Asianet Suvarna News Asianet Suvarna News

ಸುಂದರ ನಟ ಸುನಿಲ್ ದುರ್ಮರಣ; ಅಪಘಾತಕ್ಕೆ ಯಾರು ಕಾರಣ, ಕಾಣದ ಕೈ ಕೆಲಸ ಮಾಡಿದ್ಯಾ?

ಹ್ಯಾಂಡ್‌ಸಮ್ ಹುಡುಗ, ನಟ ಸುನಿಲ್ 24 ಜೂನ್ 1994ರಂದು ಕಾರು ಅಪಘಾತದಲ್ಲಿ ನಿಧನರಾದರು. ಜತೆಯಲ್ಲಿ ನಟಿ ಮಾಲಾಶ್ರೀ ಕೂಡ ಇದ್ದರು. ಡ್ರೈವರ್ ಸೇರಿದಂತೆ ನಾಲ್ಕು ಜನರಿದ್ದ ಆ ಕಾರಿನಲ್ಲಿ ನಟ ಸುನಿಲ್, ನಟಿ ಮಾಲಾಶ್ರೀ ಜತೆ ಸುನಿಲ್ ಚಿಕ್ಕಮ್ಮನ ಮಗ ಸಚಿನ್ ಕೂಡ ಇದ್ದರು. 

Belli Kalungura movie fame actor sandalwood actor sunil death controversy srb
Author
First Published Jan 24, 2024, 8:31 PM IST

ಕನ್ನಡ ಚಿತ್ರರಂಗದ ಅತ್ಯಂತ ಸ್ಪುರದ್ರೂಪಿ ನಟ ಎಂದೇ ಖ್ಯಾತಿ ಪಡೆದಿದ್ದರು ನಟ ಸುನೀಲ್. ಶ್ರುತಿ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ ಸುನಿಲ್ ಬಳಿಕ ಹೆಚ್ಚಾಗಿ ಅಂದಿನ ಕಾಲದ ಮಹಾನ್ ನಾಯಕಿ ನಟಿ ಮಾಲಾಶ್ರೀ ಜತೆಗೇ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಸುನಿಲ್-ಮಾಲಾಶ್ರೀ ಜೋಡಿಯ 'ಬೆಳ್ಳಿ ಕಾಲುಂಗುರ' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಸಿಂಧೂರ ತಿಲಕ, ಹಳ್ಳಿ ರಂಭೆ ಬೆಳ್ಳಿ ಬೊಂಬೆ, ಮಾಲಾಶ್ರೀ ಮಾಮಾಶ್ರೀ ಹಾಗೂ ಮರಣ ಮೃದಂಗ ಚಿತ್ರಗಳಲ್ಲಿ ಕೂಡ ಮಾಲಾಶ್ರೀ-ಸುನಿಲ್ ಜತೆಯಾಗಿ ನಟಿಸಿದ್ದರು.  ​ 

ಸ್ಯಾಂಡಲ್‌ವುಡ್‌ನಲ್ಲಿ 5 ವರ್ಷಗಳಲ್ಲಿ 20 ಚಿತ್ರಗಳಲ್ಲಿ ನಟಿಸಿದ್ದ ಸುನಿಲ್(Sunil), ಯಾವುದೇ ಕಾಂಟ್ರೋವರ್ಸಿಗೆ ಒಳಗಾಗಿರಲಿಲ್ಲ ಎಂಬುದು ವಿಶೇ‍ಷ. ಮಾಲಾಶ್ರೀ-ಸುನಿಲ್ ಲವ್ ಮಾಡುತ್ತಿದ್ದರು ಎಂಬ ಸುದ್ದಿಯಿತ್ತಾದರೂ ಅದೇನೂ ಅನೈತಿಕ ಆಗಿರಲಿಲ್ಲ. ಏಕೆಂದರೆ, ಅಂದು ಮಾಲಾಶ್ರೀ (Malashri) ಹಾಗೂ ಸುನಿಲ್ ಇಬ್ಬರಿಗೂ ಮದುವೆ ಆಗಿರಲಿಲ್ಲ. ಬಹಳಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿರುವ ಅವರಿಬ್ಬರೂ ಲವ್ ಮಾಡುತ್ತಾರೆ, ಮದುವೆಯಾಗುತ್ತಾರೆ ಎಂದರೆ ಅದರಲ್ಲಿ ಯಾರೂ ತಪ್ಪು ಹುಡುಕಲು ಸಾಧ್ಯವೂ ಇರಲಿಲ್ಲ. 

ಆದರೆ ಹ್ಯಾಂಡ್‌ಸಮ್ ಹುಡುಗ, ನಟ ಸುನಿಲ್ 24 ಜೂನ್ 1994ರಂದು ಕಾರು ಅಪಘಾತದಲ್ಲಿ ನಿಧನರಾದರು. ಜತೆಯಲ್ಲಿ ನಟಿ ಮಾಲಾಶ್ರೀ ಕೂಡ ಇದ್ದರು. ಡ್ರೈವರ್ ಸೇರಿದಂತೆ ನಾಲ್ಕು ಜನರಿದ್ದ ಆ ಕಾರಿನಲ್ಲಿ ನಟ ಸುನಿಲ್, ನಟಿ ಮಾಲಾಶ್ರೀ ಜತೆ ಸುನಿಲ್ ಚಿಕ್ಕಮ್ಮನ ಮಗ ಸಚಿನ್ ಕೂಡ ಇದ್ದರು. ಅಂದು ಏನಾಯಿತು ಎಂದು ಹೇಳಿದ್ದು ಇದೇ ಸಚಿನ್, ಆದರೆ, ಅವರು ಹೇಳಿದ್ದು ಅಪಘಾತಕ್ಕೆ ಮೊದಲು ಮತ್ತು ಬಳಿಕ ಏನಾಯಿತು ಎಂಬುದನ್ನು ಮಾತ್ರ. ಏಕೆಂದರೆ, ಆಕ್ಸಿಡೆಂಟ್ ಆದಾಗ ಅವರು ನಿದ್ದೆ ಮಾಡುತ್ತಿದ್ದರಂತೆ, ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದರಂತೆ. 

ಸಚಿನ್ ಹೇಳಿರುವಂತೆ 'ಒಂದು ಕಾರ್ಯಕ್ರಮವನ್ನು ಹೈದಾರಾಬಾದ್‌ನಲ್ಲಿ ಮುಗಿಸಿ ರಾತ್ರಿ 11.30ರ ಬಳಿಕ ಇನ್ನೊಂದು ಕಾರ್ಯಕ್ರಮದ ಸಲುವಾಗಿ ಹೈದರಾಬಾದ್​ನಿಂದ ಕರ್ನಾಟಕಕ್ಕೆ ಬರುತ್ತಿದ್ದೆವು. ನಮ್ಮ ಡ್ರೈವರ್​ ಬೆಂಗಳೂರಿನಿಂದ ಹೈದರಾಬಾದ್​ಗೆ ಬಂದು ಅಲ್ಲಿಂದ ಸುನೀಲ್ ಹಾಗು ನಮ್ಮನ್ನೆಲ್ಲ ಕರೆದುಕೊಂಡು ಹೊರಟಿದ್ದರು. ಒಂದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿಯೇ ಇನ್ನೊಂದು ಜಾಗಕ್ಕೆ ಹೊರಟೆವು. ಡ್ರೈವರ್​ಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ ಎನಿಸುತ್ತದೆ. ಅದೇ ಸಮಸ್ಯೆ ಆಯ್ತು ಎಂದುಕೊಳ್ಳಬೇಕು. 

ನಾವೆಲ್ಲ ಕಾಂಟೆಸಾ ಕಾರಿನಲ್ಲಿ ಚಲಿಸುತ್ತಿದ್ದಾಗ ಸುನಲ್ ಡ್ರೈವರ್‌ಗೆ 'ನಿನಗೆ ಏನಾದರೂ ನಿದ್ರೆ ಬಂದರೆ ಹೇಳು, ನಾವ್ಯಾರಾದರೂ ಆ ಸಿಟಿಗೆ ಬರುತ್ತೇವೆ' ಎಂದು ಹೇಳಿದ್ದರು. ಅಷ್ಟೇ ನನಗೆ ನೆನಪಿರುವುದು. ಎಕೆಂದರೆ ಬಳಿಕ ನಾನು ನಿದ್ದೆಗೆ ಜಾರಿದ್ದೆ. ಅಪಘಾತವಾಗಿದ್ದು ನನಗೆ ಗೊತ್ತೇ ಆಗಲಿಲ್ಲ. ಆಮೇಲೆ ಎಚ್ಚರ ಆದಾಗ ಆಸ್ಪತ್ರೆಯಲ್ಲಿ ಇದ್ದೆ' ಎಂದು ಅಂದಿನ ಅಪಘಾತದ ಬಗ್ಗೆ ಹೇಳಿದರು. 

ದೇವತೆಯಂಥ ನಟಿ ಸುಧಾರಾಣಿ ಬಾಳಲ್ಲಿ ಯಾಕೆ ಬರಬೇಕಿತ್ತು ಅಂಥ ಭಯಾನಕ ಬಿರುಗಾಳಿ!

'ಆವತ್ತು ನಾವು ಹೊರಡಬೇಕು ಎಂದುಕೊಂಡಿರಲಿಲ್ಲ. ಒಂದು ದಿನ ಉಳಿದುಕೊಳ್ಳೋಣ ಎನಿಸುತ್ತಿತ್ತು. ಸುನಿಲ್ ಡ್ರೈವರ್‌ಗೆ ಹಾಗೇ ಹೇಲಿದರೂ ಕೂಡ. ಆದರೆ ಡ್ರೈವರ್ 'ನಾಳೆ ನನ್ನ ಮಗಳ ಬರ್ತ್‌ಡೇ ಇದೆ, ಹೋಗಬೇಕು' ಎಂದರು. ಮರುದಿನ ಡ್ರೈವರ್​ ಮಗಳ ಬರ್ತ್​ಡೇ ಇದೆ ಎಂಬ ಕಾರಣಕ್ಕೆ ನಾವು ಅದೇ ದಿನ ರಾತ್ರಿ ಹೊರಡುವಂತಾಯ್ತು. ಅಪಘಾತ ಆದ ಬಳಿಕ ನಮ್ಮನ್ನು ಬೆಂಗಳೂರಿಗೆ ಶಿಫ್ಟ್​ ಮಾಡುವಾಗ ಸುನೀಲ್​ ನಿಧನರಾದರಂತೆ. ನನಗೆ ಎಷ್ಟೋ ದಿನಗಳ ಬಳಿಕ ಪ್ರಜ್ಞೆ ಬಂತು' ಎಂದಿದ್ದಾರೆ ಸಚಿನ್​.

ಮಾಜಿ ಭುವನ ಸುಂದರಿಗೆ ಮ್ಯಾಸಿವ್ ಹಾರ್ಟ್ ಅಟ್ಯಾಕ್; ಹೃದಯದಿಂದ ಬಂದವು ಗೋಲ್ಡನ್ ಟಿಪ್ಸ್!

ನಟ ಸುನೀಲ್​ ಅವರ ಬಾಲ್ಯದ ಕೆಲವು ವಿವರಗಳನ್ನೂ ಸಚಿನ್​ (Sachin) ಹಂಚಿಕೊಂಡಿದ್ದಾರೆ. 'ಹುಟ್ಟಿದಾಗ ಅವರಿಗೆ ಇಟ್ಟ ಸುನಿಲ್. ಆದ್ರೆ ಆಮೇಲೆ ಸುನಿಲ್‌ಗೆ ಮೂರು ವರ್ಷವಾದಾಗ ಅವನ ತಾತನ ಹೆಸರು 'ರಾಮಕೃಷ್ಣ' ಅಂತ ಬದಲಾಯಿಸಿದರು. ಶಾಲೆಯಲ್ಲೂ ಸುನಿಲ್‌ಗೆ ಅದೇ ಹೆಸರಿತ್ತು. ಸಿನಿಮಾರಂಗಕ್ಕೆ ಕಾಲಿಡುವಾಗ ಮತ್ತೆ ಸುನೀಲ್​ ಅಂತ ಬದಲಾಯಿಸಿಕೊಂಡರು' ಎಂದಿದ್ದಾರೆ ಸಚಿನ್. 

ಕಲಾವಿದರ ದುನಿಯಾ ಕಂಡು ಕಂಗಾಲಾಬೇಡಿ; 'ಸತ್ಯಂ ಶಿವಂ' ಬರ್ತಿದೆ, ಸೈಡ್‌ಗೆ ಹೋಗ್ಬೇಡಿ, ನೋಡಿ!

'ನಾನು ಈಗ ಕುಳಿತು ಯೋಚಿಸಿದರೆ ನನಗೆ ಅಪಘಾತಕ್ಕೆ ನಿಜವಾದ ಕಾರಣ ಏನು ಎಂಬುದು ಹೊಳೆಯುತ್ತಿಲ್ಲ. ಏಕೆಂದರೆ, ಮಾಲಾಶ್ರೀ ಸೇರದಂತೆ ಡ್ರೈವರ್ ಕೂಡ ಅಪಘಾತದಲ್ಲಿ ತೀವ್ರ ಗಾಯಗೊಂಡು ತಕ್ಷಣವೇ ಪ್ರಜ್ಞೆ ಕಳೆದುಕೊಮಡಿದ್ದರಂತೆ. ನನಗಂತೂ ಎಚ್ಚರವಾಗಿದ್ದೇ ತುಂಬಾ ದಿನಗಳ ಬಳಿಕ. ಹಾಗಿದ್ದರೆ, ಆಕ್ಸಿಡೆಂಟ್ ಆಗಲು ಏನು ಕಾರಣ? ಡ್ರೈವರ್‌ಗೆ ನಿದ್ದೆ ಬಂದಿತ್ತೇ? ಡ್ರೈವರ್‌ ಸೀಟಿನಲ್ಲಿ ಸ್ವತಃ ಡ್ರೈವರ್‌ ಕುಳಿತಿದ್ದರು ಎಂಬುದು ಆಮೇಲೂ ತಿಳಿದಿದೆ. ಹಾಗಿದ್ದರೆ, ಏನಾಯಿತು?' ಸಚಿನ್‌ಗೂ ಈಗಲೂ ಅದು ಉತ್ತರ ಸಿಗದ ಪ್ರಶ್ನೆಯಾಗಿಯೇ ಕಾಡುತ್ತಿದೆಯಂತೆ!

Follow Us:
Download App:
  • android
  • ios