ಬಿಜೆಪಿ ಸರ್ಕಾರದ ಮಾನದಂಡದಲ್ಲೇ ನೆರೆ ಪರಿಹಾರ ನೀಡಿ: ಬೊಮ್ಮಾಯಿ
ಕಷ್ಟದಲ್ಲಿರುವ ರೈತರಿಗೂ ರಾಜ್ಯ ಸರ್ಕಾರ ನೈತಿಕ ಧೈರ್ಯ ಹೇಳಬೇಕಾಗಿದೆ. ಆದರೆ ಕಾಂಗ್ರೆಸ್ ನವರು ಬೇರೆ ಬೇರೆ ಗದ್ದಲದಲ್ಲಿ ಇದ್ದಾರೆ. ಮಳೆಯಿಂದಾಗಿ ಉತ್ತರ ಕರ್ನಾಟಕದ ಒಳನಾಡು ಪ್ರದೇಶಗಳಲ್ಲಂತೂ ಸಾಕಷ್ಟು ಹಾನಿಯಾಗಿದೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾವೇರಿ(ಜು.29): ರಾಜ್ಯದಲ್ಲಿ ಪ್ರವಾಹದ ಭೀತಿಯಲ್ಲಿರುವ ಜನರನ್ನು ತಕ್ಷಣವೇ ಸ್ಥಳಾಂತರ ಮಾಡಬೇಕು. ಮಳೆಯಿಂದಾಗಿ ಈವರೆಗೆ 40ಕ್ಕೂ ಹೆಚ್ಚು ಸಾವಾಗಿದೆ. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಕೊಡುತ್ತಿದ್ದ ಮಾನದಂಡದ ಮೇಲೆಯೇ ಪರಿಹಾರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟದಲ್ಲಿರುವ ರೈತರಿಗೂ ರಾಜ್ಯ ಸರ್ಕಾರ ನೈತಿಕ ಧೈರ್ಯ ಹೇಳಬೇಕಾಗಿದೆ. ಆದರೆ ಕಾಂಗ್ರೆಸ್ ನವರು ಬೇರೆ ಬೇರೆ ಗದ್ದಲದಲ್ಲಿ ಇದ್ದಾರೆ. ಮಳೆಯಿಂದಾಗಿ ಉತ್ತರ ಕರ್ನಾಟಕದ ಒಳನಾಡು ಪ್ರದೇಶಗಳಲ್ಲಂತೂ ಸಾಕಷ್ಟು ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರು, ಸಚಿವರ ಮಧ್ಯೆ ಸಮನ್ವಯತೆಯೇ ಇಲ್ಲ: ಬೊಮ್ಮಾಯಿ
ಸಚಿವರಾರೂ ಅತ್ತ ಧಾವಿಸಿ ಕೆಲಸ ಮಾಡುತ್ತಿಲ್ಲ. ಕೂಡಲೇ ಅಂಥ ಮನೆಗಳಿಗೆ ಸಚಿವರು ಭೇಟಿ ನೀಡಿ ನಷ್ಟಆದ ಮನೆಗಳಿಗೆ 3 ಲಕ್ಷ ರು.ಯಿಂದ 5 ಲಕ್ಷ ರು.ವರೆಗೆ ಪರಿಹಾರ ಕೊಡಬೇಕು. ಹೆಕ್ಟೇರ್‌ಗೆ 13,000 ಬೆಳೆನಾಶದ ಪರಿಹಾರ ಕೊಡಬೇಕು ಎಂದರು.