ಅಪ್ಪ-ಮಗನ ವರ್ಗಾವಣೆ ದಂಧೆ ಸುಳ್ಳಾದರೆ ಕುರುಡುಮಲೆ ಗಣೇಶನ ಮುಂದೆ ಬಂದು ಪ್ರಮಾಣ ಮಾಡಲಿ; ಸಿಎಂಗೆ ಈಶ್ವರಪ್ಪ ಸವಾಲು!
ರಾಜ್ಯದ ಅಭಿವೃದ್ಧಿಗೆ ಗಮನ ಕೊಡದೇ ಅಧಿಕಾರ ಬಂದಾಗಿನಿಂದ ಅಪ್ಪ-ಮಗ ವರ್ಗಾವಣೆಎ ದಂಧೆಯಲ್ಲಿ ತೊಡಗಿದ್ದಾರೆಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಿಎಂ ಸಿದ್ದರಾಮಯ್ಯರ ಮೇಲೆ ಗಂಭಿರ ಅರೋಪ ಮಾಡಿದರು.
ಮುಳುಬಾಗಿಲು: ರಾಜ್ಯದ ಅಭಿವೃದ್ಧಿಗೆ ಗಮನ ಕೊಡದೇ ಅಧಿಕಾರ ಬಂದಾಗಿನಿಂದ ಅಪ್ಪ-ಮಗ ವರ್ಗಾವಣೆಎ ದಂಧೆಯಲ್ಲಿ ತೊಡಗಿದ್ದಾರೆಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಿಎಂ ಸಿದ್ದರಾಮಯ್ಯರ ಮೇಲೆ ಗಂಭಿರ ಅರೋಪ ಮಾಡಿದರು.
ಕುರುಡುಮಲೆ ಗಣೇಶನಿಗೆ ಭಾನುವಾರ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಪುತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ನಾನು ಹೇಳುವುದು ಸುಳ್ಳಾದರೆ ಇದೇ ಕುರುಡುಮಲೆ ಗಣೇಶನ ಮುಂದೆ ಬಂದು ಅಪ್ಪ-ಮಗ ಪ್ರಮಾಣ ಮಾಡಲಿ, ಒಂದು ವೇಳೆ ದಂಧೆಯಲ್ಲಿ ತೊಡಗಿಲ್ಲದಿದ್ರೆ ನನಗೆ ಏನು ಬೇಕಾದರೂ ಶಾಪ ಕೊಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರ, ವರ್ಗಾವಣೆ ದಂಧೆ: ಪ್ರಲ್ಹಾದ್ ಜೋಶಿ
ಇವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಅಧಿಕಾರಕ್ಕೆ ಬಂದಾಗಿಂದ ಸಚಿವರಾದಿಯಾಗಿ ಎಲ್ಲರೂ ವರ್ಗಾವಣೆ ದಂಧೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು ಮುಂದುವರಿದು, ತನಿಖೆ ನಡೆಸಿದರೆ ಯಾರಾರು ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂದು ಹೇಳಲು ೨೦ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ತನಿಖಾ ತಂಡದ ಮುಂದೆ ನಿಲ್ಲಿಸುತ್ತೇನೆ ಎಂದು ಸವಾಲು ಹಾಕಿದರು. ಬಡವರ ಪರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಮಾಡುತ್ತಿರುವುದು ವರ್ಗಾವಣೆ ದಂಧೆ. ಇನ್ನುಮುಂದೆಯಾದರೂ ಸಿದ್ದರಾಮಯ್ಯ ಲಂಚ ಪಡೆಯುವುದಿಲ್ಲ ಎಂದು ಪ್ರಮಾಣವಚನ ಮಾಡಲಿ ಎಂದರು.
ವರ್ಗಾವಣೆ ದಂಧೆ ಆರೋಪಕ್ಕೆ ಸಿಎಂ ಬ್ರೇಕ್: ಇನ್ನು ಸಿಎಂ ಅನುಮತಿ ಇಲ್ಲದೆ ಟ್ರಾನ್ಸ್ಫರ್ ಮಾಡುವಂತಿಲ್ಲ