Asianet Suvarna News Asianet Suvarna News

ಯಾದಗಿರಿ: ಜೆಡಿಎಸ್ ಮಾಜಿ ಶಾಸಕ ನಾಗನಗೌಡ ಕಂದಕೂರ್ ಹೃದಯಾಘಾತದಿಂದ ವಿಧಿವಶ!

ಜೆಡಿಎಸ್‌ನ ಮಾಜಿ ಶಾಸಕ ನಾಗನಗೌಡ ಕಂದಕೂರು(79) ತೀವ್ರ ಹೃದಯಾಘಾತದಿಂದ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಸ್ಥಳೀಯ ಯಾದಗಿರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

Former JDS MLA Naganagowda Kandakur dies of heart attack at yadgir rav
Author
First Published Jan 28, 2024, 12:26 PM IST

ಯಾದಗಿರಿ (ಜ.28): ಜೆಡಿಎಸ್‌ನ ಮಾಜಿ ಶಾಸಕ ನಾಗನಗೌಡ ಕಂದಕೂರು(79) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಎದೆನೋವು ಕಾಣಿಸಿಕೊಂಡಿತ್ತು. ಕುಸಿದಿದ್ದ ನಾಗನಗೌಡರನ್ನು ಕಂಡು ಕುಟುಂಬಸ್ಥರು ಕೂಡಲೇ  ಯಾದಗಿರಿ ನಗರದ ಶರಣಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಗುರುಮಠಕಲ್‌ ನ ಜೆಡಿಎಸ್ ಹಾಲಿ ಶಾಸಕ ಶರಣಗೌಡ ಕಂದಕೂರ್ ಅವರ ತಂದೆಯಾಗಿರುವ ನಾಗನಗೌಡ. 2018 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಗುರುಮಠಕಲ್ ನಿಂದ ಸ್ಪರ್ಧಿಸಿ ಗೆದ್ದು ಮೊದಲ ಬಾರಿ ಶಾಸಕರಾಗಿದ್ದರು. ಒಳ್ಳೆಯ ವ್ಯಕ್ತಿತ್ವ, ಪ್ರಾಮಾಣಿಕತೆಗೆ ಹೆಸರಾಗಿದ್ದರು. 

ಮಾಜಿ ಶಾಸಕ ನಾಗನಗೌಡ ಕಂದಕೂರು ವಿಧಿವಶರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಚೆನ್ನಾರೆಡ್ಡಿ ತುನ್ನೂರು ಆಸ್ಪತ್ರೆಗೆ ಧಾವಿಸಿದರು. ಆಸ್ಪತ್ರೆ ಬಳಿ ಜಮಾಯಿಸಿರುವ ಕಂದಕೂರು ಸಂಬಂಧಿಕರು ಹಾಗೂ ಜೆಡಿಎಸ್ ಕಾರ್ಯಕರ್ತರು. 

ಸುಂದರ ನಟ ಸುನಿಲ್ ದುರ್ಮರಣ; ಅಪಘಾತಕ್ಕೆ ಯಾರು ಕಾರಣ, ಕಾಣದ ಕೈ ಕೆಲಸ ಮಾಡಿದ್ಯಾ?

Follow Us:
Download App:
  • android
  • ios