ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ1ಚಾರ ಪ್ರಕರಣದ ವಿಚಾರಣೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಪ್ರಾಸಿಕ್ಯೂಷನ್ ಮತ್ತು ಆರೋಪಿ ಪರ ವಕೀಲರ ವಾದಗಳು ಮುಕ್ತಾಯಗೊಂಡು   ಶಿಕ್ಷೆ ಪ್ರಮಾಣ ಪ್ರಕಟವಾಗೋದು ಮಾತ್ರ ಬಾಕಿ ಇದೆ

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾ1ಚಾರ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರದಿಂದ ಆರಂಭವಾಗಿದೆ. ಶನಿವಾರ ಮಧ್ಯಾಹ್ನ 2.45ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. ಇದಕ್ಕೂ ಮುನ್ನ ಬೆಳಗ್ಗೆ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸಾರ್ವಜನಿಕ ವಕೀಲರಾದ ಬಿ.ಎನ್. ಜಗದೀಶ್ ತಮ್ಮ ವಾದವನ್ನು ಮಂಡಿಸಿದರು.

ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) ಮತ್ತು 376(2)(k) ಅಡಿಯಲ್ಲಿ ಆರೋಪಗಳು ದಾಖಲಾಗಿದೆ. ಈ ಕಲಂಗಳು ನಿರಂತರ ಅತ್ಯಾ1ಚಾರ ಮತ್ತು ನೌಕರಿ ಮಾಡುತ್ತಿರುವ ಮಹಿಳೆಯ ಮೇಲೆ ನಡೆದ ಅತ್ಯಾ1ಚಾರಕ್ಕೆ ಸಂಬಂಧಪಟ್ಟವು. ಈ ಕಲಂಗಳಡಿ ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿವರೆಗಿನ ಶಿಕ್ಷೆಯ ಸಾಧ್ಯತೆ ಇದೆ.

ಸಂತ್ರಸ್ತೆ ಬಗ್ಗೆ ಮಹತ್ವದ ಪಾಯಿಂಟ್‌ಗಳು:

ಪ್ರಾಸಿಕ್ಯೂಷನ್ ಪರ‌ ಎಸ್ಪಿಪಿ ಬಿ.ಎನ್.ಜಗದೀಶ್ ವಾದಿಸಿದಂತೆ, ಸಂತ್ರಸ್ತೆ ವಿದ್ಯಾವಂತೆಯಲ್ಲ, ಬಡತನದ ಸ್ಥಿತಿಯಲ್ಲಿರುವ ಮಹಿಳೆ. ಕೇವಲ ₹10,000 ವೇತನಕ್ಕೆ ಮನೆಕೆಲಸಕ್ಕಾಗಿ ಊರು ಬಿಟ್ಟು ಬಂದಿದ್ದರು. ಆರೋಪಿಯ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆಯು ಪ್ರಜ್ವಲ್ ರೇವಣ್ಣನಿಂದ ನಿರಂತರವಾಗಿ ಅತ್ಯಾ1ಚಾರಕ್ಕೆ ಒಳಗಾದರು. ಆರೋಪಿ ಮಹಿಳೆಯ ಒಪ್ಪಿಗೆ ಇಲ್ಲದೇ ವಿಡಿಯೋವನ್ನು ರೆಕಾರ್ಡ್ ಮಾಡಿದ್ದನು. ನಂತರ ಅದನ್ನು ಬ್ಲಾಕ್‌ಮೇಲ್ ಮಾಡಲು ಉಪಯೋಗಿಸಿದ್ದನು. ಸಂತ್ರಸ್ತೆ ವಿರುದ್ಧ ವೀಡಿಯೋ ವನ್ನ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಈ ವಿಡಿಯೋ ಬಹಿರಂಗವಾಗುವಷ್ಟರಲ್ಲೇ ಮಹಿಳೆ ಆತ್ಮ1ಹತ್ಯೆಗೆ ಕೂಡ ಯೋಚಿಸಿದ್ದರು ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಜ್ವಲ್ ವಿರುದ್ಧ ಹೀನ ಕೃತ್ಯದ ಆರೋಪಿ ಎಂದು ಬಲವಾದ ವಾದ:

