Asianet Suvarna News Asianet Suvarna News

ಕುಡಿದ ಮತ್ತಿನಲ್ಲಿ ತಿನ್ನುವ ಅನ್ನ ಚೆಲ್ಲಿದ್ದ ಕುಡುಕನಿಗೆ ಅದನ್ನೇ ತಿನ್ನಿಸಿ ಬುದ್ಧಿ ಕಲಿಸಿದ ಹೋಟೆಲ್ ಸಿಬ್ಬಂದಿ

ಕಂಠಪೂರ್ತಿ ಕುಡಿದ ಮತ್ತಿನಲ್ಲಿ ತಿನ್ನುವ ಅನ್ನ ಚೆಲ್ಲಿದ್ದ ಕುಡುಕನೊಬ್ಬನಿಗೆ ಚೆಲ್ಲಿದ ಅನ್ನವನ್ನೇ ತಿನ್ನಿಸಿ ಹೋಟೆಲ್ ಸಿಬ್ಬಂದಿ ಬುದ್ಧಿ ಕಲಿಸಿದ ಘಟನೆ ಗದಗ ನಗರದ ಖಾಸಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ.

Gadag bar and restaurant staff fed the spilled rice to the drunkard video goes viral rav
Author
First Published Aug 25, 2024, 11:16 AM IST | Last Updated Aug 25, 2024, 11:16 AM IST

ಗದಗ (ಆ.25): ಕಂಠಪೂರ್ತಿ ಕುಡಿದ ಮತ್ತಿನಲ್ಲಿ ತಿನ್ನುವ ಅನ್ನ ಚೆಲ್ಲಿದ್ದ ಕುಡುಕನೊಬ್ಬನಿಗೆ ಚೆಲ್ಲಿದ ಅನ್ನವನ್ನೇ ತಿನ್ನಿಸಿ ಹೋಟೆಲ್ ಸಿಬ್ಬಂದಿ ಬುದ್ಧಿ ಕಲಿಸಿದ ಘಟನೆ ಗದಗ ನಗರದ ಖಾಸಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ.

ಹೌದು ರೆಸ್ಟೋರೆಂಟ್‌ಗೆ ಬಂದಿದ್ದ ಗ್ರಾಹಕ. ಕಂಠಪೂರ್ತಿ ಕುಡಿದಿದ್ದಾನೆ. ಕುಡಿದ ಮತ್ತಿನಲ್ಲಿ ಅನ್ನ ಸರಿಯಾಗಿಲ್ಲ ಅಂತಾ ರಂಪಾ ಮಾಡಿದ್ದಾನೆ.  ಸುಮ್ಮನಿದ್ದ ಸಿಬ್ಬಂದಿ ಬಳಿಕ ಅನ್ನದ ರೇಟು ಯಾಕೆ ಹೆಚ್ಚು ಮಾಡಿದ್ದೀರಿ ಎಂದು ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಈ ವೇಳೆ ಕೋಪೋದ್ರಿಕ್ತನಾಗಿ ಅನ್ನವನ್ನು ನೆಲದ ಮೇಲೆ ಚೆಲ್ಲಾಡಿದ್ದಾನೆ. ರೈತರು ಕಷ್ಟಪಟ್ಟು ತಿನ್ನಲು ಅನ್ನ ಬೆಳೆಯುತ್ತಾರೆ. ನೀನು ಹಣ, ಕುಡಿದ ಮತ್ತಿನಲ್ಲಿ ಹೀಗೆ ಬಿಸಾಡೋದು ಸರಿಯಲ್ಲ ಎಂದು ಸಿಬ್ಬಂದಿ ಬುದ್ಧಿ ಹೇಳಿದ್ದಾರೆ .ಆದರೆ ಆ ಬಳಿಕವೂ ಅನ್ನ ಚೆಲ್ಲಾಡಿದ್ದಾನೆ. 

ಬೆಂಗ್ಳೂರಿನ ಶೆಡ್‌ನಲ್ಲಿ ಮತ್ತೊಂದು ಕೊಲೆ: ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಗೆಳೆಯನನ್ನೇ ಕೊಂದ ಸ್ನೇಹಿತರು..!

ಬಾಯಿಮಾತಿಗೆ ಕೇಳುವವನಲ್ಲ ಎಂದರಿತ ಸಿಬ್ಬಂದಿ ಗ್ರಾಹಕನಿಗೆ ಚೆಲ್ಲಿದ ಅನ್ನವನ್ನೇ ತಿನ್ನಿಸಿದ್ದಾರೆ. ಅನ್ನದ ಬೆಲೆ ಗೊತ್ತಿಲ್ಲದಿರೋ ಇಂತಹ ಗ್ರಾಹಕನಿಗೆ ಸಿಬ್ಬಂದಿಯೇ ಪಾಠ ಕಲಿಸಿದ್ದಾರೆ. ಅನ್ನ ಬೇಕಿಲ್ಲದಿದ್ರೆ ವಾಪಸ್ ಕೊಡಬಹುದಿತ್ತು. ಅನ್ನದ ದರ ಹೆಚ್ಚಿದ್ರೆ ಬೇರೆಡೆ ಹೋಗಿ ತಿನ್ನಬಹುದಿತ್ತು. ಆದರೆ ತಿನ್ನಲು ಬಂದು ಅನ್ನ ಚೆಲ್ಲುವುದು ಎಷ್ಟು ಸರಿ? ನೆಲಕ್ಕೆ ಚೆಲ್ಲುವುದರಿಂದ ಅನ್ನ ಹಾಳು. ಎಷ್ಟೋ ಜನರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ ಕುಡಿತ ಮತ್ತಿನಲ್ಲಿ ಈ ರೀತಿ ಹುಚ್ಚಾಟ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಿಬ್ಬಂದಿ. 

ಕುಡಿದ ಮತ್ತಿನಲ್ಲಿ ಹಳಿಗೆ ಬಿದ್ದ ವ್ಯಕ್ತಿ ಮೇಲಿಂದ ಸಾಗಿತು ರೈಲು, ನಂತರ ನಡೆಯಿತು ಪವಾಡ!

ಚೆಲ್ಲಾಡಿದ ಅನ್ನವನ್ನೇ ಗ್ರಾಹಕನಿಗೆ ತಿನ್ನಿಸುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಅವನು ಅನ್ನ ಚೆಲ್ಲಾಡಿದ್ದ ತಪ್ಪು. ಹಾಗೆಯೇ ರೆಸ್ಟೋರೆಂಟ್‌ಗಳಲ್ಲಿ ಅನ್ನದ ಬೆಲೆ ಸಾಮಾನ್ಯಕ್ಕಿಂತ ವಿಪರೀತ ಹೆಚ್ಚಳ ಮಾಡಿರುವುದು ಸಹ ಎಂಥವರಿಗೂ ಕೋಪ ತರಿಸುತ್ತದೆ ಎಂಬಂತಹ ಮಾತುಗಳನ್ನಾಡಿದ್ದಾರೆ. 

Latest Videos
Follow Us:
Download App:
  • android
  • ios