Jio 4G at Hampi ವಿಶ್ವ ಪ್ರಸಿದ್ಧ ಹಂಪಿಯನ್ನು 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ ಜಿಯೋ!
- ಹಂಪಿಯಲ್ಲಿ ಅತ್ಯಧಿಕ ವೇಗದ ಜಿಯೋ 4ಜಿ ಲೈಫ್
- ಡಿಜಿಟಲ್ ಸಂಪರ್ಕದಿಂದ ಸ್ಥಳೀಯರು,ಪ್ರವಾಸಿಗರಿಗೆ ಅನುಕೂಲ
- ಜಿಯೋದಿಂದ ಕರ್ನಾಟಕದಾದ್ಯಂತ ತಡೆರಹಿತ ಸಂಪರ್ಕ
ಹಂಪಿ(ಮಾ.18): ಜಿಯೋ ಇತ್ತೀಚೆಗೆ ಹಂಪಿಯನ್ನು ಟ್ರೂ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದೆ. ಎಲ್ಲಾ ಪ್ರವಾಸಿಗರಿಗೆ ಡಿಜಿಟಲ್ ಸಂಪರ್ಕವನ್ನು ಪಡೆಯಲು ಹಾಗೂ ಸೇವೆ ನೀಡಲು ಜಿಯೋ ಮುಂದಾಗಿದೆ. ಸ್ಥಳೀಯ ಕುಟುಂಬಗಳು ಮತ್ತು ಇಡೀ ಸಮುದಾಯವು ಈ ಸೇವೆಯಿಂದ ಸಂತೋಷ ಪಡೆದಿವೆ. ನೆಟ್‌ವರ್ಕ್ ಲಭ್ಯತೆಗಾಗಿ ಪ್ರತಿದಿನ ಹಲವು ಕಿಲೋಮೀಟರ್ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಯುವಜನತೆ ಸುರಕ್ಷಿತ ವಾತಾವರಣದಲ್ಲಿ ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಪೋಷಕರು ಜಿಯೋಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಹಂಪಿಯಲ್ಲಿ 4ಜಿ ಸೇವೆ ಕೊರತೆಯಿಂದ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಮನೆಯಿಂದ ಕೆಲಸ ಮಾಡುವ ಬಹುತೇಕರು ಸಮಸ್ಯೆ ಅನುಭವಿಸುತ್ತಿದ್ದರು. ಈ ಪರಿಸ್ಥಿತಿಯಿಂದ ಸ್ಥಳೀಯರು ತಮ್ಮ ಮನೆಗಳಿಂದ ನೆಟ್‌ವರ್ಕ್ ಸರಿಯಾಗಿ ಸಿಗುವ ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೀಗ ಈ ಸಮಸ್ಯೆಗೆ ಜಿಯೋ ಮುಕ್ತಿ ನೀಡಿದೆ.
ಜಿಯೋದಿಂದ ಗ್ರಾಹಕರಿಗೆ ಮತ್ತೊಂದು ಭರ್ಜರಿ ಕೊಡುಗೆ, ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಪ್ಲಾನ್!
ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ, ಪ್ರವಾಸಿಗರಿಗೆ ನೆಚ್ಚಿನ ಐತಿಹಾಸಿಕ ತಾಣ. ಇದೀಗ ಈ ತಾಣದಲ್ಲಿ ಜಿಯೋ ಅತ್ಯುತ್ತಮ ಸೇವೆ ನೀಡುತ್ತಿದೆ. ಜಿಯೋ ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ವೇಗವರ್ಧಕ. ತನ್ನ ಸೇವೆಗಳನ್ನು ಆರಂಭಿಸಿದ ದಿನದಿಂದಲೇ, ಜಿಯೋ ಡಿಜಿಟಲ್ ಕ್ರಾಂತಿಯನ್ನು ಉಂಟುಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಡೇಟಾ ಕೈಗೆಟಕುವಂತೆ ಮಾಡಿತು. ಈ ಡಿಜಿಟಲ್ ಕ್ರಾಂತಿಯು ಈಗ ನಮ್ಮ ದೇಶದ ದೂರದ ಪ್ರದೇಶಗಳಿಗೂ ಪ್ರವೇಶಿಸುತ್ತಿದೆ.
ಕರ್ನಾಟಕದಲ್ಲಿ Jio ನ ಹೊಸ ಮುಂದಾಳತ್ವವು Jio ನ ಕೊಡುಗೆ ಮತ್ತು Jio ಡಿಜಿಟಲ್ ಲೈಫ್ ರಾಜ್ಯದ ಚಂದಾದಾರರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಈ ಲಾಭಗಳು ಹೀಗಿವೆ:
Jio Games ಗ್ರಾಹಕರಿ ಮತ್ತೊಂದು ಕೊಡುಗೆ, ಒನ್ ಪ್ಲಸ್ ಟಿವಿಯಲ್ಲಿ ಆಡಬಹುದು ಜಿಯೋ ಗೇಮ್ಸ್!
i) ಜಿಯೋ ಮೂಲಕ ಕರ್ನಾಟಕದಾದ್ಯಂತ ತಡೆರಹಿತ ಸಂಪರ್ಕ, ದೃಢವಾದ ಮತ್ತು ವ್ಯಾಪಕವಾದ 4G ನೆಟ್‌ವರ್ಕ್
ii) ಜಿಯೋದ ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳು
iii) JioTV (ಪ್ರಯಾಣದಲ್ಲಿ ಹೆಚ್ಚು ಜನಪ್ರಿಯವಾಗಿರುವ, ಕ್ಯಾಚ್-ಅಪ್ ಟಿವಿ ಅಪ್ಲಿಕೇಶನ್), JioCinema ಮತ್ತು ಇನ್ನಿತರ ವಿಷಯಗಳನ್ನು ಒಳಗೊಂಡಿರುವ Jio ಪ್ರೀಮಿಯಂ ಅಪ್ಲಿಕೇಶನ್‌ಗಳ ಪ್ರವೇಶ.
iv) ಕರ್ನಾಟಕದಾದ್ಯಂತ ಜಿಯೋ ಸಿಮ್‌ಗಳು ಸುಲಭವಾಗಿ ಲಭ್ಯ
v) ಸರಳ ಮತ್ತು ಅನುಕೂಲಕರ ಆನ್‌ಬೋರ್ಡಿಂಗ್ ಅನುಭವ
ಗ್ರಾಹಕರ ತೃಪ್ತಿ ಜಿಯೋ ಅನುಭವದ ಮೂಲಾಧಾರವಾಗಿದೆ. ಈ ಮುಂದಾಳತ್ವವು ಜಿಯೋ ತನ್ನ ದೃಢವಾದ ನೆಟ್‌ವರ್ಕ್ ಮತ್ತು ಜಿಲ್ಲೆಯಾದ್ಯಂತ ವ್ಯಾಪಕವಾದ ಲಭ್ಯತೆಯ ಮೂಲಕ ಹಂಪಿ ನಿವಾಸಿಗಳಿಗೆ ಸರ್ವತ್ರ ಮತ್ತು ತಡೆರಹಿತ ಅನುಭವವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
ಹಂಪಿಯ ನಿವಾಸಿಗಳು ಈಗ ಜಿಯೋ ಡಿಜಿಟಲ್ ಲೈಫ್ ಅನ್ನು ಇನ್ನಷ್ಟು ಅನುಕೂಲಕರವಾಗಿ ಅನುಭವಿಸಬಹುದು ಮತ್ತು ಜಿಯೋದ ಕೈಗೆಟುಕುವ ದರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು. ಚಂದಾದಾರರು ತಮ್ಮ ಡಿಜಿಟಲ್ ಅಗತ್ಯಗಳಿಗೆ ಸರಿಹೊಂದುವಂತೆ ಹಲವು ಟ್ಯಾರಿಫ್ ಪ್ಲಾನ್ ಗಳಿಂದ ಆಯ್ಕೆ ಮಾಡಬಹುದು.
ಜಿಯೋದ ಡಿಸ್ನಿ ಹಾಟ್‌ಸ್ಟಾರ್ ಪ್ರೀಮಿಯಂ ಪ್ಲಾನ್
1,499ರು. ಹಾಗೂ 4,199 ರು.ಗಳ ಎರಡು ಹೊಸ ಪ್ಲಾನ್ ಜಿಯೋ ಘೋಷಿಸಿದೆ. 1499 ರು.ಗಳ ಪ್ಯಾಕ್ ಹಾಕಿಸಿದ್ರೆ ಒಂದು ವರ್ಷ ಡಿಸ್ನಿ ಹಾಟ್‌ಸ್ಟಾರ್ ಪ್ರೀಮಿಯಂ ಆಯ್ಕೆ ಉಚಿತವಾಗಿ ದೊರೆಯಲಿದೆ. ಜೊತೆಗೆ 84 ದಿನಗಳಿಗೆ ನಿತ್ಯ 2 ಜಿಬಿ ಡಾಟಾ, ಅನಿಯಮಿತ ಕಾಲಿಂಗ್, ಪ್ರತೀ ದಿನ 100 ಎಸ್‌ಎಂಎಸ್ ಸಿಗುತ್ತದೆ. 4199 ರು.ಗಳ ಪ್ಲಾನ್ ಹಾಕಿಸಿಕೊಂಡರೆ 1 ವರ್ಷ ಕಾಲ ಡಿಸ್ನಿ ಹಾಟ್‌ಸ್ಟಾರ್ ಪ್ರೀಮಿಯಂ ಜೊತೆಗೆ 3 ಜಿಬಿ ಡಾಟಾದ ಜೊತೆಗೆ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ.