Asianet Suvarna News Asianet Suvarna News

Karnataka: ಚಿಕ್ಕಬಳ್ಳಾಪುರ, ಯಾದಗಿರಿ ಮನೆಗಳಿಗೆ ಪೈಪ್‌ನಲ್ಲಿ ಗ್ಯಾಸ್‌

*   ನಿರ್ಮಾಣ ಟೆಂಡರ್‌ ಮೇಘಾ ಕಂಪನಿಗೆ
*   ಎಂಇಐಎಲ್‌ 15 ಭೂ ಪ್ರದೇಶಗಳ ಟೆಂಡರ್‌
*   ಮನೆ ಮನೆ ಸಂಪರ್ಕಕ್ಕೆ ಮುಖ್ಯ ಪೈಪ್‌ಲೈನ್‌ಗಳ ಅಳವಡಿಕೆ 

Gas in Pipes for Homes in Chikkaballapur and Yadgir at Karnataka grg
Author
Bengaluru, First Published Jan 17, 2022, 9:00 AM IST

ಬೆಂಗಳೂರು(ಜ.17):  ಕೊಳವೆ ಮೂಲಕ ಮನೆ ಮನೆಗೆ ಅನಿಲ ಸಂಪರ್ಕ ಒದಗಿಸುವ ಕೇಂದ್ರ ಸರ್ಕಾರದ(Central Government) ಯೋಜನೆಯಡಿ ರಾಜ್ಯದ ಚಿಕ್ಕಬಳ್ಳಾಪುರ(Chikkaballapur) ಮತ್ತು ಯಾದಗಿರಿ(Yadgir) ಆಯ್ಕೆಯಾಗಿದ್ದು, ಹೈದರಾಬಾದ್‌(Hyderabad) ಮೂಲದ ಬಹು ಕ್ಷೇತ್ರದ ಜಾಗತಿಕ ಸಂಸ್ಥೆ ಮೇಘಾ ಎಂಜಿನಿಯರಿಂಗ್‌ ಅಂಡ್‌ ಇನ್ಫ್ರಾಸ್ಟ್ರಕ್ಚರ್‌(Megha Engineering and Infrastructure) ಯೋಜನೆ ಜಾರಿ ಅವಕಾಶವನ್ನು ತನ್ನದಾಗಿಸಿಕೊಂಡಿದೆ.

ಕೇಂದ್ರ ಸರ್ಕಾರ ಸ್ವಾಮ್ಯದ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ(Natural Gas Control Board) ದೇಶದ(India) ಒಟ್ಟು 65 ಭೂ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ಟೆಂಡರ್‌(Tender) ಕರೆದಿತ್ತು. ನಾಲ್ಕು ಪ್ರದೇಶಗಳ ಹೊರತಾಗಿ 61 ಪ್ರದೇಶಗಳ ಸೇವೆಗೆ ವಿವಿಧ ಸಂಸ್ಥೆಗಳು ಮುಂದಾಗಿದ್ದವು. ಈ ಪೈಕಿ ಈಗಾಗಲೇ ಅನಿಲ ವಿತರಣೆಯಲ್ಲಿ ಅನುಭವ ಹೊಂದಿರುವ ಎಂಇಐಎಲ್‌ 15 ಭೂ ಪ್ರದೇಶಗಳ ಟೆಂಡರ್‌ ಅನ್ನು ಪಡೆದುಕೊಂಡಿದೆ.

ರಾಜ್ಯದ ಮೊದಲ ಸಿಎನ್‌ಜಿ ಖಾಸಗಿ ಬಸ್ಸು ಸಂಚಾರ : ಎಲ್ಲಿಂದ - ಎಲ್ಲಿಗೆ..?

ಈಗಾಗಲೇ ರಾಜ್ಯದ(Karnataka) ತುಮಕೂರು(Tumakuru) ಮತ್ತು ಬೆಳಗಾವಿಯಲ್ಲಿ(Belagavi) ನೈಸರ್ಗಿಕ ಅನಿಲ ಸಂಪರ್ಕವನ್ನು ಸಾಧ್ಯವಾಗಿಸಿದ ಅನುಭವ ಹೊಂದಿರುವ ಎಂಇಐಎಲ್ ನಗರ ಅಥವಾ ತಾಯಿ ಕೇಂದ್ರ (ಸಿಟಿ ಅಥವಾ ಮದರ್‌ ಕೇಂದ್ರ)ಗಳನ್ನು, ಮನೆ ಮನೆ ಸಂಪರ್ಕಕ್ಕೆ ಮುಖ್ಯ ಪೈಪ್‌ಲೈನ್‌ಗಳ(Pipeline) ಅಳವಡಿಕೆ ಜತೆಗೆ ಸಿಎನ್‌ಜಿ ಕೇಂದ್ರಗಳನ್ನು(CNG Centers) ಸ್ಥಾಪಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹಸಿರು ಅನಿಲ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಪೈಪ್‌ಗಳ ಮೂಲಕ ಗೃಹೋಪಯೋಗಿ ಮತ್ತು ಕೈಗಾರಿಕಾ ಉದ್ದೇಶಕ್ಕಾಗಿ ಅನಿಲ ಸಂಪರ್ಕ (ಪಿಎನ್‌ಜಿ), ವಾಹನ ಮತ್ತು ಆಟೋಮೋಬೈಲ್‌ ಕ್ಷೇತ್ರದ ಬಳಕೆಗಾಗಿ ಪಿಎನ್‌ಜಿ ಅನಿಲವನ್ನು ಒದಗಿಸುತ್ತಿದೆ. ಈಗಾಗಲೇ ದೇಶದ ಮೂರು ರಾಜ್ಯಗಳಲ್ಲಿ ಎಂಇಐಎಲ್‌ ಮೆಘಾ ಗ್ಯಾಸ್‌ ಹೆಸರಿನಡಿ 32 ಸಿಎನ್‌ಜಿ ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.

