Asianet Suvarna News Asianet Suvarna News

Covid Vaccination: ಮಕ್ಕಳ ಲಸಿಕೆಯಲ್ಲಿ ಗದಗ 100% ಸಾಧನೆ: ಡಾ.ಸುಧಾಕರ್‌ ಮೆಚ್ಚುಗೆ

ಮಕ್ಕಳ ಕೊರೋನಾ ಲಸಿಕೆ ಮೊದಲ ಡೋಸ್‌ ವಿತರಣೆಯಲ್ಲಿ ಗದಗ ಜಿಲ್ಲೆ ಶೇ.100 ಗುರಿ ಸಾಧನೆ ಮಾಡಿದೆ. ಈ ಮೂಲಕ ತಮ್ಮ ವ್ಯಾಪ್ತಿಯ 15-17 ವರ್ಷದ ಎಲ್ಲ ಮಕ್ಕಳಿಗೂ ಲಸಿಕೆ ನೀಡಿದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Gadag district achieves 100 per cent vaccination coverage among kids in 15-17 age group gvd
Author
Bangalore, First Published Feb 4, 2022, 8:35 AM IST | Last Updated Feb 4, 2022, 8:35 AM IST

ಬೆಂಗಳೂರು (ಫೆ.04): ಮಕ್ಕಳ ಕೊರೋನಾ ಲಸಿಕೆ ಮೊದಲ ಡೋಸ್‌ (Children Covid Vaccine) ವಿತರಣೆಯಲ್ಲಿ ಗದಗ (Gadag) ಜಿಲ್ಲೆ ಶೇ.100 ಗುರಿ ಸಾಧನೆ ಮಾಡಿದೆ. ಈ ಮೂಲಕ ತಮ್ಮ ವ್ಯಾಪ್ತಿಯ 15-17 ವರ್ಷದ ಎಲ್ಲ ಮಕ್ಕಳಿಗೂ ಲಸಿಕೆ ನೀಡಿದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತು ಗುರುವಾರ ಟ್ವೀಟ್‌ (Tweet) ಮಾಡಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar), ರಾಜ್ಯದಲ್ಲಿ 15-17 ವರ್ಷದ ಮಕ್ಕಳ ಲಸಿಕೆ ಅಭಿಯಾನದ ಮೊದಲ ಡೋಸ್‌ ವಿತರಣೆಯಲ್ಲಿ ಶೇ.72ರಷ್ಟುಗುರಿ ಸಾಧನೆಯಾಗಿದೆ. ಗದಗ ಜಿಲ್ಲೆಯು ಶೇ.100ರಷ್ಟುಮಕ್ಕಳಿಗೆ ಲಸಿಕೆ ನೀಡಿದ್ದು, ರಾಜ್ಯದಲ್ಲಿ ಮೊದಲ ಜಿಲ್ಲೆಯಾಗಿದೆ ಎಂದು ತಿಳಿಸಿದ್ದಾರೆ.

ಗದಗದಲ್ಲಿ ಅರ್ಹ 55 ಸಾವಿರ ಮಕ್ಕಳಲ್ಲಿ ಎಲ್ಲರೂ ಮೊದಲ ಡೋಸ್‌ ಪಡೆದಿದ್ದು, ಎರಡನೇ ಡೋಸ್‌ ಪಡೆಯಬೇಕಿದೆ. ಜಿಲ್ಲಾವಾರು ಎರಡನೇ ಸ್ಥಾನದಲ್ಲಿ ಶೇ.98 ಮಕ್ಕಳು ಲಸಿಕೆ ಪಡೆಯುವ ಮೂಲಕ ಕೊಡಗು ಇದೆ. ಆನಂತರ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೋಲಾರ, ಬಾಗಲಕೋಟೆ ಜಿಲ್ಲೆಗಳಿದ್ದು, ಅಲ್ಲಿ ಶೇ.80ರಷ್ಟುಮಕ್ಕಳು ಮೊದಲ ಡೋಸ್‌ ಪಡೆದಿದ್ದಾರೆ. ರಾಜ್ಯದಲ್ಲಿ ಅರ್ಹ 31.75 ಲಕ್ಷ ಮಕ್ಕಳಲ್ಲಿ 22.95 ಲಕ್ಷ ಮಕ್ಕಳು ಮೊದಲ ಡೋಸ್‌, 1.95 ಲಕ್ಷ ಮಕ್ಕಳು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಕ್ಕಳ ಲಸಿಕಾಕರಣದಲ್ಲಿ ಹಿಂದೆ ಬಿದ್ದ ಪಾಲಿಕೆ: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಆರಂಭವಾಗಿ (ಜ.3)ತಿಂಗಳು ಕಳೆದರೂ ಶೇ.62ರಷ್ಟುಗುರಿ ಸಾಧಿಸಲಾಗಿದೆ. ಕೊರೋನಾ ಮೂರನೇ ಅಲೆ ತೀವ್ರವಾದ ಕಾರಣದಿಂದ ಪಾಲಿಕೆ ನಿಗದಿತ ಗುರಿ ತಲುಪುವಲ್ಲಿ ಹಿಂದೆ ಬಿದ್ದಿದೆ.

Covid Vaccine 15-18 ವರ್ಷದವರ ಲಸಿಕಾಕರಣಕ್ಕೆ 1 ತಿಂಗಳು, ಶೇ.63ರಷ್ಟುಮಕ್ಕಳಿಗೆ ಮೊದಲ ಡೋಸ್‌!

ರಾಜ್ಯಾದ್ಯಂತ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಜ.3ರಂದು ಚಾಲನೆ ದೊರೆತಿತ್ತು. ಇದರನ್ವಯ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮೊದಲ ಡೋಸ್‌ ಪಡೆಯಲು 15-18 ವರ್ಷದೊಳಗಿನ ಸುಮಾರು 4.42 ಲಕ್ಷ ಮಕ್ಕಳನ್ನು ಗುರುತಿಸಲಾಗಿತ್ತು. ಎಲ್ಲ ಲಸಿಕಾ ಕೇಂದ್ರಗಳ ಮೂಲಕ ನಿತ್ಯ 40 ಸಾವಿರ ಮಕ್ಕಳಂತೆ ಹತ್ತು ದಿನದಲ್ಲಿ ಎಲ್ಲ ಮಕ್ಕಳಿಗೆ ಲಸಿಕೆ ನೀಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದರು.

ಆದರೆ ನಗರದಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣಗಳು ದಿಢೀರನೇ ಹೆಚ್ಚಾಗಿದ್ದರಿಂದ ಅಭಿಯಾನಕ್ಕೆ ಅಡ್ಡಿ ಉಂಟಾಯಿತು. ಇದೇ ವೇಳೆ ಸೋಂಕಿನ ಭೀತಿಯಿಂದಾಗಿ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ನೀಡುವಂತೆ ಪೋಷಕರು ಪಟ್ಟು ಹಿಡಿದಿದ್ದರು. ನಂತರ ಆನ್‌ಲೈನ್‌ ತರಗತಿಗಳ ಆರಂಭದ ಜತೆಗೆ ಶಾಲಾ-ಕಾಲೇಜುಗಳು ಬಂದ್‌ ಆದವು. ಇದೇ ವೇಳೆ ಕೋವಿಡ್‌ ನಿಯಂತ್ರಣದಲ್ಲಿ ಮುಳುಗಿದ ಬಿಬಿಎಂಪಿ ಅಭಿಯಾನದತ್ತ ಅಷ್ಟಾಗಿ ಗಮನಹರಿಸಲಿಲ್ಲ. ಹೀಗಾಗಿ ಈವರೆಗೆ (ಫೆ.3ರವರೆಗೆ) 2,75,702 ಮಕ್ಕಳಿಗೆ (ಶೇ.62) ಮಾತ್ರ ಲಸಿಕೆ ನೀಡಲಾಗಿದ್ದು, ಮುಂದಿನ ವಾರದಲ್ಲಿ ನಿಗದಿತ ಗುರಿ ತಲುಪಲಿದ್ದೇವೆ ಎಂದು ಆರೋಗ್ಯಾಧಿಕಾರಿ ಬಾಲಸುಂದರ ಮಾಹಿತಿ ನೀಡಿದರು.

ಮಹದೇವಪುರ ವಲಯ ಮೊದಲು: ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಎಲ್ಲಿಯೂ ಉದ್ದೇಶಿತ ಶೇ.100ರಷ್ಟುಲಸಿಕಾಕರಣ ಸಾಧ್ಯವಾಗಿಲ್ಲ. ಈ ಪೈಕಿ ಈವರೆಗೆ ಶೇ.79ರಷ್ಟುಲಸಿಕಾಕರಣ ಮೂಲಕ ಮಹದೇವಪುರ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ವಲಯ ಶೇ.73 ಹಾಗೂ ಮೂರನೇ ಸ್ಥಾನದಲ್ಲಿ ದಾಸರಹಳ್ಳಿ ವಲಯದಲ್ಲಿ ಶೇ.71ರಷ್ಟುಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕೊನೆಯ ಸ್ಥಾನದಲ್ಲಿರುವ ಯಲಹಂಕ ವಲಯದಲ್ಲಿ ಉದ್ದೇಶಿತ ಒಟ್ಟು ಮಕ್ಕಳ ಪೈಕಿ ಅರ್ಧದಷ್ಟುಮಕ್ಕಳಿಗೂ ಲಸಿಕೆ ನೀಡಲಾಗಿಲ್ಲ. ಇಲ್ಲಿ ಕೇವಲ ಶೇ.48ರಷ್ಟುಮಾತ್ರ ಲಸಿಕಾಕರಣ ನಡೆದಿದೆ.

Covid 3rd Wave: ಕೊರೋನಾ ಕ್ರಮೇಣ ಇಳಿಕೆ, ಮತ್ತೆ ಹೆಚ್ಚಾಗಲ್ಲ: ಸುಧಾಕರ್‌

ಮೊದಲ ದಿನ 29 ಸಾವಿರ ಡೋಸ್‌ ನೀಡಿಕೆ: ಜ.3ರಂದು ಮೊದಲ ದಿನ ಮಕ್ಕಳಿಗೆ ಲಸಿಕೆ ನೀಡಿಕೆ ವೇಗವಾಗಿ ನಡೆದರೂ ನಂತರದ ದಿನಗಳಲ್ಲಿ ಕಡಿಮೆಯಾಯಿತು. ಅತೀ ಕಡಿಮೆ ಮಕ್ಕಳಿರುವ ವಲಯಗಳಲ್ಲೂ ಲಸಿಕೆ ನೀಡುವಲ್ಲಿ ಹಿಂದೆ ಬಿದ್ದಿದೆ.

Latest Videos
Follow Us:
Download App:
  • android
  • ios