ರೇಣುಕಾಸ್ವಾಮಿ ಪತ್ನಿಗೆ ನೆರವು ನೀಡಲು ಹೇಳಿದ್ರಾ ನಟ ದರ್ಶನ್? 1 ಲಕ್ಷ ರೂ. ಚೆಕ್ ಕೊಟ್ಟ ವಿನೋದ್ ರಾಜ್!
ಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾಗಿ ಬಂದ ನಟ ವಿನೋದ್ ರಾಜ್ ಅವರು ರೇಣುಕಾಸ್ವಾಮಿ ಮನೆಗೆ ತೆರಳಿ ಆತನ ಹೆಂಡತಿ ಸಹನಾಗೆ 1 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಆದರೆ, ದರ್ಶನ್ ನೆರವು ನೀಡಲು ಹೇಳಿದ್ದರಾ? ಎಂಬ ಪ್ರಶ್ನೆಗೆ ವಿನೋದ್‌ರಾಜ್ ಏನು ಹೇಳಿದ್ರು ಗೊತ್ತಾ..?
ಚಿತ್ರದುರ್ಗ/ಬೆಂಗಳೂರು (ಜು.26): ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ ನಟ ದರ್ಶನ್‌ನ್ನು ನೋಡಿಕೊಂಡು ಬಂದಿದ್ದ ನಟ ವಿನೋದ್ ರಾಜ್, ಮೂರು ದಿನಗಳ ಅಂತರದಲ್ಲಿ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ತೆರಳಿ ಆತನ ಹೆಂಡತಿ ಸಹನಾಗೆ ಸಾಂತ್ವನ ಹೇಳಿ 1 ಲಕ್ಷ ರೂ. ಚೆಕ್ ಸಹಾಯಧನ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ನಟ ವಿನೋದರಾಜ್ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆಗೆ ಆಧಾರ ಸ್ತಂಭವಾಗಿದ್ದ ಮಗನ ಕಳೆದುಕೊಂಡಿದೆ. ಕುಟುಂಬ ಪರಿತಪಿಸುತ್ತಿದೆ. ಅವರ ಸ್ಥಿತಿ ಕಂಡು ಕರಳುಕಿತ್ತು ಬರ್ತಿದೆ. ನಾವು ಮನುಷ್ಯರಾಗಿದ್ದೀವಾ ಅಂತ ಮುಟ್ಟಿ ನೋಡಿಕೊಳ್ಳುವ ಕಾಲ ಇದಾಗಿದೆ. ಪ್ರತಿಯೊಂದು ಜೀವಿಗೂ ಜೀವವಿದೆ, ಮಕ್ಕಳು ಬಾಳಿ ಬದುಕಬೇಕು. ಬೆಳೆದು ಬೆಳಗಬೇಕು ಅಂತ ತಂದೆ ತಾಯಿ ಬೆಳೆಸುತ್ತಾರೆ. ಕೆಟ್ಟದ್ದು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುತ್ತವೆ. ಇಂತಹ ಘಟನೆ ಹೆಚ್ಚಾಗದಂತೆ ಎಚ್ಚೆತ್ತುಕೊಳ್ಳಬೇಕು. ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡ್ತಾರೆ. ಇದು ಆಘಾತಕಾರಿ ವಿಷಯ ಹೆಸರು, ಕೀರ್ತಿಯಲ್ಲಿರುವ ನಾವು ಎಚ್ಚರವಾಗಿರಬೇಕು. ನಮ್ಮ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು. ಅಚಾತುರ್ಯ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು. ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು ಎಂದು ಹೇಳಿದರು.
ಹೆಂಡತಿ ವಿಜಯಲಕ್ಷ್ಮಿಗೆ ಹಲ್ಲೆ ಮಾಡಿ ಜೈಲು ಸೇರಿದ್ದ ನಟ ದರ್ಶನ್ ಬಿಡುಗಡೆ ವೇಳೆ 'ಹೋಗಿ ಬರ್ತೀನಿ ಸರ್' ಎಂದಿದ್ದರಂತೆ!
ದರ್ಶನ್ ಭೇಟಿ ವೇಳೆ ರೇಣುಕಸ್ವಾಮಿ ಕುಟುಂಬದ ಬಗ್ಗೆ ಯಾವುದೇ ಮಾತನಾಡಲಿಲ್ಲ. ಸಿಕ್ಕ ಸಮಯಾವಕಾಶದಲ್ಲಿ ಹೆಚ್ಚು ಮಾತನಾಡಲು ಆಗಲಿಲ್ಲ. ನನ್ನನ್ನು ನೋಡಿದಾಕ್ಷಣ ದರ್ಶನ್ ಭಾವುಕರಾದರು. ನಟ ದರ್ಶನ್ ನನ್ನನ್ನು ತಬ್ಬಿಕೊಂಡರು. ಇಂತಹ ಘಟನೆ ನಡೆಯಬಾರದು. ಕ್ರೋಧ, ದ್ವೇಷ, ಅಸೂಯೆ ಎಲ್ಲ ಬಿಡಬೇಕು, ಕಡಿವಾಣ ಹಾಕಬೇಕು. ನಮ್ಮ ತಾಯಿ ಸಿನೆಮಾ ನೋಡಿದ್ದೇವೆಂದ ರೇಣುಕಾಸ್ವಾಮಿ ತಂದೆ ಹೇಳಿದರು. ಇದೇ ವೇಳೆ ನಟ ವಿನೋದ್ ರಾಜ್ ಕುಮಾರ್ ಮುಂದೆ ರೇಣುಕಸ್ವಾಮಿ ತಂದೆ ತಾಯಿ ಕಣ್ಣೀರು ಹಾಕಿದರು.
ರೇಣುಕಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಮಾತನಾಡಿ, ನಾವು ಸಂಧಾನಕ್ಕೆ ಹೊರಟಿದ್ದೇನೆ ಅಂತ ಪ್ರಚಾರ ಸರಿಯಲ್ಲ. ಮಗನ ಕಳೆದುಕೊಂಡು ಕರಳು ಕಿತ್ತು ಬರ್ತಿದೆ. ಈ ಪ್ರಕರಣದಿಂದ ನಾವು ನೊಂದಿದ್ದೇವೆ. ನಮ್ಮ ತಾಯಿಗೆ 98 ವರ್ಷವಾಗಿದೆ. ನಮ್ಮ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ. ನಮ್ಮ ಮಗ ನಿತ್ಯ ಅಜ್ಜಿಗೆ ಆರೈಕೆ ಮಾಡುತ್ತಿದ್ದನು. ಮಗನ ಕೊಂದ ಆರೋಪಿಗಳು ಯಾರು? ಅಂತ ನಮಗೆ ಗೊತ್ತಿಲ್ಲ. ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು. ವಿನೋದ್ ರಾಜ್ ತಾಯಿ ಬಗ್ಗೆ ಅಪಾರ ಗೌರವವಿದೆ. ಅವರ ದೈವಭಕ್ತಿ ಬಗ್ಗೆ ಕೇಳಿದ್ದೇವೆ. ವಿನೋದ ರಾಜ್ ಕುಮಾರ್ ಬಂದಿದ್ದು ಸಮಾಧಾನ ತಂದಿದೆ ಎಂದು ಹೇಳಿದರು.
Breaking: ನಟ ದರ್ಶನ್ ಮನೆ ಊಟ ಕೊಡುವಂತೆ ಸಲ್ಲಿಸಿದ್ದ ಅರ್ಜಿ ವಜಾ; ಜೈಲೂಟವೇ ಗತಿ
ದರ್ಶನ್ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬದ ಭೇಡಿ ಮಾಡಿದ್ದೀನಿ. ಯಾಕೆ ನೀವು ನಟ ದರ್ಶನ್ ಹೇಳಿದ್ದಾರೆಂದು ಮಾತುಕತೆಗೆ ಬಂದಿದ್ದೀರಾ ಎಂದು ಮಾಧ್ಯಮಗಳಿಂದ ಪ್ರಶ್ನೆ ಕೇಳಲಾಯಿತು. ಆದರೆ, ಇದನ್ನು ನಿರಾಕರಿಸಿದ ವಿನೋದ್ ರಾಜ್, ಛೇ ಛೇ ಹಾಗೆಲ್ಲ ಇಲ್ಲ. ದರ್ಶನ್ ಭೇಟಿ ವೇಳೆ ರೇಣುಕಾಸ್ವಾಮಿ ಕುಟುಂಬದ ಮಾತಾಡಲೇ ಇಲ್ಲ. ದರ್ಶನ್ ನೋಡಿದರೆ ಅಲ್ಲೂ ಅದೇ ಪರಿಸ್ಥಿತಿ ಇದೆ. ಇಲ್ಲಿ ನೋಡಿದರೆ ಅದಕ್ಕಿಂತ ಭಯಾನಕ ಸ್ಥಿತಿ ಇದೆ ಎಂದು ಹೇಳಿದರು.