ಆಡಿಯೋ ವೈರಲ್ ಬಗ್ಗೆ ಸಿ ಪಿ ಯೋಗೇಶ್ವರ್ ಸ್ಪಷ್ಟನೆ, ಕೈ ಶಾಸಕ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ
ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಅವರ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಾಸಕ ಸಿ. ಪುಟ್ಟರಂಗಶೆಟ್ಟಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಬರ್ತಾರೆ ಅಂತ ಅವರು ಹೇಳ್ಬೇಕು, ಬಿಜೆಪಿಗೆ ಸೇರೋದಲ್ಲ ಎಂದಿದ್ದಾರೆ.
ಚಾಮರಾಜನಗರ (ಜ.14): ಮಾಜಿ ಸಚಿವ ಹಾಗೂ ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಅವರ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಶಾಸಕ ಸಿ. ಪುಟ್ಟರಂಗಶೆಟ್ಟಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಬರ್ತಾರೆ ಅಂತ ಹೇಳ್ಬೆಕು, ಬಿಜೆಪಿಗೆ ಸೇರೋದಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಕಾಂಗ್ರೆಸ್ ಗೆ ಬಿಜೆಪಿಯವ್ರು ಬರ್ತಾರೆ. ಬಿಜೆಪಿಯವರು ಕಾಂಗ್ರೆಸ್ ಗೆ ಬರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ನಮ್ಮ ನಾಯಕರೇ ಅವರನ್ನ ಸೇರಿಸಿಕೊಳ್ಳಲು ಹಿಂದೆ ಮುಂದೆ ನೋಡ್ತಿದಾರೆ. ಎಚ್. ವಿಶ್ವನಾಥ್ ಹೊಗಿದ್ರು ಮತ್ತೆ ಬರ್ತಿಲ್ವಾ. ಎಂಟಿಬಿ ನಾಗರಾಜ್ ಸೀಟು ಕೊಟ್ರೆ ಕಾಂಗ್ರೆಸ್ ಸೇರೊಕೆ ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲಾ ಕಾದು ನೋಡಿ ಎಷ್ಟೆಷ್ಟು ಜನ ಬರ್ತಾರೆ ಅಂತ ಎಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರೆ ಎಂಬ ಯೋಗೇಶ್ವರ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
ಸಿದ್ದರಾಮಯ್ಯ ಕಂಡ್ರೆ ಬಿಜೆಪಿಗೆ ಭಯ: ಮಾಜಿ ಸಿಎಂ ಸಿದ್ದರಾಮಯ್ಯ ಗೆದ್ದರೆ ಸಿಎಂ ಆಗೋದಷ್ಟೆ ಅಲ್ಲ ಪ್ರಧಾನಿ ಮೊದಿಯನ್ನೆ ಸೋಲಿಸ್ತಾರೆ. ಅದಕ್ಕೆ ಅವರಿಗೆ ಸಿದ್ದರಾಮಯ್ಯ ಕಂಡ್ರೆ ಭಯ. ಇಡೀ ದೇಶದಲ್ಲೇ ಮೋದಿ ಅವರನ್ನ ನೇರವಾಗಿ ಅಟ್ಯಾಕ್ ಮಾಡೋದು ಸಿದ್ದರಾಮಯ್ಯ ಒಬ್ಬರೆ ಎಂದು ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
Assembly election: ರಾಜಕೀಯ ಬದ್ಧ ವೈರಿ ಯೋಗೇಶ್ವರ್- ಡಿ.ಕೆ. ಸುರೇಶ್ ಹಸ್ತಲಾಘವ: ಕಾಲೆಳೆದುಕೊಂಡ ನಾಯಕರು
ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಿಪಿವೈ: ಇನ್ನು ಆಡಿಯೋ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ. ಆಡಿಯೋ ನನ್ನದಲ್ಲ. ಅದು ಎಡಿಟೆಡ್ ಫೇಕ್ ಆಡಿಯೋ. ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನನಗೆ ಆತ್ಮವಿಶ್ವಾಸವಿದೆ. ನನಗೆ ವಿರೋಧಿಗಳು ಹೆಚ್ಚು ಅವರೇ ಈ ಕೆಲಸ ಮಾಡಿ ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. ನಾನು ಪಕ್ಷ ಸಂಘಟನೆ ಮಾಡಿ, ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತೇನೆ ನನಗೆ ಯಾವುದೇ ಆತಂಕ ಇಲ್ಲ. ಜೊತೆಗೆ ಕುಮಾರಸ್ವಾಮಿ ವಿರುದ್ಧ ನಾನು ಗೆಲ್ಲುತ್ತೇನೆ ಎಂದಿದ್ದಾರೆ.
ಸಂಸದೆ ಸುಮಲತಾ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಸಿ.ಪಿ.ಯೋಗೇಶ್ವರ್
ಯೋಗೇಶ್ವರ್ ಆಡಿಯೋದಲ್ಲಿ ಏನಿದೆ?
ಮೈಸೂರು ಭಾಗದ ಕಾಂಗ್ರೆಸ್ ಎಂಎಲ್ಎಗಳು ಬಿಜೆಪಿ ಸೇರುತ್ತಾರೆ ಎಂದಿದ್ದಾರೆ. ಜೊತೆಗೆ ಸ್ವಪಕ್ಷದ ಬಗ್ಗೆ ಮತ್ತು ನಾಯಕರ ಬಗ್ಗೆ ಕೂಡ ಮಾತನಾಡಿದ್ದಾರೆ. ಆಡಿಯೋದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಬಿಸಿ ಬಿಸಿ ಚರ್ಚೆ ಆಗಿದೆ. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ. ಪಾರ್ಟಿ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ. ಎಂದು ಯೋಗೇಶ್ವರ್ ಹೇಳಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.