ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರ ಸಂಖ್ಯೆ 200 ಕೋಟಿ ತಲುಪಿತ್ತು. ಇದೀಗ ಜ. 26ರ ವೇಳೆಗೆ 248.36 ಕೋಟಿ ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದಾರೆ. 

ಬೆಂಗಳೂರು(ಜ.28):  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಶಕ್ತಿ' ಯೋಜನೆಗೆ ಭಾರೀ ಪ್ರತಿಕ್ರಿಯೆ ಮುಂದುವರೆದಿದ್ದು, ಯೋಜನೆ ಆರಂಭವಾದ ಎಂಟು ತಿಂಗಳಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ 248 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 2-3 ದಿನಗಳಲ್ಲಿ ಈ ಸಂಖ್ಯೆ 250 ಕೋಟಿಗೆ ತಲುಪಲಿದೆ.

ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಶಕ್ತಿ ಯೋಜನೆಯ ಮಹಿಳಾ ಪ್ರಯಾಣಿಕರ ಸಂಖ್ಯೆ 200 ಕೋಟಿ ತಲುಪಿತ್ತು. ಇದೀಗ ಜ. 26ರ ವೇಳೆಗೆ 248.36 ಕೋಟಿ ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದಾರೆ. 

ಶಕ್ತಿ ಯೋಜನೆ: 2.51 ಕೋಟಿ ಮಹಿಳೆಯರ ಪ್ರಯಾಣ, ಸಚಿವ ಜಾರ್ಜ್‌

ಪ್ರತಿದಿನ ಸರಾಸರಿ 60 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಜ. 26ರ ವೇಳೆಗೆ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯ 3,372 ಕೋಟಿ ರು.ಗೆ ತಲುಪಿದೆ.