Asianet Suvarna News Asianet Suvarna News

ಮುಡಾ ಹಗರಣ: ಸಿಎಂ ರಾಜೀನಾಮೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ, ಅಶ್ವತ್ಥ್‌ ನಾರಾಯಣ್

ಕೆಂಪಣ್ಣ ಆಯೋಗ ಮಾದರಿಯಲ್ಲಿ ದೇಸಾಯಿ ಆಯೋಗ ಮಾಡಿದ್ದಾರೆ. ಚರ್ಚೆಗೆ ಅವಕಾಶ ನೀಡದೇ ತಡೆ ಹಿಡಿದಿದ್ದು ಮುಖ್ಯಮಂತ್ರಿಗಳ ಭಂಡತನವಾಗಿದೆ. ನೈತಿಕತೆ ಇಲ್ಲದೇ ಸರ್ಕಾರ ಮುಖ್ಯಮಂತ್ರಿಗಳು ರಾಜೀನಾಮೆ ನೀಡದೇ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಅಶ್ವತ್ಥ್‌ ನಾರಾಯಣ್
 

former minister cn Ashwath Narayan demand for cm Siddaramaiah resigns on muda scam grg
Author
First Published Jul 24, 2024, 9:50 PM IST | Last Updated Jul 25, 2024, 9:25 AM IST

ಬೆಂಗಳೂರು(ಜು.24):  ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿರೋದು ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವೇ ನಂಬರ್ 364 ರಲ್ಲಿ ಜಮೀನು ಪಡೆದುಕೊಳ್ಳಲು ವ್ಯವಸ್ಥಿತ ಪ್ರಯತ್ನ ಮಾಡಿದ್ದಾರೆ. ಸಿಎಂ ಅವರ ಕುಟುಂಬಕ್ಕೆ ಅನುಕೂಲವಾಗುವಂತೆ ಹಗರಣವಾಗಿದೆ. ಸದನದಲ್ಲಿ ಚರ್ಚೆ ಮಾಡಲು ಸರ್ಕಾರ ತಯಾರಿಲ್ಲ. ಸದನದಲ್ಲಿ‌ ಚರ್ಚೆ ಜೊತೆಗೆ ಮುಖ್ಯಮಂತ್ರಿಗಳ ರಾಜೀನಾಮೆ ಒತ್ತಾಯಿಸಿ ಅಹೋರಾತ್ರಿ ಧರಣಿ ಮಾಡ್ತಾ ಇದ್ದೇವೆ ಎಂದು  ಮಾಜಿ ಸಚಿವ ಅಶ್ವತ್ಥ್‌ ನಾರಾಯಣ್ ತಿಳಿಸಿದ್ದಾರೆ. 

ಕೆಂಪಣ್ಣ ಆಯೋಗ ಮಾದರಿಯಲ್ಲಿ ದೇಸಾಯಿ ಆಯೋಗ ಮಾಡಿದ್ದಾರೆ. ಚರ್ಚೆಗೆ ಅವಕಾಶ ನೀಡದೇ ತಡೆ ಹಿಡಿದಿದ್ದು ಮುಖ್ಯಮಂತ್ರಿಗಳ ಭಂಡತನವಾಗಿದೆ. ನೈತಿಕತೆ ಇಲ್ಲದೇ ಸರ್ಕಾರ ಮುಖ್ಯಮಂತ್ರಿಗಳು ರಾಜೀನಾಮೆ ನೀಡದೇ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ರಾಮನಗರ ಅಭಿವೃದ್ಧಿ ಮಾಡಿದ್ದು ನನ್ನ ಗಂಡ ಎಂದ ಅನಿತಾ ಕುಮಾರಸ್ವಾಮಿ!

ನಿಷ್ಟಾವಂತ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡಿದ್ದಾರೆ. ಸದನದಲ್ಲಿ‌ ಚರ್ಚೆ ಜೊತೆಗೆ ಮುಖ್ಯಮಂತ್ರಿಗಳ ರಾಜೀನಾಮೆ ಒತ್ತಾಯಿಸಿ ಅಹೋರಾತ್ರಿ ಧರಣಿಯನ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios