Asianet Suvarna News Asianet Suvarna News

Karnataka Assembly Session : ರಾಜ್ಯದ ಸಾವಿರಾರು ರೈತರಿಗೆ ಗುಡ್ ನ್ಯೂಸ್ : ಪಹಣಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

  •  ಇನಾಮು ಭೂಮಿಗೆ ಪಹಣಿ ನೀಡುವ ಮಸೂದೆ ಮಂಡನೆ
  • -ಮಸೂದೆಯಲ್ಲಿ ಪಹಣಿಗೆ ಅರ್ಜಿ ಸಲ್ಲಿಕೆ ಅವಧಿ 1 ವರ್ಷ ವಿಸ್ತರಣೆಗೆ ಅವಕಾಶ
  • -ರಾಜ್ಯದಲ್ಲಿದೆ 1 ಲಕ್ಷ ಹೆಕ್ಟೇರ್‌ ಇನಾಮು ಭೂಮಿ, ಸಾವಿರಾರು ರೈತರಿಗೆ ಅನುಕೂಲ
  • - ಕೈಗಾರಿಕೆಗೆ ಪ್ರತ್ಯೇಕ ಆಸ್ತಿ ತೆರಿಗೆ, ಸರ್ಕಾರಿ ಸರ್ವೇಯರ್‌ ಕುರಿತ ಮಸೂದೆಯೂ ಮಂಡನೆ
     
Gift Land Bill Passed in   Karnataka Assembly Session  snr
Author
Bengaluru, First Published Dec 16, 2021, 10:25 AM IST

 ವಿಧಾನಸಭೆ (ಡಿ.16):   ರಾಜ್ಯದ (Karnataka) ವಿವಿಧೆಡೆ ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನಿಗೆ (Land) (ಇನಾಮು) ಪಹಣಿ ಪಡೆಯಲು ಅನುಕೂಲವಾಗಲು ಅರ್ಹರು ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಿಸುವ ಸಂಬಂಧ ಕರ್ನಾಟಕ ಕೆಲವು ಇನಾಮುಗಳ ರದ್ದತಿ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ ಸೇರಿದಂತೆ ಮೂರು ವಿಧೇಯಕಗಳನ್ನು ಮಂಡಿಸಲಾಯಿತು. ಬುಧವಾರ ಸದನದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ (R Ashok) ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕರ್ನಾಟಕ (Karnataka) ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಮಂಡಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ ಮಂಡಿಸಿದರು.

ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಎಕರೆಯಷ್ಟುಇನಾಮು ಭೂಮಿ (Land) ಇದ್ದು, ಹಲವ ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅದಕ್ಕೆ ಸರಿಯಾದ ಪಹಣಿ ಇಲ್ಲದ ಕಾರಣ ರೈತರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ. ಸರ್ಕಾರಿ ಯೋಜನೆಗಳಿಗೆ ಭೂ ಸ್ವಾಧೀನವಾದರೆ ಪರಿಹಾರ ಸಿಗದೆ ಸಂಕಷ್ಟಕ್ಕೊಳಗಾಗುತ್ತಿದ್ದಾರೆ.ಅಂತಹವರಿಗೆ ನಿಯಮಾನುಸಾರ ಅರ್ಹ ರೈತರು ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಿಸಲು ಕರ್ನಾಟಕ ಕೆಲವು ಇನಾಮುಗಳ ರದ್ದಿತಿ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.

ಸರ್ಕಾರಿ ಸರ್ವೇಯರ್‌ಗಳಿಗೂ ಅವಕಾಶ:  ಸರ್ಕಾರಿ ಸರ್ವೇಯರ್‌ಗಳು ಅಸ್ತಿಗಳ ವಿಭಜನೆಗೆ ನಕ್ಷೆ (11ಇ ಸ್ಕೆಚ್‌), ಭೂಪರಿವರ್ತನೆ ಪೋಡಿ ಮಾಡುವ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ ಸಂಬಂಧ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ಪ್ರಸ್ತುತ ಈ ಕಾರ್ಯವನ್ನು ಪರವಾನಗಿ ಪಡೆದ ಸರ್ವೇಯರ್‌ ಮಾತ್ರ ಮಾಡುತ್ತಿದ್ದಾರೆ. ವಿಧೇಯಕದಲ್ಲಿ ಸರ್ಕಾರಿ ಸರ್ವೇಯರ್‌ಗಳಿಗೂ ಅವಕಾಶ ನೀಡಲಾಗಿದೆ.

ಕೈಗಾರಿಕೆಗಳಿಗೆ ಆಸ್ತಿ ತೆರಿಗೆ:  ನಗರ (City) ಸ್ಥಳೀಯ ಸಂಸ್ಥೆಗಳಲ್ಲಿನ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ದರವನ್ನು ನಿಗದಿಪಡಿಸಲು ಅನುಕೂಲವಾಗುವ ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ಕೈಗಾರಿಕೆಗಳಿಗೆ ಆಸ್ತಿ ತೆರಿಗೆಯನ್ನು ವಾಣಿಜ್ಯ ಕಟ್ಟಡಗಳಿಗಿಂತ ಕಡಿಮೆ ವಿಧಿಸಿದರೆ ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನ ಮತ್ತು ಸ್ಥಾಪನೆಗೆ ಅನುಕೂಲವಾಗುತ್ತದೆ. ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾದರೆ ಸ್ಥಳೀಯವಾಗಿ ಉದ್ಯೋಗವಕಾಶ ಹಾಗೂ ಆದಾಯ ಹೆಚ್ಚಳವಾಗಲಿದೆ ಎಂಬ ಉದ್ದೇಶದಿಂದ ವಿಧೇಯಕನ್ನು ಮಂಡಿಸಲಾಗಿದೆ.

ಎಸ್‌ಸಿ ಎಸ್‌ಟಿ ಜಮೀನು ಪರಿವರ್ತನೆ ಇಲ್ಲ :    ಸರ್ಕಾರದಿಂದ ಎಸ್‌ಸಿ,ಎಸ್‌ಟಿ  (SC ST ) ಸಮುದಾಯದವರಿಗೆ ಮಂಜೂರು ಮಾಡಿರುವ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಬಳಕೆಗೆ ಭೂ ಪರಿವರ್ತನೆ (Land  Conversion) ಮಾಡಲು ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ (R Ashok) ಸ್ಪಷ್ಟಪಡಿಸಿದ್ದಾರೆ. ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿ (BJP) ಸದಸ್ಯ ರಘುಪತಿ ಭಟ್‌, ಪಿಟಿಸಿಎಲ್‌ (ಪರಿಶಿಷ್ಟಜಾತಿ ಮತ್ತು ಪಂಗಡದವರ ಭೂ ಪರಬಾರೆ ನಿಷೇಧ ಕಾಯ್ದೆ) ಅನ್ವಯ ಭೂಮಿ ಮಾರಾಟ ಮಾಡಲು ಅವಕಾಶವಿಲ್ಲ. ಆದರೆ ಸಂಬಂಧಪಟ್ಟವರು ಮಾರಾಟ ಮಾಡದೆ ತಮ್ಮ ಸ್ವಂತ ಬಳಕೆಗೆ ವಸತಿ ಅಥವಾ ವಾಣಿಜ್ಯ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇಲ್ಲದಂತೆ ಮಾಡಲಾಗಿದೆ. ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಸರ್ಕಾರದ ಅನುಮತಿ ಬೇಕು ಎಂದು ಹೇಳುತ್ತಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್‌. ಅಶೋಕ್‌, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಕೃಷಿ (Agriculture) ಬಳಕೆ ಉದ್ದೇಶಕ್ಕಾಗಿ ಸರ್ಕಾರ ಭೂಮಿ ಮಂಜೂರು ಮಾಡಿರುತ್ತದೆ. ಅದನ್ನು ಬೇರೆ ಉದ್ದೇಶಗಳ ಬಳಕೆಗೆ ಪರಿವರ್ತನೆ ಮಾಡಿದರೆ ಅದು ಬಲಾಢ್ಯರ ಪಾಲಾಗುತ್ತದೆ. ಸುಲಭವಾಗಿ ವಿಕ್ರಯವಾಗುತ್ತದೆ. ಹೀಗಾಗಿ ಹೈಕೋರ್ಟ್‌ ಸಹ ಸ್ಪಷ್ಟಆದೇಶ ನೀಡಿದ್ದು, ಭೂ ಪರಿವರ್ತನೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಗೋವಿಂದ ಕಾರಜೋಳ, ಈ ನಿಯಮವನ್ನು ಸಡಿಲಗೊಳಿಸಿದರೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಬಳಿ ಇಂಚು ಜಾಗವೂ ಉಳಿಯುವುದಿಲ್ಲ. ಈ ಕಾನೂನು (Law) ಸಡಿಲಗೊಳಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.

Follow Us:
Download App:
  • android
  • ios