Asianet Suvarna News Asianet Suvarna News

ಸ್ವಾತಂತ್ರ್ಯಯೋಧ, ಶತಾಯುಷಿ ವೆಂಕಣ್ಣ ನಾಯಕ ಇನ್ನಿಲ್ಲ

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಾಲೂಕಿನ ಸೂರ್ವೆಯ ವೆಂಕಣ್ಣ ಬೊಮ್ಮಯ್ಯ ನಾಯಕ (102) ಭಾನುವಾರ ಅಸುನೀಗಿದರು. ತಾಲೂಕಿನಲ್ಲಿದ್ದ ಸ್ವಾತಂತ್ರ್ಯ ಚಳವಳಿಯ ಕೊನೆಯ ಕೊಂಡಿ ಕಳಚಿದೆ.

Freedom fighter Venkanna Nayaka Passed Away gvd
Author
First Published Sep 4, 2022, 9:47 PM IST

ಅಂಕೋಲಾ (ಸೆ.04): ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಾಲೂಕಿನ ಸೂರ್ವೆಯ ವೆಂಕಣ್ಣ ಬೊಮ್ಮಯ್ಯ ನಾಯಕ (102) ಭಾನುವಾರ ಅಸುನೀಗಿದರು. ತಾಲೂಕಿನಲ್ಲಿದ್ದ ಸ್ವಾತಂತ್ರ್ಯ ಚಳವಳಿಯ ಕೊನೆಯ ಕೊಂಡಿ ಕಳಚಿದೆ. ವೆಂಕಣ್ಣ ನಾಯಕ ಬ್ರಿಟಿಷ್‌ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ, ಜಂಗಲ್‌ ಸತ್ಯಾಗ್ರಹ, ಹುಲ್ಲುಬನ್ನಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಒಳಗೊಂಡು ಹಲವು ಪ್ರಮುಖ ಹೋರಾಟದಲ್ಲಿ ಭಾಗವಹಿಸಿದ್ದರು. ಇದರ ಪರಿಣಾಮ 1942ರ ಡಿಸೆಂಬರ್‌ 5ರಿಂದ 1943ರ ಜೂ.7ರವರೆಗೆ ನಾಸಿಕ್‌ದಲ್ಲಿ ಇರುವ ಸೆಂಟ್ರಲ್‌ ಜೈಲ್‌ನಲ್ಲಿ ಕೈದಿಯಾಗಿದ್ದರು. 

ಸ್ವಾತಂತ್ರ್ಯದ ಬಳಿಕ ತಳಗದ್ದೆಯ ಸೇವಾ ಸಹಕಾರಿ ಸಂಘ ಸಂಸ್ಥಾಪನಾ ಅಧ್ಯಕ್ಷರಾಗಿ, ಸೂರ್ವೆ ಸೇವಾ ಸಹಕಾರಿ ಸಂಘ ಅಧ್ಯಕ್ಷರಾಗಿ, ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕರಾಗಿ, ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಸಂಸ್ಥಾಪಕ ನಿರ್ದೇಶಕರಾಗಿ, ಅಗಸೂರಿನ ಗಂಗಾವಳಿ ಸಹಕಾರಿ ಹಂಚಿನ ಕಾರ್ಖಾನೆ ನಿರ್ದೇಶಕರಾಗಿ, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ ನಿರ್ದೇಶಕರಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

Mh Krishnaiah Passed Away: ಹಿರಿಯ ಸಾಹಿತಿ, ವಿಮರ್ಶಕ ಎಂ.ಎಚ್‌.ಕೃಷ್ಣಯ್ಯ ನಿಧನ

ಶಾಸಕಿ ರೂಪಾಲಿ ಸಂತಾಪ: ಕರ್ನಾಟಕದ ಬಾರ್ಡೋಲಿ ಅಂಕೋಲೆಯ ಸ್ವಾತಂತ್ರ್ಯ ಹೋರಾಟಗಾರ ಸೂರ್ವೆ ವೆಂಕಣ್ಣ ನಾಯಕ ನಿಧನಕ್ಕೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌. ನಾಯ್ಕ ಸಂತಾಪ ಸೂಚಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವೆಂಕಣ್ಣ ನಾಯಕ ಅವರನ್ನು ಸನ್ಮಾನಿಸಿ ಆಶೀರ್ವಾದವನ್ನು ಪಡೆದುಕೊಂಡಿದ್ದೆ. ಇಂದು ಅವರು ಅಗಲಿರುವ ವಿಷಯ ತಿಳಿದು ಮನಸ್ಸಿಗೆ ಅತೀವ ನೋವುಂಟಾಗಿದೆ ಎಂದಿದ್ದಾರೆ.

ಅಂಕೋಲಾದ ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಕೊನೆಯ ಕೊಂಡಿ ಕಳಚಿದಂತಾಗಿದೆ. ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನ ಅವಿಸ್ಮರಣೀಯವಾದುದು. ಅವರ ನೆನಪು ಅಜರಾಮರವಾಗಿರಲಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಬಾರ್ಡೋಲಿ ಅಂಕೋಲೆಯ ಹೋರಾಟಗಾರರ ಪಾತ್ರ ಅತಿ ದೊಡ್ಡದು. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಎಲ್ಲರಿಗೂ ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಗೌರವಿಸುವ ಕಾರ್ಯಾ ಆರಂಭ: ಇಲ್ಲಿನ ಅಂಕೋಲಾದ ಬೆಳೆಗಾರರ ಸಮಿತಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಗೌರವಿಸುವ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಅಂಕೋಲೆಯಲ್ಲಿ ಸುಮಾರು 430 ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿದ್ದು, ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ದಿವಂಗತರಾಗಿದ್ದಾರೆ. ಅಂಕೋಲೆಯಲ್ಲಿ ಈಗ ಬದುಕುಳಿದ ಸ್ವಾತಂತ್ರ್ಯ ಹೋರಾಟಗಾರೆಂದರೆ ಸೂರ್ವೇಯ ವೆಂಕಣ್ಣ ನಾಯಕರು. ಸ್ವಾತಂತ್ರ್ಯ ಹೋರಾಟಕ್ಕೆ ಅಂಕೋಲೆಯ ಹೋರಾಟಗಾರರ ಕೊಡುಗೆ ಒಂದೆರಡಲ್ಲ. ಪಟ್ಟಕಷ್ಟಗಳು ನೂರಾರು.

Shivamogga Subbanna Passed Away: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಈ ಬಗ್ಗೆ ಮಾತನಾಡಿದ ಬೆಳೆಗಾರರ ಸಮಿತಿ ಅಧ್ಯಕ್ಷ ನಾಗರಾಜ ನಾಯಕ, ಸ್ವಾತಂತ್ರ್ಯ ಸೇನಾನಿಗಳು ಜೈಲುವಾಸ ಅನುಭವಿಸಿದ್ದರಿಂದ ಅವರಷ್ಟೇ ತೊಂದರೆಗೆ ಒಳಗಾಗಿದ್ದಲ್ಲ, ಅವರ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಅಣ್ಣ-ತಮ್ಮಂದಿರು ಸಹ ತೊಂದರೆಗೆ ಒಳಗಾದರು. ಉಪವಾಸ ಹೊಂದಿ ತುತ್ತು ಅನ್ನಕ್ಕೂ ಕಷ್ಟನಷ್ಟಅನುಭವಿಸಿದರು ಎಂದರು. ಸ್ವಾತಂತ್ರ್ಯ ಹೋರಾಟಗಾರರು ಮರೆಯಾದ ಆನಂತರ ಅವರ ಕುಟುಂಬದವರು ಅವಜ್ಞೆಗೆ ಒಳಗಾದರು.

Follow Us:
Download App:
  • android
  • ios