ಮಂಗಳೂರಲ್ಲಿ 2,250 ಕೋಟಿ ರು.ಗಳ ಎಲ್‌ಎನ್‌ಜಿ ಟರ್ಮಿನಲ್‌

ಮಂಗಳೂರು(Mangaluru): ಕೇಂದ್ರ ಸರ್ಕಾರದ ಬದಲಿ ಇಂಧನ ಬಳಿಕೆ ಹಾಗೂ ಶೂನ್ಯ ಕಾರ್ಬನ್‌ ಮಾಲಿನ್ಯಕ್ಕೆ ಒತ್ತು ನೀಡುವ ಯೊಜನೆಯ ಅನ್ವಯ ಕರ್ನಾಟಕದ ಪ್ರಥಮ ಎಲ್‌ಎನ್‌ಜಿ(Liquid Natural Gas) ಟರ್ಮಿನಲ್‌ ಮಂಗಳೂರಿನಲ್ಲಿ ತಲೆ ಎತ್ತಲಿದೆ.

ಎನ್‌ಎಂಪಿಟಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಸಿಂಗಪುರದ(Singapur) ಮೂಲದ ಎಲ್ಎನ್‌ಜಿ ಅಲಾಯನ್ಸ್‌ ಕಂಪೆನಿಯೊಂದಿಗೆ ಕರ್ನಾಟಕ ಸರ್ಕಾರ(Government of Karnataka) ಒಪ್ಪಂದಕ್ಕೆ ಸಹಿ ಹಾಕಿತ್ತು. ಸುಮಾರು 2,250 ಕೋಟಿ ರು. ಬಂಡವಾಳದೊಂದಿಗೆ ಪ್ರಾರಂಭಗೊಳ್ಳಲಿರುವ ಈ ಯೋಜನೆಯಿಂದ ಸುಮಾರು 200 ಜನರಿಗೆ ನೇರ ಉದ್ಯೋಗ ಸಿಗಲಿದೆ. ಈ ಯೋಜನೆ ಮಂಗಳೂರಿನಲ್ಲಿ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಭಾರಿ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಇವರಿಗೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೃತಜ್ಞತೆ ವ್ಯಕ್ತಪಡಿಸಿದ್ದರು..

ದೇಶದ ಮೊದಲ ಸಿಎನ್‌ಜಿ ಟ್ರಾಕ್ಟರ್ ಬಿಡುಗಡೆ: ಈ ಟ್ರಾಕ್ಟರ್ ಯಾರದ್ದು ಗೊತ್ತಾ?

ವಾಣಿಜ್ಯ ಸಿಲಿಂಡರ್‌ ಬೆಲೆ 102 ರೂ. ಇಳಿಕೆ

ಹಿಂದಿನ ವರ್ಷ ಪೂರ್ತಿ ಬೆಲೆ ಏರಿಕೆಯಿಂದ ಬೇಸರಗೊಂಡಿದ್ದ ಗ್ರಾಹಕರಿಗೆ ಹೊಸ ವರ್ಷದ ಮೊದಲ ದಿನವೇ ಸಂತೋಷದ ಸುದ್ದಿ ಸಿಕ್ಕಿದೆ. ಜ.1ರಿಂದ 19 ಕೇಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 102.5 ರೂ.ನಷ್ಟುಕಡಿಮೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಸಿಲಿಂಡರ್‌ನ ಬೆಲೆ 1,998.5 ರೂ.ಗೆ ಇಳಿದಿದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಹೆಚ್ಚು ಬಳಕೆ ಮಾಡುವ ಹೋಟೆಲ್‌, ಟೀ ಸ್ಟಾಲ್‌ ಮುಂತಾದವುಗಳಿಗೆ ಬೆಲೆ ಇಳಿಕೆ ಕೊಂಚ ಸಮಾಧಾನ ತಂದಿದೆ.

ಕಳೆದ ವರ್ಷದ ಕೊನೆಯಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆ ಎರಡೆರಡು ಬಾರಿ ಏರಿಕೆ ಕಂಡಿತ್ತು. ಕಳೆದ ವರ್ಷ ಡಿ.1ರಂದು 100 ರು. ಏರಿಕೆ ಕಾಣುವುದರ ಮೂಲಕ ಸಿಲಿಂಡರ್‌ ಬೆಲೆ 9 ವರ್ಷದ ನಂತರ ಮತ್ತೆ 2 ಸಾವಿರದ ಗಡಿ ದಾಟಿತ್ತು. ದೆಹಲಿಯಲ್ಲಿ ಸಿಲಿಂಡರ್‌ ಬೆಲೆ 2,101ಕ್ಕೆ ಏರಿಕೆಯಾಗಿತ್ತು. 2012-13ರಲ್ಲಿ ಸಿಲಿಂಡರ್‌ ಬೆಲೆ 2,200 ರೂ.ಗೆ ಏರಿಕೆಯಾಗಿತ್ತು. ಆದರೆ 14.2 ಕೇಜಿ, 5 ಕೇಜಿ ಮತ್ತು 10 ಕೇಜಿ ಮನೆಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
 

Follow Us:
Download App:
  • android
  • ios