ವಕೀಲ ಬಿ.ಎನ್. ಜಗದೀಶ್ ವಾದಿಸಿ "ಅತ್ಯಾ1ಚಾರ ಕೇವಲ ದೈಹಿಕ ಹಿಂಸೆ ಅಲ್ಲ, ಅದು ಮಾನಸಿಕವಾಗಿ ಕೂಡ ಆಘಾತ ನೀಡುತ್ತದೆ. ಸಂತ್ರಸ್ತ ಮಹಿಳೆಗೆ ಆರೋಪಿಯ ವಯಸ್ಸಿನ ಮಗ ಇದ್ದಾನೆ. ಇಂತಹ ಘಟನೆಯನ್ನು ಕಂಡು ಪ್ರತಿ ಮಹಿಳೆಯ ಮನಸ್ಸಿನಲ್ಲಿ ಭಯದ ಛಾಯೆ ಮೂಡುತ್ತದೆ. ಇಂತಹ ಆರೋಪಿ, ಹಿಂದೆಯೂ ಹಲವಾರು ಮಹಿಳೆಯರ ಮೇಲೆ ಹೀನ ಕೃತ್ಯ ಎಸಗಿದ್ದು, ವಿವಿಧ ಪ್ರಕರಣಗಳು ಇನ್ನೂ ಬಾಕಿಯಲ್ಲಿವೆ."

ಆರೋಪಿಗೆ ಕನಿಕರ ತೋರಿಸಬಾರದು:

"ಅವನ ವಿರುದ್ಧ ಸಾಕಷ್ಟು ವಿಡಿಯೋ ಸಾಕ್ಷ್ಯಗಳಿವೆ, ಹಲವು ಮಹಿಳೆಯರೊಂದಿಗೆ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದು, ಅವುಗಳನ್ನು ಬಹುಜನರು ವೀಕ್ಷಿಸಿದ್ದಾರೆ. ಈತನ ಮನೆಯವರೇ ಕುಟುಂಬವೇ ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿ, ಸುಳ್ಳು ಹೇಳಿಕೆ ನೀಡಲು ಒತ್ತಡ ಹೇರಿತ್ತು. ಕೇಸ್ ದಾಖಲಾದ ವೇಳೆ‌ ವಿದೇಶಕ್ಕೆ‌ ಪರಾರಿಯಾಗಿದ್ದ ನ್ಯಾಯಾಂಗ ಪ್ರಕ್ರಿಯೆಗೆ ಸಹಕರಿಸಿಲ್ಲ," ಎಂದು ವಕೀಲ ಜಗದೀಶ್ ನ್ಯಾಯಾಲಯಕ್ಕೆ ತಿಳಿಸಿದರು.

ಸುಪ್ರೀಂ ಕೋರ್ಟ್ ತೀರ್ಪುಗಳ ಉಲ್ಲೇಖ:

ವಕೀಲರು ಬಿ.ಎನ್. ಜಗದೀಶ್ ತಮ್ಮ ವಾದದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಹಲವು ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿದರು. "ಪ್ರಭಾವಿ ವ್ಯಕ್ತಿಗಳಿಂದ ನಡೆದ ಅತ್ಯಾ1ಚಾರ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ ನೀಡಬೇಕು ಎಂಬುದು ಸುಪ್ರೀಂ ಕೋರ್ಟ್‌ನ ನಿರ್ಧಾರವಾಗಿದೆ. ಆರೋಪಿ ಪ್ರಜ್ವಲ್ ರೇವಣ್ಣ ಸಾಮಾನ್ಯವಾದ ವ್ಯಕ್ತಿ ಅಲ್ಲ. ಸಂಸದ ಆಗಿದ್ದವನು, ಕಾನೂನು ರಚನೆಯ ಭಾಗವಾಗಿದ್ದವನು. ಇಂತಹ ವ್ಯಕ್ತಿ ಕಾನೂನನ್ನ ಕೈಗೆತೆಗೆದುಕೊಂಡಿದ್ದಾನೆ. ಇಂತಹವರು ಕಾನೂನು ಬಗ್ಗೆಯೂ ಉಲ್ಲಂಘನೆ ಮಾಡಿರುವುದು ಕ್ಷಮೆಗೂ ಅರ್ಹವಲ್ಲ ಎಂದರು. ಇಂತಹ ಅಪರಾಧಿಗೆ ಯಾವುದೇ ದಯೆ ತೋರಿಸಬಾರದು. ಈತ ರಾಜ್ಯದ ಮಹಿಳೆಯರಿಗೆ ಭಯ ಹುಟ್ಟಿಸಿರುವ ವ್ಯಕ್ತಿ. ಇಂತಹ ವ್ಯಕ್ತಿಗೆ ಜೀವಾವಧಿಯ ಶಿಕ್ಷೆ ನೀಡಬೇಕು ಎಂಬ ಒತ್ತಾಯವನ್ನು ನ್ಯಾಯಾಲಯದ ಮುಂದೆ ಮಂಡಿಸಿದರು.

ಮತ್ತೊಬ್ಬ ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ ಆರೋಪಿ ಲೆಜಿಸ್ಲೇಟರ್ ಆಗಿದ್ದವನು, ಇಂತಹ ದೊಡ್ಡ ಪಾಠ ಆಗುವಂತ ಶಿಕ್ಷೆ ಆಗಬೇಕು. ಆರೋಪಿಗೆ ದೊಡ್ಡ ಪ್ರಮಾಣದ ದಂಡವನ್ನ ವಿಧಿಸಬೇಕು. ಆರೋಪಿ ಬಡ ವ್ಯಕ್ತಿಯೇನು ಅಲ್ಲ. ಸಂತ್ರಸ್ತೆಗೆ ಸಹಾಯ ಆಗುವಂತ ಮೊತ್ತದ ದಂಡ ವಿಧಿಸಬೇಕು. ಆ ಸಂತ್ರಸ್ತೆಯ ವಿಡಿಯೋ ವೈರಲ್‌ ಆಗಿದ್ದರಿಂದ ಆಕೆ ಎಲ್ಲಿಯೂ ದುಡಿಯಲು ಹೋಗಲು ಸಾಧ್ಯವಿಲ್ಲ. ಹೀಗಾಗಿ ಸಂತ್ರಸ್ತೆಯ ಜೀವನಕ್ಕೆ ಪರಿಹಾರಕ್ಕಾಗಿ ದಂಡ ಘೋಷಿಸಬೇಕೆಂದು ಮನವಿ ಮಾಡಿದರು.

ನಾನು ತಪ್ಪು ಮಾಡಿಲ್ಲ ಶಿಕ್ಷೆ ಕಡಿಮೆ ಮಾಡಿ, ಪ್ರಜ್ವಲ್ ಕಣ್ಣೀರ ಮನವಿ 

ಇನ್ನು ಇದೇ ಸಮಯದಲ್ಲಿ ಕೋರ್ಟ್‌ನಲ್ಲಿ ಹಾಜರಿದ್ದ ಅಪರಾಧಿ ಪ್ರಜ್ವಲ್ ರೇವಣ್ಣ ಅವರನ್ನು ಪ್ರಶ್ನಿಸಿದ ಜಡ್ಜ್ ನೀವೇನಾದರೂ ಹೇಳಿದಿದ್ಯಾ ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಜ್ವಲ್, ತುಂಬಾ ಮಹಿಳೆಯ ಮೇಲೆ‌ ಅತ್ಯಾ1ಚಾರ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಚುನಾವಣೆ 6 ದಿನ ಇರುವಾಗ ವೀಡಿಯೋ ವೈರಲ್ ಮಾಡಲಾಗಿದೆ. ಸಂತ್ರಸ್ತೆ ಸ್ವಯಂ ಪ್ರೇರಿತವಾಗಿ ದೂರು ನೀಡಿಲ್ಲ ಎಂದು ಕಣ್ಣೀರು ಹಾಕುತ್ತಾ ಕೋರ್ಟ್ ಗೆ ಹೇಳಿದರು. ಹಲವು ಬಾರಿ ರೇಪ್ ಎಂದು ಹೇಳುತ್ತಿದ್ದಾರೆ. ನಾನು ತಪ್ಪು ಮಾಡಿಲ್ಲ. ನಾನು ನನ್ನ ತಂದೆ‌ ತಾಯಿ ನೋಡಲು ಸಾಧ್ಯವಾಗಿಲ್ಲ. ಕನಿಷ್ಠ ಶಿಕ್ಷೆ ನೀಡುವಂತೆ ಪ್ರಜ್ವಲ್ ಮನವಿ ಮಾಡಿಕೊಂಡರು. ನಾನು ಯಾರ ಮೇಲೂ ಆರೋಪ ಮಾಡಲ್ಲ. ಮಾಧ್ಯಮಗಳ ಮೇಲೂ ಆರೋಪ ಮಾಡಲ್ಲ. ದಯಮಾಡಿ ಕನಿಷ್ಠ ಶಿಕ್ಷೆ ನೀಡಿ ಎಂದು ಪ್ರಜ್ವಲ್ ಅಳುತ್ತಲೇ ಕೇಳಿಕೊಂಡ‌ರು. ನಿನ್ನ ಎಜುಕೇಷನ್‌ ಕ್ವಾಲಿಫಿಕೇಷನ್ ಎನು ಎಂದು ನ್ಯಾಯಾಧೀಶರು ಕೇಳಿದಾಗ ಬಿಇ ಇನ್ ಮೆಕ್ಯಾನಿಕಲ್ ಎಂದು ಪ್ರಜ್ವಲ್ ಉತ್ತರಿಸಿದ. ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 2.45ಕ್ಕೆ ಕಾಯ್ದಿರಿಸಿದೆ.

ಅಪರಾಧಿ ಪರ ವಕೀಲರ ವಾದವೇನು?

ಇನ್ನು ಆರೋಪಿ ಪರವಾಗಿ ವಾದ ಮಂಡಿಸಿದ ವಕೀಲ ನಳಿನಿ ಮಾಯಾಗೌಡ ಅವರು ನ್ಯಾಯಾಲಯದ ಮುಂದೆ ಹಲವು ಪ್ರಮುಖ ಅಂಶಗಳನ್ನು ಮಂಡಿಸಿದರು. ಆರೋಪಿ ಪ್ರಜ್ವಲ್ ರೇವಣ್ಣರು ಚಿಕ್ಕ ವಯಸ್ಸಿನ ರಾಜಕಾರಣಿ. ಅವರು ರಾಜಕೀಯ ಕುಟುಂಬದ ಮೂರನೇ ತಲೆಮಾರಿನ ಪ್ರತಿನಿಧಿ. ಈ ವ್ಯಕ್ತಿ ರಾಜಕೀಯ ಸ್ಪರ್ಧೆ ‌ಮಾಡಬಾರದು ಎಂದು ವೀಡಿಯೋ ವೈರಲ್ ಮಾಡಲಾಯ್ತು. ಅವರ ವಿರುದ್ಧದ ವಿಡಿಯೋಗಳು ಚುನಾವಣಾ ಸಂದರ್ಭದಲ್ಲಿ ಮಾತ್ರವೇ ವೈರಲ್ ಆಗಿದ್ದು, ಅವರ ರಾಜಕೀಯ ಭವಿಷ್ಯ ಹಾಳು ಮಾಡುವ ಉದ್ದೇಶದಿಂದ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ," ಎಂದು ಹೇಳಿದರು. ಸಂತ್ರಸ್ತೆ ಮಹಿಳೆಗೆ ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಕುಟುಂಬದೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಇಂತಹ ಯುವ ರಾಜಕಾರಣಿಯನ್ನ ಜೀವನ ಪರ್ಯಂತ ಜೈಲಿನಲ್ಲಿ ಇಡುವುದು ಸರಿಯಲ್ಲ. ಹೀಗಾಗಿ ಕನಿಷ್ಠ ಪ್ರಮಾಣದ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ಪ್ರಜ್ವಲ್ ರೇವಣ್ಣ ತಾತ ಮಾಜಿ ಪ್ರಧಾನಿ ಆಗಿದ್ದಾರೆ. ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ವಿಡಿಯೋ ವೈರಲ್ ಮಾಡಿ ಆರೋಪ ಮಾಡಲಾಗಿದೆ. ಸಂತ್ರಸ್ತ ಮಹಿಳೆಯ ಸಾಮಾನ್ಯ ಜೀವನಕ್ಕೆ ಯಾವುದೇ ತೊಂದರೆ ಆಗಿಲ್ಲ. ಪರ್ಯಾಯ ಶಿಸ್ತಿನ ಭಾಗವಾಗಿ ಕನಿಷ್ಠ ಶಿಕ್ಷೆ ವಿಧಿಸುವಂತೆ ವಿನಂತಿಸಿಕೊಳ್ಳುತ್ತೇವೆ ಎಂದು ವಾದವನ್ನು ಮುಕ್ತಾಯಗೊಳಿಸಿದರು.