Covid 3rd Wave: ಕೊರೋನಾ ಕ್ರಮೇಣ ಇಳಿಕೆ, ಮತ್ತೆ ಹೆಚ್ಚಾಗಲ್ಲ: ಸುಧಾಕರ್‌

*   2ನೇ ಡೋಸ್‌: ಬೆಂ. ಗ್ರಾಮಾಂತರ ಜಿಲ್ಲೆ ಶೇ.100 ಸಾಧನೆ
*  ಈ ಸಾಧನೆ ಮಾಡಿದ ರಾಜ್ಯದ ಮೊದಲ ಜಿಲ್ಲೆಯ ಹೆಗ್ಗಳಿಕೆ
*  ಆಡಳಿತ, ಆರೋಗ್ಯ ಕಾರ್ಯಕರ್ತರಿಗೆ ಸಚಿವ ಸುಧಾಕರ್‌ ಶುಭಾಶಯ
 

Corona Gradually Decrease, not Increase Again in Karnataka Says Dr K Sudhakar grg

ಬೆಂಗಳೂರು(ಫೆ.01):  ಕೊರೋನಾ(Coronavirus) ಲಸಿಕೆ ಎರಡನೇ ಡೋಸ್‌(Second Dose) ವಿತರಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ(Bengaluru Rural District) ಶೇ.100 ರಷ್ಟು ಗುರಿತಲುಪಿದ್ದು, ಈ ಸಾಧನೆ ಮಾಡಿದ ರಾಜ್ಯ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar), ರಾಜ್ಯದಲ್ಲೇ(Karnataka) ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎರಡನೇ ಡೋಸ್‌ ವಿತರಣೆಯಲ್ಲಿ ಶೇ.100 ಗುರಿ ಸಾಧನೆ ಮಾಡಿದೆ. 10 ಜಿಲ್ಲೆಗಳು ಶೇ.90ರಷ್ಟುಮಂದಿಗೆ ಲಸಿಕೆ ನೀಡಿವೆ. ಈ ಸಾಧನೆ ಮಾಡಿ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

Covid Crisis: ಬೆಂಗ್ಳೂರಲ್ಲಿ 21 ದಿನದ ಬಳಿಕ 10 ಸಾವಿರಕ್ಕೆ ತಗ್ಗಿದ ಸೋಂಕು

ಬೆಂಗಳೂರು ಗ್ರಾಮಾಂತರದಲ್ಲಿ 8.19 ಲಕ್ಷ ಮಂದಿಯನ್ನು ಲಸಿಕೆಗೆಂದು ಗುರುತಿಸಲಾಗಿದ್ದು, ಎಲ್ಲರಿಗೂ ಎರಡೂ ಡೋಸ್‌ ನೀಡಲಾಗಿದೆ. ಕಳೆದ ವಾರವೇ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟು ಕೊರೋನಾ ಲಸಿಕೆ ಅಭಿಯಾನದ ಮೊದಲ ಡೋಸ್‌ ವಿತರಣೆಯಲ್ಲಿ ಶೇ.100 ರಷ್ಟು ಪೂರ್ಣಗೊಂಡಿದೆ. ಸದ್ಯ ಎರಡನೇ ಡೋಸ್‌ ವಿತರಣೆಯಲ್ಲಿ ಶೇ.87 ರಷ್ಟುಗುರಿಸಾಧನೆಯಾಗಿದೆ. ಅರ್ಹದ ಪೈಕಿ 7.55 ಲಕ್ಷ ಮಂದಿ ಮುನ್ನೆಚ್ಚರಿಕಾ ಡೋಸ್‌, 15 ರಿಂದ 17 ವರ್ಷದವರಲ್ಲಿ 22.7 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಮೊದಲ, ಎರಡನೇ ಹಾಗೂ ಮೂರನೇ ಡೋಸ್‌ ಸೇರಿ ಒಟ್ಟಾರೆ 9.54 ಕೋಟಿ ಡೋಸ್‌ನಷ್ಟು ಕೊರೋನಾ ಲಸಿಕೆಯನ್ನು(Vaccine) ರಾಜ್ಯದಲ್ಲಿ ನೀಡಲಾಗಿದೆ.

ಶೇ.90ರಷ್ಟು 2ನೇ ಡೋಸ್‌ ಪೂರ್ಣಗೊಂಡ ಜಿಲ್ಲೆಗಳು:

ವಿಜಯಪುರ (ಶೇ.99), ಗದಗ, ಕೊಡಗು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಹಾಸನ, ರಾಮನಗರ ಹಾಗೂ ಬಾಗಲಕೋಟೆ.

2ನೇ ಡೋಸ್‌ನಲ್ಲಿ ಹಿಂದುಳಿದ ಜಿಲ್ಲೆಗಳು:

ಕಲಬುರಗಿ (ಶೇ.79), ರಾಯಚೂರು (ಶೇ.82). ಬೆಂಗಳೂರು ನಗರ (ಶೇ.84), ದಕ್ಷಿಣ ಕನ್ನಡ (ಶೇ.84),ಬಳ್ಳಾರಿ (ಶೇ.85)

ಕೊರೋನಾ ಕ್ರಮೇಣ ಇಳಿಕೆ, ಮತ್ತೆ ಹೆಚ್ಚಾಗಲ್ಲ: ಸುಧಾಕರ್‌

ಬೆಂಗಳೂರು ಸೇರಿ ರಾಜ್ಯಾದ್ಯಂತ(Karnataka) ಹೊಸ ಪ್ರಕರಣ ಇಳಿಕೆ, ಸುರಕ್ಷತಾ ಕ್ರಮಗಳನ್ನು ಇನ್ನಷ್ಟುದಿನ ಪಾಲಿಸಲು ಸಲಹೆ

ರಾಜ್ಯದಲ್ಲಿ ಕೊರೋನಾ( ಮೂರನೇ ಅಲೆಯಲ್ಲಿ ಸೋಂಕಿನ ಹೊಸ ಪ್ರಕರಣಗಳು ಕ್ರಮೇಣ ಇಳಿಕೆಯಾಗುತ್ತಿದ್ದು, ಮತ್ತೆ ಹೆಚ್ಚಳವಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Coroinavirs: ಕರ್ನಾಟಕ ಮಾತ್ರವಲ್ಲ ಉಳಿದ ರಾಜ್ಯಗಳಲ್ಲಿಯೂ ಶಾಲೆ ಓಪನ್

ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಇಳಿಕೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಪರೀಕ್ಷೆಗಳ ಪಾಸಿಟಿವಿಟಿ ಹೆಚ್ಚಾಗುತ್ತಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ.2 ಅಥವಾ ಶೇ.3 ರಷ್ಟಿದೆ. ಶೇ.0.05 ನಷ್ಟುಮರಣ ಪ್ರಮಾಣವಿದೆ. ಬೇರೆ ದೇಶ, ರಾಜ್ಯಗಳ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದ್ದು, ಮೂರನೇ ಅಲೆಯಲ್ಲಿ ಮತ್ತೆ ಪ್ರಕರಣಗಳ ಪ್ರಮಾಣ ಹೆಚ್ಚಳವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ದಿನ ರಾಜ್ಯದಲ್ಲಿ 2.5 ಲಕ್ಷ ಕೊರೊನಾ ಪರೀಕ್ಷೆ(Covid Test) ಮಾಡಿ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. ಶೇ.32ರಷ್ಟಿದ್ದ ಕೊರೋನಾ ಪರೀಕ್ಷೆಗಳ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದೆ. ಹೊಸ ವೈರಾಣು ಒಮಿಕ್ರಾನ್‌ ತೀವ್ರವಾಗಿ ಬಾಧಿಸುತ್ತಿಲ್ಲ. ಆದರೆ, ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ. ಈ ವೈರಾಣುವಿನಲ್ಲೇ ಏನಾದರೂ ಬದಲಾವಣೆಯಾಗಲಿದೆಯೇ ಎಂದು ಗಮನಿಸಬೇಕಿದೆ. ಹೀಗಾಗಿ, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಇನ್ನಷ್ಟುದಿನ ಎಚ್ಚರದಿಂದ ಪಾಲಿಸಬೇಕಿದೆ ಎಂದು ಎಚ್ಚರಿಸಿದರು. ಚಿತ್ರಮಂದಿರಗಳು ಮುಚ್ಚಿದ ಸ್ಥಳವಾಗಿದ್ದು, ಬೇರೆ ಉದ್ಯಮಕ್ಕಿಂತ ಭಿನ್ನವಾಗಿದೆ. ಚಿತ್ರಮಂದಿರಗಳಿಗೆ ವಿಧಿಸಿದ ನಿರ್ಬಂಧಗಳ ಸಡಿಲಿಕೆ ಕುರಿತು ಮುಖ್ಯಮಂತ್ರಿಗಳೇ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬಹುದು ಎಂದರು.
 

Latest Videos
Follow Us:
Download App:
  • android
  • ios