ಸಿಪಿ ಯೋಗೇಶ್ವರ್ ಆಡಿಯೋ: ಗೇಲಿ ಮಾಡಿದ ಕಾಂಗ್ರೆಸ್
ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲವೇ ಇಲ್ಲ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಸಾಮರ್ಥ್ಯವೂ ಇಲ್ಲ. ಆಪರೇಷನ್ ಕಮಲದಂತಹ ಅನಿಷ್ಟಗಳ ಮೂಲಕ ಸರ್ಕಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಲಜ್ಜೆಯಿಲ್ಲದೆ ಹೇಳಿಕೊಳ್ಳುವ ಪ್ರಪಂಚದ ಏಕೈಕ ಪಕ್ಷ ಬಿಜೆಪಿ.
ಬೆಂಗಳೂರು (ಜ.14): ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲವೇ ಇಲ್ಲ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಸಾಮರ್ಥ್ಯವೂ ಇಲ್ಲ. ಆಪರೇಷನ್ ಕಮಲದಂತಹ ಅನಿಷ್ಟಗಳ ಮೂಲಕ ಸರ್ಕಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಲಜ್ಜೆಯಿಲ್ಲದೆ ಹೇಳಿಕೊಳ್ಳುವ ಪ್ರಪಂಚದ ಏಕೈಕ ಪಕ್ಷ ಬಿಜೆಪಿ. ರಾಜ್ಯದಲ್ಲಿ ಬಿಜೆಪಿಅಸಹ್ಯದ ಪರಮಾವಧಿ ತಲುಪಿದೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್‌ಗಳ ಮೂಲಕ ಗೇಲಿ ಮಾಡಿದೆ.
ರಾಜ್ಯದಲ್ಲಿ ತಮ್ಮದೇ ಪಕ್ಷ ನಾಯಕರನ್ನು ಒಬ್ಬರು 'ನೀಚ' ಎನ್ನುತ್ತಾರೆ. ಮತ್ತೊಬ್ಬರು 'ಪಿಂಪ್' ಎನ್ನುತ್ತಾರೆ. ಇನ್ನೊಬ್ಬರು 'ಸಿಡಿ' ಎನ್ನುತ್ತಾರೆ. ಬಿಜೆಪಿ ನಾಯಕರ ನಡುವೆಯೇ ಕಿತ್ತಾಟ ಆಗುತ್ತಿರುವುದು ಅತ್ಯಂತ ಕೀಳು ಹಂತಕ್ಕೆ ತಲುಪಿದೆ. ತಮ್ಮ ಪಕ್ಷವನ್ನೇ ನಿಭಾಯಿಸಲಾಗದ ಅಸಮರ್ಥ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಬಗ್ಗೆ ಮಾತಾಡುವುದು ಆಕಾಶಕ್ಕೆ ಉಗುಳಿದಂತೆಯೇ ಸರಿ. ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಬಿಜೆಪಿ ನಿಜ ಬಣ್ಣ ದಿನೇ ದಿನೇ ಬಟಾ ಬಯಲಾಗುತ್ತಿದೆ! ವಾಮ ಮಾರ್ಗದ ಮೂಲಕ ಅಧಿಕಾರ ಪಡೆದ ಬಿಜೆಪಿ ತನ್ನದೇ ಪಕ್ಷದ ಶಾಸಕರ ಹೇಳಿಕೆಗಳಿಂದ ಪ್ರತಿ ದಿನ ಬೆತ್ತಲಾಗುತ್ತಿದೆ. ರಾಜ್ಯದ ಜನ ಬಿಜೆಪಿ ಗೆ ಪಾಠ ಕಲಿಸಲು ಕಾಯ್ತಿತಿದ್ದಾರೆ! ಎಂದು ಕಿಡಿಕಾರಿದೆ.
ಸಿ.ಪಿ. ಯೋಗೇಶ್ವರದ್ದು ಎನ್ನಲಾದ ಆಡಿಯೋ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ: ಅಮಿತ್ ರೌಡಿ- ಬಿಜೆಪಿಗೆ ಜನಾಭಿಪ್ರಾಯ ಇಲ್ಲ
ನಾವಿಕನಿಲ್ಲದ ಹಡಗು, ನಾಯಕನಿಲ್ಲದ ಬಿಜೆಪಿ ಎರಡೂ ಒಂದೇ: "ಯತ್ನಾಳ್ ನಾಲಿಗೆ ಕತ್ತರಿಸಬೇಕಾಗುತ್ತದೆ" - ನಿರಾಣಿ ಮೇಲೆ ರೌಡಿ ಮೋರ್ಚಾದ ಪ್ರಭಾವ ಪರಿಣಾಮಕಾರಿಯಾಗಿದೆ! ಹೊಡಿ, ಬಡಿ, ಕಡಿ, ಕತ್ತರಿಸು.. ಇದೇ ಬಿಜೆಪಿಯ ಅಸಲಿ ರೌಡಿ ಸಂಸ್ಕೃತಿ. ನಿತ್ಯ ಬೀದಿ ಜಗಳ ಮಾಡಿಕೊಂಡಿರುವ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಬೇಕಿಲ್ಲ, ಬಿಜೆಪಿಯೇ ಬಿಜೆಪಿಯನ್ನು ಸೋಲಿಸಲಿದೆ! ಅರಾಜಕತೆ ಎನ್ನುವುದು ಸರ್ಕಾರದಲ್ಲಷ್ಟೇ ಅಲ್ಲ, ಬಿಜೆಪಿ ಪಕ್ಷದಲ್ಲೂ ತಾಂಡವವಾಡುತ್ತಿದೆ. ಸ್ಯಾಂಟ್ರೋ ರವಿಯಂತಹ ಬ್ರೋಕರ್‌ಗಳಿಗೂ ಮನ್ನಣೆ ನೀಡುವ ಹೇಳಿಕೆ ಒಂದು ಕಡೆ. ಪಕ್ಷದ ಮೇಲೆ ಹಿಡಿತ, ಸಾಮರ್ಥ್ಯ ಎರಡೂ ಇಲ್ಲದ ನಳಿನ್ ಕುಮಾರ್ ಕಟೀಲ್ ಇನ್ನೊಂದೆಡೆ. ನಾವಿಕನಿಲ್ಲದ ಹಡಗು, ನಾಯಕನಿಲ್ಲದ ಬಿಜೆಪಿ ಎರಡೂ ಒಂದೇ! ಮುಳುಗಿ ಪಾತಾಳ ಸೇರುತ್ತವೆ!
ಈ ಕುರಿತು ಮಾತನಾಡಿದ ಸಚಿವ ಡಾ. ಅಶ್ವತ್ಥ್ ನಾರಾಯಣ, ಅದು ಸತ್ಯನೋ, ಅಸತ್ತನೋ ಗೊತ್ತಿಲ್ಲ. ಆಡಿಯೋಗಳು ಬರ್ತಾ ಇರುತ್ತೆ, ಹರಟೆ ಹೊಡಿಯೋ ವೇಳೆ ಮಾತಾಡಿದ್ದಿರಬಹುದು. ಅದು ನಿಜವೋ ಫ್ಯಾಬ್ರಿಕೇಟೆಟ್ ಅಗಿದೆನೋ ಗೊತ್ತಿಲ್ಲ. ಅದು ಸತ್ಯ ಆಗಿದ್ರಿನೂ ,ಮನುಷ್ಯನ ಆಲೋಚನೆ ಅದು, ಅದನ್ನು ವ್ಯಕ್ತ ಪಡಿಸಿರಬಹುದು. ಅದನ್ಯಾಕೆ ಸೀರಿಯಸ್ ಆಗಿ ತಗೋಬೇಕು. ಏನೋ ಹರಟೆ ಹೊಡಿಬೇಕಾದ್ರೆ, ಯಾರೋ ರಿಕಾರ್ಡ್ ಮಾಡಿಬಿಟ್ಟರೆ, ಮಾತಾಡೋ ಸ್ವಾತಂತ್ರ್ಯವೂ ಇಲ್ವಾ ಈ ದೇಶದಲ್ಲಿ. ಯಾರು ಬೇಕಾದ್ರೂ, ಮಾತಾಡಬಹದು. ಯಾವಾಗ ಬೇಕಾದ್ರೂ ಮಾತಾಡಬಹದು, ಪಕ್ಕದಲ್ಲಿದ್ದವನು ಸ್ಕೆಚ್ ಹಾಕಿದ್ದರೆ ಏನು ಮಾಡೋದು ಎಂದು ಹೇಳಿದ್ದಾರೆ.
ಆಡಿಯೋ ವೈರಲ್ ಬಗ್ಗೆ ಸಿ ಪಿ ಯೋಗೇಶ್ವರ್ ಸ್ಪಷ್ಟನೆ, ಕೈ ಶಾಸಕ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ
ಈ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಸಿ.ಪಿ. ಯೋಗೇಶ್ವರ್ ಅವರು ಎಲ್ಲೋ ಕುಳಿತು ಮಾತಾಡಿದಾರೆ. ಅದಕ್ಕೆಲ್ಲಾ ಉತ್ತರ ಕೊಡಬೇಕಾ.? ಅದರ ಬಗ್ಗೆ ಎಲ್ಲಾ ನಾವು ಮಾತನಾಡಲ್ಲ ಎಂದು ಹೇಳಿದ್ದಾರೆ.