Asianet Suvarna News Asianet Suvarna News

ಬೆಂಗ್ಳೂರಿನ ಶೆಡ್‌ನಲ್ಲಿ ಮತ್ತೊಂದು ಕೊಲೆ: ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಗೆಳೆಯನನ್ನೇ ಕೊಂದ ಸ್ನೇಹಿತರು..!

ಶೆಡ್‌ಗೆ ಸಾರ್ವಜನಿಕರು ಶನಿವಾರ ಮಧ್ಯಾಹ್ನ ಹೋಗಿದ್ದಾಗ ಅರೆಬೆಂದ ಅಪರಿಚಿತನ ಮೃತದೇಹ ಕಂಡು ಪೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ.

27 Years old young man killed in bengaluru grg
Author
First Published Aug 25, 2024, 4:52 AM IST | Last Updated Aug 25, 2024, 4:52 AM IST

ಬೆಂಗಳೂರು(ಆ.25):  ಕುಡಿದ ಮತ್ತಿನಲ್ಲಿ ಟೈಲ್ಸ್ ಕೆಲಸಗಾರನೊಬ್ಬನ ತಲೆ ಮೇಲೆ ಕಲ್ಲುಎತ್ತಿ ಹಾಕಿಕೊಂದು ಬಳಿಕ ಮೃತದೇಹಕ್ಕೆ ಬೆಂಕಿ ಇಟ್ಟು ಮೃತನ ಸ್ನೇಹಿತರು ಪರಾರಿಯಾಗಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿವಾಸಿ ಪುಷ್ಪರಾಜ್ (27) ಕೊಲೆಯಾದ ದುರ್ದೈವಿ. 

ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತನ ಸ್ನೇಹಿತರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹೆಗಡೆ ನಗರದ ಜಕ್ಕೂರು ಮುಖ್ಯರಸ್ತೆಯ ಖಾಲಿ ನಿವೇಶನದಲ್ಲಿದ್ದ ಶೆಡ್‌ ಗೆ ಶುಕ್ರವಾರ ರಾತ್ರಿ ಸ್ನೇಹಿತರ ಜತೆ ಮದ್ಯ ಸೇವನೆಗೆ ರಾಜ್‌ ತೆರಳಿದ್ದಾಗ ಈ ಕೃತ್ಯ ನಡೆದಿದೆ. ಹೆಗಡೆ ನಗರದ 4ನೇ ಹಂತ ಮೃತ ಪುಷ್ಪ ವಿಪರೀತ ಮದ್ಯವ್ಯಸನಿಯಾಗಿದ್ದು, ಇತ್ತೀಚಿಗೆ ಮನೆಗೆ ಸಹ ಸೇರದೆ ಎಲ್ಲೆಂದರಲ್ಲಿ ಉಳಿಯುತ್ತಿದ್ದ. 

ಚಿಕ್ಕಬಳ್ಳಾಪುರ: ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧೆಯ ಮೇಲೆ ಕಾಮುಕನ ಅಟ್ಟಹಾಸ..!

ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಆತ, ಪ್ರತಿ ದಿನ ಸ್ನೇಹಿತರ ಜತೆ ಮದ್ಯ ಸೇವನೆಗೆ ಹೋಗುತ್ತಿದ್ದ. `ಹೆಗಡೆ ನಗರದ 4ನೇ ಮುಖ್ಯ ರಸ್ತೆಯಲ್ಲಿ ಮೃತನ ಕುಟುಂಬದವರು ನೆಲೆಸಿದ್ದಾರೆ. ಎಂದಿನಂತೆ ಜಕ್ಕೂರು ರಸ್ತೆಯ ಖಾಲಿ ನಿವೇಶದಲ್ಲಿದ್ದ ಶೆಡ್‌ ಗೆ ಗೆಳೆಯರ ಜತೆ ಪುಷ್ಪರಾಜ್ ಹೋಗಿದ್ದು, ಆ ವೇಳೆ ಮದ್ಯ ಸೇವಿಸಿ ಮೃತನ ಗೆಳೆಯರ ಮಧ್ಯೆ ಜಗಳವಾಗಿರಬಹುದು. ಆಗ ಆತನ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಬಳಿಕ ಮೃತದೇಹಕ್ಕೆ ಬೆಂಕಿ ಇಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. 

ಈ ಶೆಡ್‌ಗೆ ಸಾರ್ವಜನಿಕರು ಶನಿವಾರ ಮಧ್ಯಾಹ್ನ ಹೋಗಿದ್ದಾಗ ಅರೆಬೆಂದ ಅಪರಿಚಿತನ ಮೃತದೇಹ ಕಂಡು ಪೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ.

Latest Videos
Follow Us:
Download App:
  • android
  • ios