Asianet Suvarna News Asianet Suvarna News

RIP Umesh Katti ಉಮೇಶ್ ಕತ್ತಿ ನಿಧನದಿಂದ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು, ಅಸ್ವಸ್ಥಗೊಂಡ ತಮ್ಮನಿಗೆ ಚಿಕಿತ್ಸೆ!

ಉಮೇಶ್ ಕತ್ತಿ ಅಕಾಲಿಕ ನಿಧನ ಹಿನ್ನೆಲೆ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ರಮೇಶ್ ಕತ್ತಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.

Former MP and younger brother Ramesh katti Health fluctuates due to demise of Umesh katti Doctor rush to spot belagavi Karnataka ckm
Author
First Published Sep 7, 2022, 7:43 PM IST

ಬೆಳಗಾವಿ(ಸೆ.07) ಸಚಿವ ಉಮೇಶ್ ಅಕಾಲಿಕ ನಿಧನದಿಂದ ಇಡೀ ರಾಜ್ಯದಲ್ಲಿ ದುಃಖ ಆವರಿಸಿದೆ. ಕತ್ತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದರ ನಡುವೆ ಕತ್ತಿ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕತ್ತಿ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ರಮೇಶ್ ಕತ್ತಿಗೆ ಕೊಠಡಿಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡ ಆಗಮಿಸಿದ್ದು, ಈಸಿಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಿದ್ದಾರೆ. ಅಣ್ಣ ಉಮೇಶ್ ಕತ್ತಿ ಅಗಲಿಕೆ ನೋವಿನಿಂದ ಬಳಲಿರುವ ರಮೇಶ್ ಕತ್ತಿಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇತ್ತ ನಿನ್ನೆ ರಾತ್ರಿಯಿಂದ ಆಹಾರ, ನೀರು ಸೇವಿಸದೆ ಅಣ್ಣ ಮೃತದೇಹದ ಜೊತೆಗಿರುವ ರಮೇಶ್ ಕತ್ತಿ ಆರೋಗ್ಯ ಹದಗೆಟ್ಟಿದೆ. ಕತ್ತಿ ಮನೆಯ ಹೊರಗಡೆ ಉಮೇಶ್ ಕತ್ತಿ ಅಂತಿಮ ದರ್ಶನ ನಡೆಯುತ್ತಿದ್ದದರೆ, ಮನೆಯ ಒಳಗಡೆಯ ಕೊಠಡಿಯಲ್ಲಿ ರಮೇಶ್ ಕತ್ತಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. 

ನಿನ್ನೆ ರಾತ್ರಿ ಉಮೇಶ್ ಕತ್ತಿ(Umesh Katti Death) ಹೃದಯಾಘಾತ(Heart Attack) ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿಯಿಂದ ಬೆಂಗಳೂರಿಗೆ(Bengaluru) ಹೊರಟ ರಮೇಶ್ ಕತ್ತಿ, ಆಸ್ಪತ್ರೆ ತಲುವುದರೊಳಗೆ ಉಮೇಶ್ ಕತ್ತಿ ನಿಧನರಾಗಿದ್ದರು. ಈ ಆಘಾತ ಸುದ್ದಿ ಕೇಳಿದ ಬೆನ್ನಲ್ಲೇ ರಮೇಶ್ ಕತ್ತಿ(Ramesh Katti) ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆತಂಕದಲ್ಲೇ ಬೆಂಗಳೂರಿಗೆ ಆಗಮಿಸಿದ ರಮೇಶ್ ಕತ್ತಿಗೆ ಮತ್ತಷ್ಟು ಆಘಾತವಾಗಿದೆ. ನಿನ್ನೆ ರಾತ್ರಿಂದಲೇ ಮಾನಸಿಕವಾಗಿ, ದೈಹಿಕವಾಗಿ ಬಳಲಿದ್ದಾರೆ. ಇದರ ಜೊತೆಗೆ ಇಡೀ ದಿನ ದುಃಖ ತಡೆದುಕೊಳ್ಳಲು ಸಾಧ್ಯವಾಗದೆ ಅಳುತ್ತಲೇ ಉಮೇಶ್ ಕತ್ತಿ ಪಾರ್ಥಿವ ಶರೀರದ ಜೊತೆ ಪ್ರಯಾಣ ಮಾಡಿದ್ದಾರೆ.

Umesh Katti Death; 3 ದಿನ ಶೋಕಾಚರಣೆಗೆ ಸಿಎಂ ಆದೇಶ, ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಳಗಾವಿ(Belagavi) ಜಿಲ್ಲೆಯ ‌ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್‌ನಲ್ಲಿ ಉಮೇಶ್ ಕತ್ತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ರಮೇಶ್ ಕತ್ತಿ ಕೂಡ ಅಂತಿಮ ದರ್ಶನ ಪಡೆಯುತ್ತಿದ್ದಂತೆ ಕುಸಿದಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ತಕ್ಷಣವೇ ರಮೇಶ್ ಕತ್ತಿಯನ್ನು ಮನೆಯ ಕೊಠಡಿಗೆ ಕರೆತಂದು ವೈದ್ಯರು ತಪಾಸಣೆ ನಡೆಸಿದ್ದಾರೆ.  ಉಮೇಶ್ ಕತ್ತಿ ತಮ್ಮ ರಮೇಶ್ ಕತ್ತಿ ಮಾಜಿ ಸಂಸದ ಹಾಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. 

ಉಮೇಶ್ ಕತ್ತಿ ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಾದ ಬೆಲ್ಲದ ಬಾಗೇವಾಡಿಯಲ್ಲಿ ಬುಧವಾರ ನೆರವೇರಿಸಲಾಗುವುದು. ಅದಕ್ಕೂ ಮೊದಲು ಬೆಳಗ್ಗೆ ಅವರ ಬೆಂಗಳೂರು ನಿವಾಸದ ಬಳಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ವಿಶೇಷ ವಿಮಾನದಲ್ಲಿ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

RIP Umesh Katti ಉಮೇಶ್ ಕತ್ತಿ ನಿಧನದಿಂದ ಬಿಜೆಪಿ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ!

ಕತ್ತಿ ಅವರನ್ನು ಆಸ್ಪತ್ರೆಗೆ ಕರೆತಂದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಆಪ್ತರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಆಸ್ಪತ್ರೆಗೆ ಧಾವಿಸಿ ಬಂದರು. ಕೆಲಹೊತ್ತಿನ ಬಳಿಕ ಮಳೆ ಹಾನಿ ಸಂಬಂಧ ರಾತ್ರಿ ಹೊತ್ತಿನಲ್ಲಿ ಮಹದೇವಪುರ ವಲಯದಲ್ಲಿ ಪರಿಶೀಲನೆ ನಡೆಸಲು ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಆಗಮಿಸಿದರು. ಬೊಮ್ಮಾಯಿ ಹಾಗೂ ಸಚಿವರು, ಶಾಸಕರು ಕತ್ತಿ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios