ಬೆಂಗಳೂರು, (ಫೆ.01): ಲೋಕಸಭೆ ಚುನಾವಣೆಗೆ ಸಮೀಪಿಸುತ್ತಿದ್ದಂತೆಯೇ ಮೋದಿ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದೆ. ಕಾರ್ಮಿಕ, ರೈತ, ಮಧ್ಯಮ ವರ್ಗದವರ ಆಶಯದೊಂದಿಗೆ, ಮೇಲ್ವರ್ಗದ ಜನರಿಗೂ ಅನುಕೂಲವಾಗುವಂಥ ಅಂಶಗಳಿರುವುದು ವಿಶೇಷ. 

"

Live| Union Budget 2019: ಎಲ್ಲರಿಗೂ ಬಜೆಟ್ ಪ್ರಸಾದ, ಸರ್ವೇಜನಃ ಸುಖಿನೋಭವಂತು

 ಆದ್ರೆ, ಈ ಬಜೆಟ್‌ನ್ನು ಕೆಲವರು ಸೂಪರ್ ಡೂಪರ್ ಅಂದ್ರೆ ಇನ್ನು ಕೆಲವರು ಇದು ಚುನಾವಣೆ ಬಜೆಟ್ ಅಂತೆಲ್ಲ ವ್ಯಂಗ್ಯವಾಡಿದ್ದಾರೆ. 

ಅದರಲ್ಲೂ  ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಈ  ಬಜೆಟ್ ಸಂಬಂಧ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

ಕೇಂದ್ರದ ಈ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಗೆ ಬೇಕಾದ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ.  ವರ್ಷಕ್ಕೆ ಎರಡು ಕೋಟಿ  ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ನೀಡಿದ್ದ ಆಶ್ವಾಸನೆ ಬಗ್ಗೆ ಬಜೆಟ್ ನಲ್ಲಿ ಮಾತೆತ್ತಿಲ್ಲ ಎಂದಿದ್ದಾರೆ. 

ಕೇಂದ್ರ ಹಣಕಾಸು ಸಚಿವರು ತಮ್ಮ ಮಧ್ಯಂತರ ಬಜೆಟ್ ನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. 

ಇದಕ್ಕಾಗಿ ನಾನು 2018-19ರ ಬಜೆಟ್ ನಲ್ಲಿ ಪ್ರಕಟಿಸಿದ್ದ ರೈತ ಬೆಳಕು ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಹೀಗೆ ಸರಣಿ ಟ್ವೀಟ್ ಮೂಲಕ ಮೋದಿ ಬಜೆಟ್‌ನ ಹುಳುಕುಗಳನ್ನು ಒಂದೊಂದೆ ಹಿಡಿದು ತೋರಿಸಿದ್ದಾರೆ.