Asianet Suvarna News Asianet Suvarna News

ಕೃಷಿ ಕಾನೂನು ಸಾಕು, MSP Bill ಬಗ್ಗೆ ಚರ್ಚಿಸೋಣ ಎಂದ ವರುಣ್ ಗಾಂಧಿ!

* ಎಂಎಸ್‌ಪಿ ಕಾನೂನನ್ನು ಪ್ರತಿಪಾದಿಸಿದ ಭಾರತೀಯ ಜನತಾ ಪಕ್ಷದ ಸಂಸದ ವರುಣ್ ಗಾಂಧಿ

* ಎಂಎಸ್‌ಪಿ ಕಾನೂನಿಗೆ ಸಂಬಂಧಿಸಿದಂತೆ ಕೆಲವು ಸಲಹೆಗಳ ಪಟ್ಟಿಯನ್ನು ಸಂಸತ್ತಿಗೆ ಸಲ್ಲಿಸಿದ ವರುಣ್'

* ಈ ಬಗ್ಗೆ ಯಾವುದೇ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ ಎಂದ ಸಂಸದ

BJP MP Varun Gandhi submits private members bill for legal guarantee of MSP pod
Author
Bangalore, First Published Dec 12, 2021, 4:47 PM IST
  • Facebook
  • Twitter
  • Whatsapp

ನವದೆಹಲಿ(ಡಿ.12): ಎಂಎಸ್‌ಪಿ ಕಾನೂನನ್ನು ಪ್ರತಿಪಾದಿಸಿದ ಭಾರತೀಯ ಜನತಾ ಪಕ್ಷದ ಸಂಸದ ವರುಣ್ ಗಾಂಧಿ ಭಾನುವಾರ ಮಾತನಾಡಿ, ಈ ಬಗ್ಗೆ ಬಹಳ ಸಮಯದಿಂದ ಚರ್ಚೆ ನಡೆಯುತ್ತಿದೆ, ಈಗ ಎಂಎಸ್‌ಪಿ ಕಾನೂನು ಜಾರಿಗೊಳಿಸಬೇಕಾದ ಸಮಯ ಬಂದಿದೆ ಎಂದಿದ್ದಾರೆ. ಅಲ್ಲದೇ ಎಂಎಸ್‌ಪಿ ಕಾನೂನಿಗೆ ಸಂಬಂಧಿಸಿದಂತೆ ಕೆಲವು ಸಲಹೆಗಳ ಪಟ್ಟಿಯನ್ನು ಅವರು ಸಂಸತ್ತಿಗೆ ಸಲ್ಲಿಸಿದ್ದಾರೆ ಎಂಬುವುದು ಉಲ್ಲೇಖನೀಯ.

ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್ ಗಾಂಧಿ 'ಭಾರತದ ರೈತರು ಮತ್ತು ಅವರ ಸರ್ಕಾರಗಳು ಕೃಷಿ ಬಿಕ್ಕಟ್ಟಿನ ಬಗ್ಗೆ ಬಹಳ ಸಮಯದಿಂದ ಚರ್ಚೆ ನಡೆಸುತ್ತಿವೆ. MSP ಕಾಯಿದೆಯ ಸಮಯ ಬಂದಿದೆ. ನಾನು ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಂಸತ್ತಿಗೆ ಸಲ್ಲಿಸಿದ್ದೇನೆ, ಇದು ಕಾನೂನಿನ ಅಗತ್ಯ ಭಾಗವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ಯಾವುದೇ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಇನ್ನು ವರುಣ್ ಗಾಂಧಿ ಬಹಳ ಸಮಯದಿಂದ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ, ಈ ಮಧ್ಯೆ ಅವರು ಈ ವಿವಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧವೂ ಕಿಡಿ ಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ನಂತರ ವರುಣ್ ಗಾಂಧಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಎಂಎಸ್‌ಪಿ ಮತ್ತು ಇತರ ವಿಷಯಗಳ ಬಗ್ಗೆ ಕಾನೂನು ಮಾಡುವ ಬೇಡಿಕೆ ಬಗ್ಗೆಯೂಡ ತಕ್ಷಣವೇ ನಿರ್ಧರಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಇದರೊಂದಿಗೆ ರೈತ ಚಳವಳಿಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲದೇ, ಲಖೀಂಪುರ ಖೇರಿ ಘಟನೆ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಬಣ್ಣಿಸಿದ್ದಾರೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಲಖಿಂಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಕಾರು ಚಲಾಯಿಸಿದ್ದ ಆರೋಪವಿದೆ ಎಂಬುವುದು ಉಲ್ಲೇಖನೀಯ. ಆರೋಪದ ಪ್ರಕಾರ, ಲಖೀಂಪುರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಕೇಂದ್ರ ಸಚಿವರ ಪುತ್ರ ಅತಿವೇಗದಲ್ಲಿ ಕಾರನ್ನು ತಂದು ರೈತರ ಮೇಲೆ ಓಡಿಸಿದರು, ಇದರಲ್ಲಿ ಅನೇಕ ರೈತರು ಸಾವನ್ನಪ್ಪಿದ್ದರು.

ಗಮನಾರ್ಹ ಸಂಗತಿಯೆಂದರೆ, ಕೃಷಿ ಕಾಯ್ದೆಯನ್ನು ಸಂಸತ್ತು ರದ್ದುಗೊಳಿಸಿದ ನಂತರ, ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿದರು. ಸುಮಾರು ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ಬೀಡು ಬಿಟ್ಟಿದ್ದ ರೈತರು ಇದೀಗ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ.

Follow Us:
Download App:
  • android
  • ios