Asianet Suvarna News Asianet Suvarna News

ವಿಧಾನಸಭಾ ಚುನಾವಣೇಲಿ ಕುಕ್ಕರ್‌, ಇಸ್ತ್ರಿ ಪೆಟ್ಟಿಗೆ ಕೊಟ್ಟು ಸಿದ್ದರಾಮಯ್ಯ ಗೆದ್ದಿದ್ದಾರೆ; ಕೆಎಸ್ ಈಶ್ವರಪ್ಪ ಆರೋಪ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಕ್ಕರ್‌, ಇಸ್ತ್ರಿ ಪೆಟ್ಟಿಗೆ ವಿತರಿಸಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಅವರೇ ಹೇಳಿದ್ದಾರೆ. ಇದನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆಯಲ್ಲಿ ಜನರಿಗೆ ಆಮಿಷವೊಡ್ಡಿ ಗೆದ್ದಿರುವ ಸಿದ್ದರಾಮಯ್ಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

former minister ks eshwarappa outraged agains cm siddaramaiah at shivamogga rav
Author
First Published Sep 21, 2023, 1:23 PM IST

ಶಿವಮೊಗ್ಗ (ಸೆ.21) : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಕ್ಕರ್‌, ಇಸ್ತ್ರಿ ಪೆಟ್ಟಿಗೆ ವಿತರಿಸಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಅವರೇ ಹೇಳಿದ್ದಾರೆ. ಇದನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆಯಲ್ಲಿ ಜನರಿಗೆ ಆಮಿಷವೊಡ್ಡಿ ಗೆದ್ದಿರುವ ಸಿದ್ದರಾಮಯ್ಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋ಼ಷ್ಠಿಯಲ್ಲಿ ಅವರು ಮಾತನಾಡಿ, ನಂಜನಗೂಡಿನಲ್ಲಿ ನಡೆದ ತಾಲೂಕು ಮಡಿವಾಳದ ಸಮುದಾಯ ಭವನದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಯತೀಂದ್ರ ಅವರು, ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರನ್ನು ಸಂಘಟನೆ ಮಾಡಬೇಕೆಂದು ಸಾವಿರಾರು ಜನರನ್ನು ಸೇರಿಸಿ ಅವರೆಲ್ಲರಿಗೂ ಕುಕ್ಕರ್‌ ಮತ್ತು ಇಸ್ತಿಪೆಟ್ಟಿಗೆಗಳನ್ನು ನೀಡಲಾಗಿತ್ತು. ಅದನ್ನು ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಕೊಡಲಾಗಿತ್ತು ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಮಾಧ್ಯಮಗಳಲ್ಲಿ ವರದಿಯೂ ಆಗಿದೆ. ಇದರ ಬಗ್ಗೆ ಚುನಾವಣೆ ಆಯೋಗ ತನಿಖೆಗೆ ಮುಂದಾಗಬೇಕು. ಸಾಕ್ಷಾಧಾರವಿದ್ದರೆ ಆಯೋಗ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಪ್ಪ-ಮಗನ ವರ್ಗಾವಣೆ ದಂಧೆ ಸುಳ್ಳಾದರೆ ಕುರುಡುಮಲೆ ಗಣೇಶನ ಮುಂದೆ ಬಂದು ಪ್ರಮಾಣ ಮಾಡಲಿ; ಸಿಎಂಗೆ ಈಶ್ವರಪ್ಪ ಸವಾಲು!

ಗುಂಪುಗಾರಿಕೆಯೇ ಸರ್ಕಾರ 100 ದಿನದ ಸಾಧನೆ: 

ಕಾಂಗ್ರೆಸ್‌ ಸರ್ಕಾರದ ಮಂತ್ರಿಗಳಲ್ಲೆ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ ಚೇಲಾಗಳು ಮೂರು ಡಿಸಿಎಂ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಗುಂಪುಗಾರಿಕೆಯೇ ಕಾಂಗ್ರೆಸ್‌ನ ನೂರು ದಿನದ ಸಾಧನೆ. ಲೋಕಸಭೆ ಚುನಾವಣೆ ನಂತರ, ಇಲ್ಲ ಅದಕ್ಕೂ‌ ಮುನ್ನಾವೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದರು.

ಸಿಎಂ ಹಾಗೂ ಅವರ ಪುತ್ರನಿಂದ ಕಮಿಷನ್‌ ದಂದೆ:

ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್‌ನವರು 40 ಪರ್ಸೆಂಟೇಜ್‌ ಸರ್ಕಾರ ಎಂದು ದೊಡ್ಡ ಆರೋಪವೇ ಮಾಡಿದರೂ. ಕೊನೆಗೆ ಒಂದೇ ಒಂದು ದಾಖಲೆಯನ್ನೂ ಕೊಡಲಿಲ್ಲ. ನನ್ನಮೇಲೂ ಆರೋಪ ಮಾಡಿದರು. ಕೊನೆಗೆ ಅರೋಪದಲ್ಲಿ ನನ್ನ ಪಾತ್ರವಿಲ್ಲ ಎಂದು ನ್ಯಾಯಾಲಯವೇ ಹೇಳಿತು. ಈಗ ಕಾಂಗ್ರೆಸ್‌ ಸರ್ಕಾರದಲ್ಲಿ 40 ಪರ್ಸೆಂಟೇಜ್‌ಗಿಂತ ಜಾಸ್ತಿ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಅವರ ಪುತ್ರನೇ ಕಮಿಷನ್ ದಂದೆ ನಡೆಸುತ್ತಿದ್ದಾರೆ. ವರ್ಗಾವಣೆ ದಂದೆ ನಡೆಯುತ್ತಿದೆ ಎಂಬುದಲ್ಲಿ ಯಾವ ಅನುಮಾನವೂ ಇಲ್ಲ. ಈ ಬಗ್ಗೆ ನನಗೆ ಸಾಕಷ್ಟು ಫೋನ್ ಬರುತ್ತಿವೆ. ಭ್ರಷ್ಟಾಚಾರದ ವಿರುದ್ಧ ಸರ್ಕಾರ ನಿವೃತ್ತ ನ್ಯಾಯಧೀಶರನ್ನು ನೇಮಕ ಮಾಡಲಿ. ಆಗ ಎಷ್ಟು ಜನ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನಾನೇ ಕರೆದುಕೊಂಡು ಹೋಗಿ ಅವರ ಎದುರು ನಿಲ್ಲಿಸುತ್ತೇನೆ ಎಂದು ಸವಾಲು ಎಸೆದರು.

ಬರಿ ಬಾಯಲ್ಲಿ ಹೇಳಬೇಡಿ, ತನಿಖೆ ಮಾಡಿ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ ಬಿಟ್ಟರೆ ಈವರೆಗೆ ಒಂದೇ ಒಂದು ಪ್ರಕರಣ ಬಗ್ಗೆ ತನಿಖೆ ಮಾಡಿಲ್ಲ. ಬಾಯಲ್ಲಿ ಹೇಳುವುದನ್ನು ಬಿಟ್ಟು ನೀವು ಬಂದಾಗಿನಿಂದ ಯಾವ ವಿಚಾರವನ್ನು ತನಿಖೆಗೆ ಒಪ್ಪಿಸಿದ್ದೀರಿ, ಎಷ್ಟು ಪ್ರಕರಣಗಳು ತನಿಖೆಯ ಹಂತದಲ್ಲಿವೆ ಎಂದು ಬಹಿರಂಗಪಡಿಸಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸರ್ಕಾರ ವಿರುದ್ಧ ಹರಿಹಾಯ್ದರು.

ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವ್ಯವಹಾರ ಬಗ್ಗೆ ಬರೀ ಬಾಯಲ್ಲಿ ಹೇಳಬೇಡಿ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಿ. ವಿಮಾನ ನಿಲ್ದಾಣ ವಿಚಾರದಲ್ಲೂ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಲೂಟಿಯಾಗಿದೆ ಎಂದು ಅನಿಸಿದರೆ ತನಿಖೆ ಮಾಡಿ ಎಂದು ಕುಟುಕಿದರು.

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾರಪುರ ವಂಚನೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಹಿಂದು ಸಂಘಟನೆ ಹೆಸರನ್ನು ದುರಪಯೋಗ ಮಾಡಿಕೊಳ್ಳುವವರ ಬಗ್ಗೆ ತನಿಖೆಯಾಗಲಿ, ತಪ್ಪು ಮಾಡಿದ್ದರೆ ಶಿಕ್ಷೆಯೂ ಆಗಲಿ, ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದರು.

ಗ್ಯಾರಂಟಿ ದುಡ್ಡು ಹೊಡೆಯೋದೇ ಕಾಂಗ್ರೆಸ್‌ ಯೋಚನೆ: ಈಶ್ವರಪ್ಪ ವಾಗ್ದಾಳಿ

ಮಹಿಳಾ ಮೀಸಲಾತಿ ಜಾರಿಗೆ ಅಟಲ್‌, ದೇವೇಗೌಡರಿಂದಲೂ ಯತ್ನ

ನರೇಂದ್ರ ಮೋದಿ(Narendra Modi) ಅವರು ಮೊದಲ ಪ್ರಯತ್ನದಲ್ಲೇ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದ ನಂತರ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಸದಸ್ಯ ಸಂಖ್ಯೆ 78ರಿಂದ 181ಕ್ಕೆ ಏರಲಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಚ್‌.ಡಿ.ದೇವೆಗೌಡ ಅವರ ಕಾಲದಲ್ಲೂ ಹಲವು ಪ್ರಯತ್ನಗಳು ನಡೆದಿದೆ. ಆದರೆ, ಸಂಖ್ಯಾಬಲದ ಕೊರತೆಯಿಂದ ಮಹಿಳಾ ಮೀಸಲಾತಿಯ ಕನಸು ಈಡೇರಲಿಲ್ಲ. ಈಗ ಪ್ರಧಾನಿಯವರ ಮೊದಲ ಪ್ರಯತ್ನದಲ್ಲೆ ಈ ಕನಸು ಈಡೇರಿದೆ. ಇದನ್ನು ಸದನಗಳಲ್ಲಿ ಎಲ್ಲ ಪಕ್ಷದವರು ಒಪ್ಪಿ ಮಸೂದೆಯನ್ನು ಅಂಗೀಕರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

Follow Us:
Download App:
  • android
  • ios