ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್‌: ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ ಬಗ್ಗೆ ಪರಂ ಹೇಳಿದ್ದಿಷ್ಟು

ಸೈಬರ್ ಕ್ರೈಂ ಹೆಚ್ತಿರೋ ಹಿನ್ನೆಲೆಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಕೇಸ್ ಗಳು ಹೆಚ್ಚಾಗ್ತಿವೆ. ಅದಕ್ಕೆ ಅಂತಲೇ ರಾಜ್ಯಾದ್ಯಂತ ಸೈಬರ್ ಕ್ರೈಂ ಠಾಣೆಗಳನ್ನ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ವಿಶೇಷವಾಗಿ ಸೈಬರ್ ಕ್ರೈಂ ಕೇಸ್ ಗಳನ್ನ ನೋಡಲಾಗುತ್ತೆ. ಡಿಜಿಪಿಯೊಬ್ಬರ ನೇತೃತ್ವ ವಹಿಸಲಾಗಿದೆ: ಗೃಹ ಸಚಿವ ಜಿ. ಪರಮೇಶ್ವರ್ 

g parameshwar react to fast track court on Renukaswamy murder case by Darshan gang grg

ಬೆಂಗಳೂರು(ಜು.26):  ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ತನಿಖೆ ನಡೆಸಲಾಗ್ತಿದೆ. ಇನ್ನೂ ಕೂಡ ಎವಿಡೆನ್ಸ್‌ಗಳನ್ನ ಕಲೆಕ್ಟ್ ಮಾಡ್ತಿದ್ದಾರೆ. ನಂತರ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತೆ. ನಂತರ ಫಾಸ್ಟ್ ಟ್ರ್ಯಾಕ್, ಸ್ಲೋ ಸ್ಟ್ರ್ಯಾಕ್ ಬಗ್ಗೆ ನೋಡ್ತೀವಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಇಂದು(ಶುಕ್ರವಾರ) ನಗರದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, ಸೈಬರ್ ಕ್ರೈಂ ಹೆಚ್ತಿರೋ ಹಿನ್ನೆಲೆಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಕೇಸ್ ಗಳು ಹೆಚ್ಚಾಗ್ತಿವೆ. ಅದಕ್ಕೆ ಅಂತಲೇ ರಾಜ್ಯಾದ್ಯಂತ ಸೈಬರ್ ಕ್ರೈಂ ಠಾಣೆಗಳನ್ನ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ವಿಶೇಷವಾಗಿ ಸೈಬರ್ ಕ್ರೈಂ ಕೇಸ್ ಗಳನ್ನ ನೋಡಲಾಗುತ್ತೆ. ಡಿಜಿಪಿಯೊಬ್ಬರ ನೇತೃತ್ವ ವಹಿಸಲಾಗಿದೆ ಎಂದು ಹೇಳಿದ್ದಾರೆ. 

ರೇಣುಕಾಸ್ವಾಮಿ ಪತ್ನಿಗೆ ನೆರವು ನೀಡಲು ಹೇಳಿದ್ರಾ ನಟ ದರ್ಶನ್? 1 ಲಕ್ಷ ರೂ. ಚೆಕ್ ಕೊಟ್ಟ ವಿನೋದ್ ರಾಜ್!

ಪದೇ ಪದೇ ಸೈಬರ್ ಕ್ರೈಂ ಕೇಸ್ ಗಳು ನಮಗೆ ಚಾಲೆಂಜ್ ಆಗ್ತಿವೆ. ಆದಷ್ಟು ಇಲಾಖೆ ಕೇಸ್ ಗಳನ್ನ ಟ್ರೇಸ್ ಮಾಡಲು ಪ್ರಯತ್ನ ಮಾಡ್ತಿದೆ. ಬೇಕಾದ ಟೆಕ್ನಾಲಿಜಿಗಳನ್ನ ಅನುಸರಿಸ್ತಿದೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios