Asianet Suvarna News Asianet Suvarna News

ಸಿ.ಪಿ. ಯೋಗೇಶ್ವರದ್ದು ಎನ್ನಲಾದ ಆಡಿಯೋ ವೈರಲ್: ವಿಪಕ್ಷಗಳಿಂದ ಭಾರಿ ತರಾಟೆ

ಚುನಾವಣೆ ಬಳಿಕ ನಮ್ಮ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ, ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರ್ಕಾರ ರಚಿಸುತ್ತೇವೆ. ಅಮಿತ್ ಷಾ ಒಂಥರ ರೌಡಿ ರೀತಿ. ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ರಾಜಕೀಯ ಮಾಡ್ತಾರೆ ಕಣಯ್ಯ.

Full details of the audio said to be from CP Yogeshwar are here Amit Rowdy No referendum for BJP sat
Author
First Published Jan 14, 2023, 6:59 PM IST

ಬೆಂಗಳೂರು (ಜ.14): ಚುನಾವಣೆ ಬಳಿಕ ನಮ್ಮ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ, ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರ್ಕಾರ ರಚಿಸುತ್ತೇವೆ. ಅಮಿತ್ ಷಾ ಒಂಥರ ರೌಡಿ ರೀತಿ. ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ರಾಜಕೀಯ ಮಾಡ್ತಾರೆ ಕಣಯ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದೆ. ಆದರೆ, ಈ ಆಡಿಯೋ ಬಗ್ಗೆ ವಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ಸಿ.ಪಿ. ಯೋಗೇಶ್ವರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಬಿಜೆಪಿಯಿಂದಲೇ ವಿಧಾನ ಪರಿಷತ್ ಸದಸ್ಯನಾಗಿದ್ದು, ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಬಗ್ಗೆ ಸ್ವಪಕ್ಷದಲ್ಲಿಯೂ ಹೈಕಮಾಂಡ್‌ ಕೆಂಡಾಮಂಡಲವಾಗಿದೆ. ಆದರೆ, ಈ ವಿಚಾರ ವಿಪಕ್ಷಗಳ ಟೀಕೆಗೆ ಆಹಾರವಾಗಬಾರದು ಎನ್ನುವಂತೆ ಈ ಆಡಿಯೋ ನಕಲಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸತ್ಯಾಸತ್ಯತೆ ಪೊಲೀಸ್‌ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ. ಈಗ ಪೊಲೀಸ್‌ ಇಲಾಖೆ ಸುಮ್ಮನಿದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಕಲಿ ಆಡಿಯೋಗಳ ಹಾವಳಿ ಇನ್ನೂ ಹೆಚ್ಚಾಬಹುದು. 

ಸಿಪಿ ಯೋಗೇಶ್ವರ್‌ ಆಡಿಯೋ: ಗೇಲಿ ಮಾಡಿದ ಕಾಂಗ್ರೆಸ್‌

ಆಡಿಯೋದಲ್ಲಿರುವ ವಿವರ ಇಲ್ಲಿದೆ?
2023ರ ಚುನಾವಣೆಯಲ್ಲಿ ಜೆಡಿಎಸ್‌ನ ೨೦ ಅಭ್ಯರ್ಥಿಗಳಯ ಸೋಲುತ್ತಾರೆ. ಇದರಲ್ಲಿ ಗುಬ್ಬಿ ಶ್ರೀನಿವಾಸ್,  ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ.ರಾಮಸ್ವಾಮಿ, ಬೆಂಗಳೂರಿನ ಗನ್  ಮಂಜು, ನೆಲಮಂಗಲದ ಶ್ರೀನಿವಾಸಮೂರ್ತಿ, ಮಳವಳ್ಳಿ ಅನ್ನದಾನಿ, ಮದ್ದೂರು ಡಿ.ಸಿ.ತಮ್ಮಣ್ಣ, ಮಂಡ್ಯಶ್ರೀನಿವಾಸ್, ಕೆ.ಆರ್.ನಗರದ ಸಾ.ರಾ.ಮಹೇಶ್ ಅವರುಗಳು ಹೀನಾಯವಾಗಿ ಸೋಲುತ್ತಾರೆ. ರಾಮನಗರದ ಮೂರು ವಿಧನಸಭಾ ಕ್ಷೇತ್ರದಲ್ಲಿ ಒಂದರಲ್ಲಿ ಜೆಡಿಎಸ್ ಸೋಲುತ್ತದೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಇದ್ದರೂ ಇರಬಹುದು. ಉತ್ತರ ಕರ್ನಾಟದಲ್ಲಿ 5 ಜೆಡಿಎಸ್ ಎಂಎಲ್‌ಎ ಇದ್ದಾರೆ. ಇದರಲ್ಲಿ ಮೂರು ಜನ ವಾಶ್ ಔಟ್ ಆಗ್ತಾರೆ. ಬಂಡೆಪ್ಪ ಕಾಶಪ್ಪನವರ್ ಜತೆಗೆ ಇನ್ನೊಬ್ಬ ಗೆಲ್ಲಬಹುದು ಅಷ್ಟೆ ಎಂದಿದ್ದಾರೆ.

ನಾನು ಕುಮಾರಸ್ವಾಮಿ ವಿರುದ್ಧ ನಿಲ್ಲುತ್ತಿದ್ದೆನೆ. ಇದೇ ಅಶೋಕ್ ಬಂದು ಡಿ.ಕೆ.ಶಿವಕುಮಾರ್ ವಿರುದ್ಧ ನಿಲ್ಲಲಿ. ಅಶ್ವತ್ಥ್ ನಾರಾಯಣ್ ರಾಮನಗರದಿಂದ ಕುಮಾರಸ್ವಾಮಿ ಮಗನ ಮೇಲೆ ನಿಲ್ಲಲಿ?  2023ಕ್ಕೆ ಒಕಲಿಗರ ನಾಯಕರು ಯಾರು? ಕುಮಾರಸ್ವಾಮಿ ವಿರುದ್ದ ಗೆದ್ದಮೇಲೆ ನಾನು ಏಲ್ಲೊ ಇರ್ತಿನಿ. ನಾನೇ ಸಿಎಂ ಆದರೂ ಆದೆ. ಹೀಗೆ, ಸವಾಲೆಸೆದಿರುವುದು ಮಾತ್ರವಲ್ಲ 2023ರ ಚುನಾವಣೆಯ ಕುರಿತು ಭವಿಷ್ಯ ನುಡಿದಿದ್ದಾರೆ. 

ಆಡಿಯೋ ವೈರಲ್ ಬಗ್ಗೆ ಸಿ ಪಿ ಯೋಗೇಶ್ವರ್ ಸ್ಪಷ್ಟನೆ, ಕೈ ಶಾಸಕ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಅಮಿತ್‌ ಶಾ ಒಂಥರಾ ರೌಡಿಸಂ ಕಣಯ್ಯ: ಅಮಿತ್ ಶಾ ಹೇಳಿದ್ದಾರೆ . ಹೊಂದಾಣಿಕೆ ರಾಜಕೀಯ ಬೇಡ ಅಂತಾ. ಅಮಿತ್ ಶಾ ಒಂಥಾರ ರೌಡಿಸಂ ಕಣಯ್ಯ. ಪಾರ್ಟಿ ವಿರುದ್ದ ಯಾರಾದರೂ ಮಾತನಾಡಿದರೆ ಅಷ್ಟೆ ಅವರ ಕಥೆ. ನಮ್ಮನೆಲ್ಲ ಮೊನ್ನೆ ಕರೆದು ಅವರು ಮಾತನಾಡಿದ್ದಾರೆ. ಪಾರ್ಟಿ ವಿರುದ್ಧ ಯಾರ್ಯಾರು ದ್ರೋಹ ಮಾಡ್ತಿದ್ದೀರಾ ಎಂದು ಗೊತ್ತು ಎಂದು ನೀಟಾಗಿ ಹೇಳಿದ್ದಾರೆ. ಇದರಲ್ಲೆ ಹೊಂದಾಣಿಕೆ ಅಂತಾ ಜನರಲ್ಲಿ ಚರ್ಚೆಯಾಗುತ್ತಿದೆ.ಒಟ್ಟಿನಲ್ಲಿ ಏನೇ ಆಗ್ಲಿ ಬಿಜೆಪಿ ಸರಕಾರ ರಚನೆಯಾಗುತ್ತೆ ಎಂದಿದ್ದಾರೆ.

ಬಿಜೆಪಿಗೆ ಜನಾಭಿಪ್ರಾಯ ಸಿಗುವುದಿಲ್ಲ: ಮೈಸೂರು ಭಾಗದಲ್ಲಿ ನಾವು, ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ಮಾಡಿದ್ದೊ ನನ್ನ ಅಭಿಪ್ರಾಯದ ಪ್ರಕಾರ ಬಿಜೆಪಿ ಸರ್ಕಾರ ಬರೋದಿಲ್ಲ. ಜನಾಭಿಪ್ರಾಯದ ಮೂಲಕವು ಬಿಜೆಪಿ ಬರೋದಿಲ್ಲ ಆದರೆ, ನಾವು ಬಿಜೆಪಿ ಸರಕಾರ ರಚನೆ ಮಾಡ್ತಿವಿ. ಮಾವಿನ ಹಣ್ಣನ್ನು ಮರೆದಲ್ಲೇ ಹಣ್ಣು  ಮಾಡೋಕೊ, ತಂದು ಕೆಮಿಕಲ್ ಹಾಕಿ ಹಣ್ಣು ಮಾಡೋಕು ವೆತ್ಯಾಸ ಇದೆ. ನಾವು ಎರಡಕ್ಕು ರೆಡಿ ಇದ್ದಿವಿ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟೋಕೆ ಅವರ ಲೀಡರ್‌ಗಳಿಗೆ ಇಷ್ಟ ಇಲ್ಲ ಡಾ.ಪರಮೇಶ್ವರ್ ಸಹ ಇದ್ದರಲಿ ಒಬ್ಬರು ಎಂದಿದ್ದಾರೆ.

Follow Us:
Download App:
  • android
  • ios