಯವರಿಗೂ ದೊರೆತ ಗೌರವ
 

Go ru channabasappa Bhashyam Swami T V Venkatachala Sastry will get Nadoja Award 2022  By hampi kannada university  san

ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ  (ಏ.7):  
ಐತಿಹಾಸಿಕ ಹಂಪಿಯ (Hampi) ಕನ್ನಡ ವಿಶ್ವವಿದ್ಯಾಲಯದಲ್ಲಿಗ (Kannada Universit) ನುಡಿ ಹಬ್ಬದ ಸಂಭ್ರಮ.. ‌ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಷ್ಠಿತ ನಾಡೋಜ ಪದವಿಯನ್ನು (Nadoja) ಮೂವರು ಸಾಧಕರಿಗೆ ಘೋಷಣೆ ಮಾಡಲಾಗಿದೆ. ಹಿರಿಯ ಸಾಹಿತಿಗಳಾದ ಗೊ.ರು. ಚನ್ನಬಸಪ್ಪ (Go ru channabasappa), ಭಾಷ್ಯಂ ಸ್ವಾಮಿ (Bhashyam Swami) ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ (T V Venkatachala Sastry) ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

ಹಂಪಿ ಕನ್ನಡ ವಿವಿಯ ನಾಡೋಜ ಗೌರವಕ್ಕೆ ಜಿ . ಕೃಷ್ಣಪ್ಪ, ಮಲೆಯೂರು ಗುರುಸ್ವಾಮಿ, ಡಾ ಎಸ್.ಸಿ. ಶರ್ಮಾ, ಗುರುಲಿಂಗ ಕಾಪಸೆ, ಡಾ . ಶಿವಾನಂದ ನಾಯಕ , ರಮೇಶ ಎಂ.ಕೆ. ನಾಸೀರ್ ಅಹಮ್ಮದ್ ಸೇರಿದಂತೆ ಒಟ್ಟು ಹತ್ತು ಜನರ ಹೆಸರು ನಾಡೋಜಕ್ಕೆ ಶಿಫಾರಸು ಮಾಡಲಾಗಿತ್ತು.  ಅಂತಿಮವಾಗಿ ರಾಜ್ಯಪಾಲರು ಮೂವರ ಹೆಸರಿಗೆ ಅಂಕಿತ ಹಾಕಿದ್ದಾರೆ ಎಂದು  ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ತಿಳಿಸಿದ್ದಾರೆ.

ಏಪ್ರಿಲ್ 12 ರಂದು ನುಡಿಹಬ್ಬದ ಸಂಭ್ರಮ: ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನುಡಿಹಬ್ಬ ಕಾರ್ಯಕ್ರಮವನ್ನು ಏ.12ರಂದು ಸಂಜೆ 5.30 ಕ್ಕೆ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಬಿಜೆಪಿ ಕಾರ್ಯಕಾರಣಿ ವೇದಿಕೆಯಲ್ಲಿ ಹಂಪಿ ಕಲಾ ವೈಭವ: ವಿಜ​ಯ​ನ​ಗ​ರ​ದಿಂದಲೇ ಚುನಾ​ವಣಾ ರಣಕಹ​ಳೆ
ರಾಜ್ಯಪಾಲರೇ ಕೇಂದ್ರ ಬಿಂದು:
ವಿಶ್ವವಿದ್ಯಾಲಯದ ನುಡಿಹಬ್ಬದ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ರಾಜ್ಯಪಾಲರು ಬರುತ್ತಾರೆ. ಆದರೆ,  ಕಳೆದ ಹಲವು ವರ್ಷಗಳಿಂದ ‌ನುಡಿಹಬ್ಬ  ಕಾರ್ಯಕ್ರಮದಲ್ಲಿ ರಾಜ್ಯಪಾಲರ ಗೈರು ಎದ್ದು ಕಾಣುತ್ತಿತ್ತು. ಆದ್ರೇ ಈ ಬಾರಿಯ ನುಡಿಹಬ್ಬದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (thawar chand gehlot) ಆಗಮಿಸಿ ನಾಡೋಜ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Jio 4G at Hampi ವಿಶ್ವ ಪ್ರಸಿದ್ಧ ಹಂಪಿಯನ್ನು 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ ಜಿಯೋ!

ಇನ್ನೂ ಚಿತ್ರದುರ್ಗದ ಮುರುಘಾ ಶರಣರು, ಪತ್ರಕರ್ತ ಪದ್ಮರಾಜ ದಂಡಾವತಿ, ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಎಸ್. ಪುಟ್ಟಸ್ವಾಮಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಅವರಿಗೆ ಡಿ.ಲಿಟ್ ಹಾಗೂ 1387 ವಿದ್ಯಾರ್ಥಿಗಳಿಗೆ ವಿವಿಧ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್ . ಅಶ್ವತ್ಥನಾರಾಯಣ ಪ್ರದಾನ ಮಾಡಲಿದ್ದಾರೆ. ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ . ಕಟ್ಟಿಮನಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

Latest Videos
Follow Us:
Download App:
  • android
  • ios