ರಾಜ್ಯ ಸರ್ಕಾರದಿಂದ 'ಗೆಳತಿಯರೊಂದಿಗೆ ಹಾರೋಣ ಕಾರ್ಯಕ್ರಮ..' ಶಿಕ್ಷಣ ಇಲಾಖೆ ಫುಲ್ ಟ್ರೋಲ್!
ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ 'ಗೆಳತಿಯರೊಂದಿಗೆ ಹಾರೋಣ' ಕಾರ್ಯಕ್ರಮದ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದೆ. ಸ್ವಾತಾಲಿಮ್ ಫೌಂಡೇಷನ್‌ನ 'ಸಹೇಲಿ ಕಿ ಉಡಾನ್' ಅಭಿಯಾನದ ಕನ್ನಡ ಅನುವಾದವೇ ಈ ಟ್ರೋಲ್‌ಗೆ ಕಾರಣ.
ಬೆಂಗಳೂರು (ಡಿ.4): ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವೊಂದು ಅದರ ಹೆಸರಿನ ಅನುವಾದದ ಕಾರಣಕ್ಕಾಗಿ ಫುಲ್ ಟ್ರೋಲ್‌ಗೆ ಒಳಗಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಸ್ವಾತಾಲಿಮ್ ಫೌಂಡೇಷನ್‌ನ ಸಹಯೋಗದಲ್ಲಿ ಡಿಸೆಂಬರ್ 4 ರಂದು ಮಧ್ಯಾಹ್ನ 12.30ಕ್ಕೆ ವಿಧಾನಸೌಧದಲ್ಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕೊಠಡಿಯಲ್ಲಿ 'ಗೆಳತಿಯರೊಂದಿಗೆ ಹಾರೋಣ ಕಾರ್ಯಕ್ರಮ'ಕ್ಕೆ ಚಾಲನೆ ಎಂದು ಮಂಗಳವಾರ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಂದಿತ್ತು. ಇದನ್ನು ಕಂಡವರೆ ಮಾಧ್ಯಮದ ಬಗ್ಗೆ ಗೆಳತಿಯರೊಂದಿಗೆ ಹಾರೋಣ ಕಾರ್ಯಕ್ರಮ ಅಂದರೇನು ಅನ್ನೋ ಗೊಂದಲಕ್ಕೆ ಬಿದ್ದಿದ್ದರು. ತಕ್ಷಣವೇ ಇದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೂ ಕಾರಣವಾಯಿತು.
ವಿಚಾರ ಏನೆಂದರೆ, ಸ್ವಾತಾಲಿಮ್ ಫೌಂಡೇಷನ್ ಸಹಯೋಗದಲ್ಲಿ ಅವರ ಅಭಿಯಾನವಾದ ಸಹೇಲಿ ಕಿ ಉಡಾನ್ ಅಥವಾ ಫ್ಲೈಟ್ ಆಫ್ ಫ್ರೆಂಡ್ ಅನ್ನೋ ಹೆಸರಿದೆ. ಇದನ್ನ ಅದೇ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದಾಗ ಅದು ಗೆಳತಿಯರೊಂದಿಗೆ ಹಾರೋಣ ಎಂದು ಬದಲಾಗಿದೆ. ಇದರ ಅರ್ಥ ಸರಿಯಾಗಿಯೇ ಇದ್ದರೂ, ಅದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.
ಗೆಳತಿಯೊಂದಿಗೆ ಹಾರೋಣ ಎಂಬ ಶೀರ್ಷಿಕೆ ಟ್ರೋಲ್ ಆಗುತ್ತಿರುವ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 'ನಾನು ಟ್ರೋಲರ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾವು ಮಕ್ಕಳಿಗೆ ಏನು ಒಳ್ಳೆಯದು ಕೊಟ್ಟೆವು ಎಂಬುದು ಮುಖ್ಯ. ರಾಷ್ಟ್ರಮಟ್ಟದಲ್ಲಿ ಸಹೇಲಿ ಕಿ ಉಡಾನ್ , ಫ್ಲೈಯಿಂಗ್ ವಿತ್ ಫ್ರೆಂಡ್ ಎಂಬ ಹೆಸರು ಇದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡುವಾಗ, ಗೆಳತಿಯೊಂದಿಗೆ ಹಾರೋಣ, ಗೆಳತಿಯರೊಂದಿಗೆ ನಲಿಯೋಣ, ಗೆಳತಿಯೊಂದಿಗೆ ಆಡೋಣ ಹೀಗೆ ಹಲವಾರು ಹೆಸರುಗಳ ಬಗ್ಗೆ ಚರ್ಚೆ ಆಯಿತು. ಅಂತಿಮವಾಗಿ ಗೆಳತಿಯೊಂದಿಗೆ ಹಾರೋಣ ಎಂಬ ಹೆಸರಿಗೆ ಹೆಚ್ಚು ಒಲವು ವ್ಯಕ್ತವಾಯಿತು. ಹಾಗಾಗಿ ಈ ಹೆಸರನ್ನು ಅಂತಿಮ ಗೊಳಿಸಿದೆವು. ಟ್ರೋಲರ್ ಗಳು ಏನೇ ನೆಗೆಟಿವ್ ಆಗಿ ಟೀಕೆ ಮಾಡಿದ್ರೂ ನಾನಂತೂ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.
'ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ' ಎಂದ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆದೇಶಿಸಿದ ಮಧು ಬಂಗಾರಪ್ಪ
ಹೆಸರನ್ನು ಅಪ್ಪಟ ಕನ್ನಡದಲ್ಲಿಯೇ ಇಡಬೇಕು ಎನ್ನುವ ದೃಷ್ಟಿಯಲ್ಲಿ ಗೂಗಲ್ ಟ್ರಾನ್ಸ್‌ಲೇಟ್ ಮಾಡಿದಾಗ ಈ ಗೊಂದಲ ಉಂಟಾಗಿದೆ. ಗೆಳತಿಯರೊಂದಿಗೆ ಹಾರೋಣ ಕಾರ್ಯಕ್ರಮ ಎನ್ನುವ ಬದಲು, 'ಹಾರೋಣ ಬಾ' ಎಂದು ಸಿಂಪಲ್ ಆಗಿ ಇಡಬಹುದಿತ್ತು. ಇಲ್ಲದೇ ಇದ್ದರೆ ಇಂಗ್ಲೀಷ್‌ನಲ್ಲಿಯೇ ಫ್ಲೈಯುಂಗ್ ವಿತ್ ಫ್ರೆಂಡ್ ಅನ್ನೋದನ್ನೇ ಇಡಬಹುದಿತ್ತು.
ಮೊಟ್ಟೆ ಕೊಡ್ತಿರೋದು ಹೇಳೊಲ್ಲ; ಕನ್ನಡ ಬರೊಲ್ಲ ಅಂತಾ ಟ್ರೋಲ್ ಮಾಡ್ತೀರಾ? ಮಾಧ್ಯಮಗಳ ವಿರುದ್ಧ ಮಧು ಬಂಗಾರಪ್ಪ ಗರಂ!