ಕನಕಪುರದ ಗಂಡು ಯಾವುದಕ್ಕೂ ಹೆದರಿ ಕೂರಬಾರದು. ರಾಜಕೀಯ ನಿವೃತ್ತಿ ಪಡೆದುಕೊಳ್ಳದೇ ಇಂಥಹ ಎಲ್ಲ ಘಟನೆಗಳನ್ನು ಎದುರಿಸಬೇಕು ಎಂದು ಮಾಜಿ ಶಾಸಕ ಸಿ.ಟಿ. ರವಿ ಸಲಹೆ ನೀಡಿದ್ದಾರೆ.

ಬೆಂಗಳೂರು (ಜೂ.26): ಕನಕಪುರದ ಗಂಡು ಸಂಸದ ಡಿ.ಕೆ. ಸುರೇಶ್‌ ಅವರು ರಾಜಕೀಯ ನಿವೃತ್ತಿ ತಗೋಬಾರದು. ರಾಜಕೀಯದಲ್ಲಿ ಯಾವುದಕ್ಕೂ ಹೆದರಿ‌ ಕೂರದೇ, ಇಂಥವನ್ನೆಲ್ಲ ಎದುರಿಸಬೇಕು. ಅವರು ರಾಜಕೀಯಲ್ಲಿ ಎಲ್ಲವನ್ನೂ ತಿಳಿದವರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ. ರವಿ ಹೇಳಿದ್ದಾರೆ.

ಸಂಸದ ಡಿ.ಕೆ. ಸುರೇಶ್‌ ಅವರು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂಬ ಕುರಿತು ಮಾತನಾಡಿದ ಅವರು, ಅವರು ನಿವೃತ್ತಿ ತಗೋಬಾರದು. ಇಂಥವನ್ನೆಲ್ಲ ಅವರು ಎದುರಿಸಬೇಕು. ಡಿಕೆ ಸುರೇಶ್ ಕನಕಪುರದ ಗಂಡು ಯಾವುದಕ್ಕೂ ಹೆದರಿ‌ ಕೂರಬಾರದು. ಡಿಕೆ ಸುರೇಶ್ ಯಾಕೆ ನಿವೃತ್ತಿ ತಗೊತಾರೆ..? ಅವರು ಕನಕಪುರದ ಗಂಡು. ರಾಜಕೀಯ ಎಲ್ಲವನ್ನೂ ತಿಳಿದವರು. ಕೆಲವರು 5 ವರ್ಷ ಸಿದ್ದರಾಮಯ್ಯ ಸಿಎಂ ಅಂತಿದ್ದಾರೆ. ಇನ್ನೂ ಸ್ವಲ್ಪ ದಿನಗಳಲ್ಲೇ ಆಡಳಿತ ಪಕ್ಷದಲ್ಲೇ, ವಿರೋಧ ಪಕ್ಷವಾಗುತ್ತಾರೆ. ಈ ಹಿಂದೆ ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿ ರೆಬೆಲ್ ಆಗಿರಲಿಲ್ಲವಾ..? ಹಾಗೇ ಕಾಂಗ್ರೆಸ್ ನಲ್ಲೇ ಕೆಲವರು ರೆಬೆಲ್ ಆಗ್ತಾರೆ. ಪರೋಕ್ಷವಾಗಿ ಶಿವಕುಮಾರ್ ಸಿಎಂ ಸ್ಥಾನ ಸಿಗದೇ ರೆಬೆಲ್ ಆಗಿ ಆಡಳಿತ ಪಕ್ಷದಿಂದ ಹೊರ ಬಂದು ವಿಪಕ್ಷವಾಗ್ತಾರೆ ಎಂದರು. 

ಕಾಂಗ್ರೆಸ್‌ ಗಾಳಿ ನಮ್ಮ ಮೇಲೂ ಬಿದ್ದಿದೆ, ಹಾಗಾಗಿ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ: ಈಶ್ವರಪ್ಪ

ಶೆಟ್ಟರ್‌ ಕೇವಲ ಎಂಎಲ್‌ಸಿಯಾಗಿ ಇಷ್ಟೊಂದು ಮಾತಾಡ್ತಾರಾ? : ಯಕಶ್ಚಿತ್‌ ವಿಧಾನ ಪರಿಷತ್‌ ಸದಸ್ಯರಾಗಿರುವ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿಗೆ ನಡುಕ ಶುರುವಾಗಿದೆ ಎಂದು ಹೇಳುತ್ತಿದ್ದಾರೆ. ಶೆಟ್ಟರ್‌ ಅವರು ನಮ್ಮಲ್ಲಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಎಲ್ಲಾ ಆಗಿದ್ದರು. ಅನೇಕರನ್ನು ಅವರೇ ಎಂಎಲ್ ಸಿ ಆಗಿ ನೇಮಕ ಮಾಡಿದವರು. ಈಗ ಕೇವಲ ಎಂಎಲ್ ಸಿ ಆಗಿ ಇಷ್ಟು ಮಾತಾಡ್ತಾ ಇದ್ದಾರೆ. ಬಹುಶಃ ಅವರಿಗೆ ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆ ಕೊಡುಬುದಾಗಿ ಹೇಳಿರಬೇಕು ಎಂದು ಟಾಂಗ್‌ ನೀಡಿದ್ದಾರೆ. ಸಿದ್ದರಾಮಯ್ಯರನ್ನು ಇಳಿಸಿ, ಡಿಕೆಶಿಗೆ ಕೈ ಕೊಟ್ಟು ಹಾಗೂ ಎಂಬಿ ಪಾಟೀಲ್ ಗೆ ಚಳ್ಳೆ ಹಣ್ಣು ತಿನ್ನಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡ್ತೀವಿ ಎಂದು ಶೆಟ್ಟರ್ ಗೆ ಭರವಸೆ ನೀಡಿರಬೇಕು. ಆದ್ದರಿಂದ ಇಷ್ಟೆಲ್ಲಾ ಮಾತಾಡ್ತಾ ಇದ್ದಾರೆ. ಆದರೆ ಈಗ ಕೇವಲ ಎಂಎಲ್ ಸಿ ಆಗಿ ಇಷ್ಟು ಮಾತಾಡ್ತಾರೆ ಎಂದು ನಾನು ಭಾವಿಸಿರಲಿಲ್ಲ. ಅವರು ಕಾಂಗ್ರೆಸ್ ಪಾರ್ಟಿಯಲ್ಲಿ ಸಿಎಂ ಆದರೆ ನಾವು ಖುಷಿ ಪಡ್ತೇವೆ ಎಂದು ಜಗದೀಶ್ ಶೆಟ್ಟರ್ ಗೆ ಟಾಂಗ್ ನೀಡಿದರು.

ಕಾಂಗ್ರೆಸ್‌ನ ನೈತಿಕತೆ ಎಚ್ಚರಿಸಲು ಪ್ರತಿಭಟನೆ: ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳ್ತಾರೆ. ಆದರೆ, ಕಾಂಗ್ರೆಸ್‌ನವರ ನೈತಿಕ ಪ್ರಜ್ಞೆ ಎಚ್ಚರಿಸಲು ನಾವು ಪ್ರತಿಭಟನೆ ಮಾಡ್ತಿದೀವಿ. ನಮಗೆ ನೈತಿಕ ಪ್ರಜ್ಞೆ ಇಲ್ಲ ಬಿಡಿ, ನಿಮಗಿದೆಯಲ್ವಾ? ಅದನ್ನು ಚ್ಚರಿಸಲು ನಾವು ಪ್ರತಿಭಟನೆ ಮಾಡ್ತಿದೀವಿ. ನೂತನ ಶಾಸಕರ ತರಬೇತಿ ಶಿಬಿರಕ್ಕೆ ಗುರುರಾಜ ಕರ್ಜಗಿ, ರವಿಶಂಕರ್ಬಗುರೂಜಿಗೆ ಕೊಕ್ ವಿಚಾರ ನೀಡುವ ಮೂಲಕ ವ್ಯಕ್ತಿಯನ್ನೇ ವಿರೋಧಿಸುವ ಮಾನಸಿಕತೆ ಅಪಾಯಕಾರಿ ಎಂಬುದನ್ನು ಓರಿಸಿದ್ದಾರೆ. ಸಿದ್ಧಾಂತ, ವಿಚಾರಕ್ಕೆ ವಿರೋಧ ಇರೋದು ಸಹಜ. ಆದರೆ ವ್ಯಕ್ತಿಯನ್ನು ವಿರೋಧಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದು ಕಾಂಗ್ರೆಸ್‌ನವರ ಅಸಹನೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ, ಡಿಕೆಶಿ ಮೆಟ್ಟು-ಮೆಟ್ಟಿನಿಂದ ಹೊಡೆದಾಡಿಕೊಳ್ತಾರೆ: ಶಾಸಕ ಯತ್ನಾಳ

ನಿತ್ಯ ಬ್ಲಾಸ್ಟ್‌ ಆಗ್ತಿರಬೇಕು: ಭಾರತದ ಅಭಿವೃದ್ಧಿಗೆ ಬಿಜೆಪಿಯೇತರ‌ ಸರ್ಕಾರ ಅವಶ್ಯಕ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ಹಗರಣ‌ ಇದ್ರೆ‌ ಮಾತ್ರ ಸರ್ಕಾರ‌ ಅನಿಸಿದೆ. ಈಗ ಹಗರಣ‌ ಇಲ್ಲದ ಸರ್ಕಾರ‌ ಇದೆ. ಇದನ್ನ‌ ನೋಡಿ ಹಾಗೆ‌ ಹೇಳಿದ್ದಾರೆ. ಅವರಿಗೆ ನಿತ್ಯವೂ ಬಾಂಬ್ ಬ್ಲಾಸ್ಟ್ ಆಗ್ತಿರಬೇಕು. ಅದಕ್ಕೆ ಹೀಗೆ ಮಾತಾಡ್ತಿದಾರೆ. ಸಮಾಜವಾದಿ ಹೆಸರು ಹೇಳಿಕೊ‌ಡು‌ ಬಂದು ಮಗನನ್ನ ಸೆಟಲ್ ಮಾಡ್ತಿರಲಿಲ್ಲ. ಮತ್ತೆ ಮೋದಿ ಪ್ರಧಾನಿ ಆದರೆ ನಮ್ಮ ಮಕ್ಕಳ, ಮೊಮ್ಮಕ್ಕಳ ಕತೆ ಏನು ಅನ್ನೋ ಟೆನ್ಶ್ಯನ್ ಸಿದ್ದರಾಮಯ್ಯರಿಗೆ ಇದೆ ಎಂದು ಹೇಳಿದರು.